
ಕೋಟ: ಸರಕಾರಿ ಪ್ರೌಢ ಶಾಲೆ ಗುಂಡ್ಮಿ ಸಾಸ್ತಾನ ಇಲ್ಲಿ ಮಹಾತ್ಮ ಗಾಂಧಿ ಹಾಗೂ ಲಾಲ್ ಬಹಾದ್ದೂರ ಶಾಸ್ತ್ರಿಯವರ ಜನ್ಮ ದಿನಾಚರಣೆಯನ್ನು ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ದೀಪ ಬೆಳಗಿಸಿ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಪಾಂಡೇಶ್ವರ ಶ್ರೀ ವಿನಾಯಕ ದೇವಸ್ಥಾನ ಚಡಗರ ಮಠದ ಅಧ್ಯಕ್ಷ ರಾಮಕೃಷ್ಣ ಚಡಗ, ಸಾಸ್ತಾನದ ಉದ್ಯಮಿಗಳಾದ ಸಾಮಾಜಿಕ ಧುರೀಣ ಡೆರಿಕ್ ಡಿಸೋಜ,ಗುಂಡ್ಮಿ ಸ್ಮಾರ್ಟ್ಯಂಗ್ ಮೆನ್ಸ್ ಅಸೋಸಿಯೇಶಯನ್ ಗೌರವಾಧ್ಯಕ್ಷ ಅಬ್ದುಲ್ ಖಾಲಿದ್ ಸಾಹೇಬ್,ಸಾಲಿಗ್ರಾಮ ಪಟ್ಟಣ ಪಂಚಾಯತ್ ನಿಕಟಪೂರ್ವ ಅಧ್ಯಕ್ಷ ಸುಲತಾ ಹೆಗ್ಡೆ, ಶಿಕ್ಷಣ ತಜ್ಞ ಗಣೇಶ್ ಜಿ. ಉಪಸ್ಥಿತರಿದ್ದರು.ಶಾಲಾ ಮುಖ್ಯ ಶಿಕ್ಷಕ ಕೆ.ಸತೀಶ ಐತಾಳ ಅಧ್ಯಕ್ಷತೆ ವಹಿಸಿದ್ದರು.
ವಿಧ್ಯಾರ್ಥಿಗಳಾದ ಸಚ್ಚಿದಾನಂದ,ಮಹಮ್ಮದ್ ಫೈಜಾನ್ ಸರ್ವಧರ್ಮ ಪ್ರಾರ್ಥನೆಗೈದರು. ಕು.ಪೃಥ್ವಿ ಹಾಗೂ ಕು. ಅನ್ನಪೂರ್ಣ ಗಾಂಧೀಜಿ ಮತ್ತು ಲಾಲ್ ಬಹಾದ್ದೂರ ಶಾಸ್ತ್ರಿಗಳ ವ್ಯಕ್ತಿತ್ವದ ಬಗ್ಗೆ ಮಾತನಾಡಿದರು.ಸಹ ಶಿಕ್ಷಕಿ ಹೆಲೆನ್ ಬಾಂಜ್ ಕಾರ್ಯಕ್ರಮ ನಿರೂಪಿಸಿ, ಶೈಲಾ ಹೊನ್ನಪ್ಪ ನಾಯಕ ಸ್ವಾಗತಿಸಿ, ಮೇಘಾ ಪಿ.ಜಿ ವಂದಿಸಿದರು.
ಸರಕಾರಿ ಪ್ರೌಢ ಶಾಲೆ ಗುಂಡ್ಮಿ ಸಾಸ್ತಾನ ಇಲ್ಲಿ ಮಹಾತ್ಮ ಗಾಂಧಿ ಹಾಗೂ ಲಾಲ್ ಬಹಾದ್ದೂರ ಶಾಸ್ತ್ರಿಯವರ ಜನ್ಮ ದಿನಾಚರಣೆಯನ್ನು ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ದೀಪ ಬೆಳಗಿಸಿ ಆಚರಿಸಲಾಯಿತು.
Leave a Reply