
ಕೋಟ: ಡಾ.ಶಿವರಾಮ ಕಾರಂತರ ವ್ಯಕ್ತಿತ್ವವೇ ವಿಶಿಷ್ಟವಾದದ್ದು ಅವರೊಬ್ಬ ಸಾಹಿತಿ ಎನ್ನುವುದಕ್ಕಿಂತ ಅವರೊಳಗೊಬ್ಬರ ಸಾಮಾಜಿಕ ಹೋರಾಟಗಾರನೆಂಬುವುದನ್ನು ಸಾಕ್ಷಿಕರಿಸಿದೆ ಎಂದು ಕುಂದಾಪುರದ ಶಾಸಕ ಕಿರಣ್ ಕಮಾರ್ ಕೊಡ್ಗಿ ಹೇಳಿದರು
ಮಂಗಳವಾರ ಕೋಟದ ಡಾ.ಕಾರಂತ ಥೀಂ ಪಾಕ್9ನಲ್ಲಿ
ಕೋಟತಟ್ಟು ಗ್ರಾಮಪಂಚಾಯತ್ ,ಡಾ.ಶಿವರಾಮ ಕಾರಂತ ಟ್ರಸ್ಟ್ ಉಡುಪಿ,ಡಾ.ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ ಪ್ರತಿಷ್ಠಾನ ಇವರುಗಳ ಆಶ್ರಯದಲ್ಲಿ ಡಾ.ಶಿವರಾಮ ಕಾರಂತ ಜನ್ಮದಿನೋತ್ಸವ ಇಂಪನ 2023 ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಕಾರಂತರ ಸಾಧನೆ ಮಾತಿನಿಂದ ಕೂಡಿದಲ್ಲ ಬದಲಾಗಿ ಅವರ ಕಾರ್ಯಸಾಧನೆಯ ಮೂಲಕ ಜಗತ್ತಿನ್ನು ಸ್ಪರ್ಶಿಸಿದ್ದಾರೆ. ಕೋಟ ಎಂಬ ಗ್ರಾಮೀಣ ಭಾಗದಲ್ಲಿ ಹುಟ್ಟಿ ಜಗದಗಲ ಪ್ರಸಿದ್ಧಿ ಪಡೆದಿದ್ದಾರೆ.ಅವರ ಹೆಸರಿನಲ್ಲಿ ಪ್ರಶಸ್ತಿ ಹುಟ್ಟು ಹಾಕಿ ಅರ್ಥಪೂರ್ಣ ಕಾರ್ಯಕ್ರಮವನ್ನು ನೀಡುತ್ತಿದ್ದಾರೆ ಎಂದು ಅಭಿಪ್ರಾಯಪಟ್ಟರು.
ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಕಾರಂತರೆಂದರೆ ನೇರ ನಿಷ್ಟುರವಾದಿ ಅವರಂತೆ ಬದುಕು ಕಾಣಲು ಸಾಧ್ಯವಿಲ್ಲ ಎನ್ನುವಂತ ಶ್ರೇಷ್ಠ ವ್ಯಕ್ತಿತ್ವದ ವಿವಿಧ ಕ್ಷೇತ್ರದಲ್ಲಿ ಕೈಯಾಡಿಸಿ ಯಶಸ್ಸು ಕಂಡವರಾಗಿದ್ದಾರೆ.ಬಹು ಸಂಸ್ಕ್ರತಿಯ ಈ ಭರತ ಖಂಡದಲ್ಲಿ ಕಾರಂತರ ಕೊಡುಗೆ ಅನನ್ಯವಾಗಿದೆ.ಕಾರಂತರ ಹೆಸರನ್ನು ಚಿರಸ್ಥಾಯಿಯಾಗಿಸುವ ಕೋಟ ಶ್ರೀನಿವಾಸ ಪೂಜಾರಿಯವರ ಕಾರ್ಯ ನಿಜಕ್ಕೂ ಪ್ರಶಂಸನೀಯ ಎಂದರು.
ಈ ಸಂದರ್ಭದಲ್ಲಿ ಗಾಂಧೀ ಪುರಸ್ಕಾರ ಪಡೆದ ಪಂಚಾಯತ್ ಗಳಾದ ಬ್ರಹ್ಮಾವರದ ಕೋಡಿ,ಕುಂದಾಪುರ ಶಂಕರನಾರಾಯಣ,ಹೊಸಾಡು,,ಕಾರ್ಕಳದ ನೀರೆ,ಬೈಂದೂರಿನ ಕಾಲ್ತೋಡು,ಉಡುಪಿಯ ಅಲೆವೂರು,ಹೆಬ್ರಿ ಮಡಾಮಕ್ಕಿ,ಬೆಳ್ಳೆ ಗ್ರಾಮಪಂಚಾಯತ್ ಗಳಿಗೆ ವಿಶೇಷವಾಗಿ ಗೌರವಿಸಲಾಯಿತು.
ಸಭೆಯ ಅಧ್ಯಕ್ಷತೆಯನ್ನು ಕೋಟತಟ್ಟು ಗ್ರಾಮಪಂಚಾಯತ್ ಅಧ್ಯಕ್ಷ ಸತೀಶ್ ಕುಂದರ್ ವಹಿಸಿದ್ದರು.
ಮುಖ್ಯ ಅಭ್ಯಾಗತರಾಗಿ ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ,ಉಡುಪಿಯ ಶಾಸಕ ಯಶ್ ಪಾಲ್ ಸುವರ್ಣ,ಕ.ಸಾ.ಪ ಉಡುಪಿ ಜಿಲ್ಲಾಧ್ಯಕ್ಷ ನಿಲಾವರ ಸುರೇಂದ್ರ ಅಡಿಗ,ಬ್ರಹ್ಮಾವರ ತಾ.ಪಂ ಇಒ ಎಚ್ ವಿ ಇಬ್ರಾಹಿಂಪುರ ಉಪಸ್ಥಿತರಿದ್ದರು. ಕಾರಂತ ಹುಟ್ಟೂರ ಪ್ರಶಸ್ತಿಯ ರೂವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಪ್ರಾಸ್ತಾವನೆ ಸಲ್ಲಿಸಿದರು. ಉಡುಪಿ ಕನ್ನಡ ಸಂಸ್ಕ್ರತಿ ಇಲಾಖೆಯ ನಿರ್ದೇಶಕಿ ಪೂರ್ಣಿಮಾ ಸ್ವಾಗತಿಸಿದರು. ಪ್ರತಿಷ್ಠಾನದ ಕಾರ್ಯದರ್ಶಿ ನರೇಂದ್ರ ಕುಮಾರ್ ಕೋಟ ಕಾರ್ಯಕ್ರಮ ನಿರೂಪಿಸಿದರು.ಈ ಮೊದಲು ಗಣ್ಯರಿಂದ ಕಾರಂತ ಪುತ್ಥಳಿಗೆ ಮಾಲಾರ್ಪಣೆ ಮಾಡಲಾಯಿತು.
ಕೋಟತಟ್ಟು ಗ್ರಾಮಪಂಚಾಯತ್ ಅಭಿವೃದ್ಧಿ ಅಧಿಕಾರಿ ರವೀಂದ್ರ ರಾವ್ ವಂದಿಸಿದರು.
ಕೋಟದ ಡಾ.ಕಾರಂತ ಥೀಂ ಪಾಕ್9ನಲ್ಲಿ ಕೋಟತಟ್ಟು ಗ್ರಾಮಪಂಚಾಯತ್ ,ಡಾ.ಶಿವರಾಮ ಕಾರಂತ ಟ್ರಸ್ಟ್ ಉಡುಪಿ,ಡಾ.ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ ಪ್ರತಿಷ್ಠಾನ ಇವರುಗಳ ಆಶ್ರಯದಲ್ಲಿ ಡಾ.ಶಿವರಾಮ ಕಾರಂತ ಜನ್ಮದಿನೋತ್ಸವ ಇಂಪನ 2023 ಕಾರ್ಯಕ್ರಮವನ್ನು ಕುಂದಾಪುರದ ಶಾಸಕ ಕಿರಣ್ ಕಮಾರ್ ಕೊಡ್ಗಿ ಉದ್ಘಾಟಿಸಿದರು.
Leave a Reply