News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಕೋಟ ಅಮೃತೇಶ್ವರಿ ದೇಗುಲದಲ್ಲಿ ಶರನ್ನವರಾತ್ರಿ ಸಂಪನ್ನ
ಕೊನೆ ದಿನದ ಸೇವಾಕರ್ತರಾಗಿ ದೇಗುಲದ ಅಧ್ಯಕ್ಷ ಆನಂದ್ ಸಿ ಕುಂದರ್ ಭಾಗಿ

ಕೋಟ: ಶರನ್ನವರಾತ್ರಿಯ ವಿಜಯದಶಮಿ ಅಂಗವಾಗಿ ಕೋಟ ಅಮೃತೇಶ್ವರಿ ದೇಗುಲದಲ್ಲಿ ದುರ್ಗಾಹೋಮ ವಿವಿಧ ಪೂಜಾ ಕೈಂಕರ್ಯಗಳು ನೆರವೆರಿತು. ಶ್ರೀ ದೇಗುಲದ ಧಾರ್ಮಿಕ ವಿಧಿವಿಧಾನಗಳನ್ನು ವೇ.ಮೂ.ಮಧುಸೂಧನ ಬಾಯರಿ ನೇತ್ರತ್ವದಲ್ಲಿ ಜರಗಿತು.
ಸೇವಾಕರ್ತರಾಗಿ ಶ್ರೀ ದೇಗುಲದ ಆಡಳಿತ ಮಂಡಳಿಯ ಅಧ್ಯಕ್ಷ ಆನಂದ್ ಸಿ ಕುಂದರ್ ಮತ್ತು ಕುಟುಂಬಿಕರು ಭಾಗವಹಿಸಿದರು.

ಶ್ರೀ ದೇಗುಲದಲ್ಲಿ ಭಕ್ತರ ಮಹಾಪೂರ
ಶ್ರೀ ದೇಗುಲದಲ್ಲಿ ಶರನ್ನವರಾತ್ರಿ ಕೊನೆಯ ದಿನವಾದ ಮಂಗಳವಾರ ಸಹಸ್ರಾರು ಜನಸಂಖ್ಯೆಯಲ್ಲಿ ಭಕ್ತಾಧಿಗಳು ಶ್ರೀ ದೇವರ ದರ್ಶನ ಪಡೆದು ಮಹಾ ಅನ್ನಸಂತರ್ಪಣಾ ಪ್ರಸಾದ ಸ್ವೀಕರಿಸಿದರು.ಶ್ರೀ ದೇಗುಲದಿಂದ ರಾಷ್ಟ್ರೀಯ ಹೆದ್ದಾರಿಯವರೆಗೂ ಭಕ್ತಸಮೂಹ ಬಿಸಲ ಬೇಗೆ ಎನ್ನದೆ ನೆರದಿದ್ದು ವಿಶೇಷವಾಗಿತ್ತು. ಪುಷ್ಭಗಳಿಂದ ಅಲಂಕೃತಗೊಂಡ ದೇಗುಲ,ದೇವಿಗೆ ವಿಶೇಷ ಅವತಾರ ರೂಪಿಣಿಯಾಗಿ ಶೈಂಗರಿಸಲಾಗಿತ್ತು.

ಆನಂದ್ ಸಿ ಕುಂದರ್ ಕುಟುಂಬದ ಪರವಾಗಿ ಪತ್ನಿ ಗೀತಾ ಎ ಕುಂದರ್, ಪುತ್ರರಾದ ಪ್ರಶಾಂತ್ ಎ ಕುಂದರ್, ರಕ್ಷಿತ್ ಕುಂದರ್ ,ಸೊಸೆಯಂದಿರಾದ ದಿವ್ಯಲಕ್ಷ್ಮೀ,ವೈಷ್ಣವಿ ಕುಂದರ್ ಭಾಗವಹಿಸಿದ್ದರು.ದೇಗುಲದ ಆಡಳಿತ ಮಂಡಳಿಯ ಪರವಾಗಿ ಸುಬ್ರಾಯ ಆಚಾರ್,ಸತೀಶ್ ಹೆಗ್ಡೆ,ಚಂದ್ರ ಪೂಜಾರಿ, ಸುಶೀಲ ಸೋಮಶೇಖರ್, ಸುಂದರ್ , ಜ್ಯೋತಿ ಬಿ.ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

ಶರನ್ನವರಾತ್ರಿಯ ವಿಜಯದಶಮಿ ಅಂಗವಾಗಿ ಕೋಟ ಅಮೃತೇಶ್ವರಿ ದೇಗುಲದಲ್ಲಿ ದುರ್ಗಾಹೋಮ ವಿವಿಧ ಪೂಜಾ ಕೈಂಕರ್ಯಗಳು ನೆರವೆರಿತು.

Leave a Reply

Your email address will not be published. Required fields are marked *