
ಕೋಟ: ಜಿಲ್ಲಾ ಪಂಚಾಯತ್ ಉಡುಪಿ ಪಶುಪಾಲನಾ ಹಾಗೂ ಪಶುವೈದ್ಯ ಸೇವಾ ಇಲಾಖೆ, ಉಡುಪಿ ಪಶು ಆಸ್ಪತ್ರೆ ಕೋಟ ಹಾಗೂ ಗ್ರಾಮ ಪಂಚಾಯತ್ ಕೋಟ ಆಸ್ರಾ ಪ್ರಾಣಿ ಕಲ್ಯಾಣ ಸಂಸ್ಥೆ ಇವರ ಸಂಯುಕ್ತ ಆಶ್ರಯದಲ್ಲಿ ಕೋಟ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬೀದಿ ನಾಯಿಗಳ ಸಂತಾನ ಹರಣ ಶಸ್ತ್ರ ಚಿಕಿತ್ಸೆ ಹಾಗೂ ರೇಬಿಸ್ ಪ್ರತಿ ನಿರೋಧಕ ಲಸಿಕಾ ಕಾರ್ಯಕ್ರಮದ ಉದ್ಘಾಟನಾ ಕಾರ್ಯಕ್ರಮ ಶುಕ್ರವಾರ ಕೋಟ ಪಶು ಆಸ್ಪತ್ರೆ ವಠಾರದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಕೋಟ ಗ್ರಾಮಪಂಚಾಯತ್ ಅಧ್ಯಕ್ಷೆ ಜ್ಯೋತಿ ಬಿ ಶೆಟ್ಟಿ ಉದ್ಘಾಟಿಸಿ ಮಾತನಾಡಿ ಕೋಟ ಗ್ರಾಮಪಂಚಾಯತ್ ವ್ಯಾಪ್ತಿಯಲ್ಲಿ ಕಳೆದ ಹಲವಾರು ವರ್ಷಗಳಿಂದ ಬಿದಿನಾಯಿಗಳಿ ಸಂತಾನಹರಣ ಹಾಗೂ ವಿವಿಧ ಬಗ್ಗೆಯ ಲಸಿಕೆಯನ್ನು ಹಮ್ಮಿಕೊಳ್ಳುತ್ತಿದೆ ಇದರಿಂದ ರಸ್ತೆ ಅಪಘಾತಗಳು,ಇನ್ನಿತರ ಬಿದಿನಾಯಿಗಳ ಅವಗಡ ತಪಿದೆ ,ಈ ಯೋಜನೆಗೆ ಸರಕಾರದ ಸಹಾಯಧನ ಅಗತ್ಯತೆಯನ್ನು ಮನಗಾಣಿಸಿದರಲ್ಲದೆ ವಿಶೇಷವಾಗಿ ಆಸ್ಪತ್ರೆಯ ವೈದ್ಯಾಧಿಕಾರಿಗಳಿಗೆ ಕೃತಜ್ಞತೆ ಸಲ್ಲಿಸಿದರು.
ಬ್ರಹ್ಮಾವರ ತಾಲೂಕು ಪಶುಪಾಲನಾ ಇಲಾಖಾಧಿಕಾರಿ ಪ್ರದೀಪ್, ಕೋಟ ಗ್ರಾ.ಪಂ ಉಪಾಧ್ಯಕ್ಷ ಪಾಂಡು ಪೂಜಾರಿ,ಸದಸ್ಯರಾದ ಸಂತೋಷ್ ಪ್ರಭು,ಸುಚಿತ್ರ ಶೆಟ್ಟಿ, ವೈದ್ಯಾದಿಕಾರಿ ಅನಿಲ್ ಕುಮಾರ್,ಪಂಚಾಯತ್ ಕಾರ್ಯದರ್ಶಿ ಶೇಖರ್ ಮರವಂತೆ,ಅಸ್ರಾ ಸಂಸ್ಥೆಯ ಜಯಂತ್ ಮತ್ತಿತರರು ಉಪಸ್ಥಿತರಿದ್ದರು.
ಕೋಟ ಗ್ರಾ.ಪಂ ವ್ಯಾಪ್ತಿಯಲ್ಲಿ ಬೀದಿ ನಾಯಿಗಳ ಸಂತಾನ ಹರಣ ಶಸ್ತ್ರ ಚಿಕಿತ್ಸೆ ಹಾಗೂ ರೇಬಿಸ್ ಪ್ರತಿ ನಿರೋಧಕ ಲಸಿಕಾ ಕಾರ್ಯಕ್ರಮವನ್ನು ಕೋಟ ಗ್ರಾಮಪಂಚಾಯತ್ ಅಧ್ಯಕ್ಷೆ ಜ್ಯೋತಿ ಬಿ ಶೆಟ್ಟಿ ಉದ್ಘಾಟಿಸಿದರು. ಬ್ರಹ್ಮಾವರ ತಾಲೂಕು ಪಶುಪಾಲನಾ ಇಲಾಖಾಧಿಕಾರಿ ಪ್ರದೀಪ್, ಕೋಟ ಗ್ರಾ.ಪಂ ಉಪಾಧ್ಯಕ್ಷ ಪಾಂಡು ಪೂಜಾರಿ,ಸದಸ್ಯರಾದ ಸಂತೋಷ್ ಪ್ರಭು ಮತ್ತಿತರರು ಇದ್ದರು.
Leave a Reply