
ಆನೇಕಲ್: ಅಂದಾಜು 12.40 ಲಕ್ಷ ಬೆಲೆ ಬಾಳುವ 6 ಡಿಯೋ ಬೈಕ್‍ಗಳನ್ನು ಕದ್ದ ಆರೋಪಿಯನ್ನು ಆನೇಕಲ್ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿ ತಮಿಳುನಾಡು ಮೂಲದ ಶೇಕ್ ಆಸಿಫ್ (23) ಸದ್ಯಕ್ಕೆ ಆನೇಕಲ್ ಗೌರೇನಹಳ್ಳಿಯಲ್ಲಿ ವಾಸವಿದ್ದ.
ಸಹಚರರೊಡನೆ ಕಳ್ಳತನಕ್ಕೆ ಇಳಿಯುತ್ತಿದ್ದ ಈತ ಈ ಹಿಂದೆ ತಮಿಳುನಾಡಿನ ಹೊಸೂರಿನಲ್ಲಿ ದರೋಡೆಗೆ ಯತ್ನಿಸಿದ್ದು, ಪ್ರತಿರೋಧಿಸಿದವರನ್ನು ಹತ್ಯೆಗೈದ ಆರೋಪ ಎದುರಿಸುತ್ತಿದ್ದಾನೆ. ಸಾಮಾನ್ಯವಾಗಿ ಡಿಯೋ ಬೈಕ್‍ಗಳನ್ನೇ ಎಲ್ಲೆಂದರಲ್ಲಿ ನುಗ್ಗಿಸಬಹುದೆಂದು ಅವುಗಳನ್ನೇ ಕದಿಯುತ್ತಿದ್ದೆ. ಬಣ್ಣ, ನಂಬರ್ ಪ್ಲೇಟ್ ಬದಲಿಸಿ ಬಳಸುತ್ತಿದ್ದೆ ಎಂದು ಆತ ಹೇಳಿದ್ದಾನೆ.
ಆರು ಬೈಕ್‍ಗಳಲ್ಲಿ ಜಿಗಣಿಯಲ್ಲಿ ಎರೆಡು, ಸೂರ್ಯನಗರ 2, ಅತ್ತಿಬೆಲೆ 1 ಮತ್ತು ಆನೇಕಲ್ ಭಾಗದಲ್ಲಿ 1 ಬೈಕ್ ಕದ್ದಿದ್ದು, ಇನ್ನೂ ಕೆಲ ಬೈಕ್‍ಗಳು ಮತ್ತು ಕೆಲ ಆರೋಪಿಗಳು ಪತ್ತೆಯಾಗಬೇಕಿವೆ ಎಂದು ಪೆÇಲೀಸರು ಹೇಳಿದ್ದಾರೆ.