
ಸಿದ್ದಾಪುರ : ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಸಿದ್ದಾಪುರ ಸಮೀಪದಲ್ಲಿರುವ ಡಾl ಜಿ. ಶಂಕರ್ ರವರಿಂದ ಪುನರ್ ಪ್ರತಿಷ್ಠಾಪನೆಗೊಂಡ ಅಗಸ್ತ್ಯ ಋಷಿ ಮುನಿಗಳು ತಪಸ್ಸುಗೈದ ಶ್ರೀ ಕ್ಷೇತ್ರ ಹೊಳೆ ಶಂಕರನಾರಾಯಣ ದೇವಾಲಯದಲ್ಲಿ ವರ್ಷಂಪ್ರತಿ ನಡೆಯುವ ಎಳ್ಳಮಾವಾಸ್ಯೆ ಜಾತ್ರೆ ಮತ್ತು ತೀರ್ಥಸ್ಥಾನವು ಜ.11 ರಂದು ನಡೆಯಲಿರುವುದು.
ಅಂದು ಬೆಳಿಗ್ಗೆ ಸನ್ನಿಧಾನದಲ್ಲಿ ಪ್ರಾರ್ಥನೆಯೊಂದಿಗೆ ಶ್ರೀ ಉಮಾ-ರಮಾ ಸಹಿತ ಶಂಕರನಾರಾಯಣ ಸ್ವಾಮಿಯ ಪೂಜೆಯೊಂದಿಗೆ ತೀರ್ಥ ಸ್ಥಾನಕ್ಕೆ ಚಾಲನೆ ದೊರಕಲಿದೆ.
ಬೆಳಿಗ್ಗೆ 7 ರಿಂದ ಭಕ್ತಾದಿಗಳಿಗೆ ಲಘು ಉಪಹಾರ ವ್ಯವಸ್ಥೆ ನಡೆಯಲಿದೆ.


ಬೆಳಿಗ್ಗೆ 8.30 ರಿಂದ ಮಧ್ಯಾಹ್ನ 2ರ ವರೆಗೆ ಭಕ್ತಿ -ಭಾವ ಗಾನಸುಧೆ ಕಾರ್ಯಕ್ರಮ ಜರುಗಲಿರುವುದು. ಮಧ್ಯಾಹ್ನ ಶ್ರೀ ಸ್ವಾಮಿಗೆ ವಿಶೇಷ ಅಲಂಕಾರ ಪೂಜೆ, 12.30ಕ್ಕೆ ಮಹಾಪೂಜೆ, ಮಂಗಳಾರತಿ, ತೀರ್ಥ ಪ್ರಸಾದ ವಿತರಣೆ , ಬಳಿಕ ಸೇವಾಕರ್ತರಿಂದ “ಸಾರ್ವಜನಿಕ ಅನ್ನ ಸಂತರ್ಪಣೆ” ಕಾರ್ಯಕ್ರಮ ನಡೆಯಲಿರುವುದು.
ಸಂಜೆ 5 ರಿಂದ 7ರ ವರೆಗೆ ಸ್ಥಳೀಯ ಭಜನಾ ಮಂಡಳಿ ಅವರಿಂದ ಭಜನಾ ಕಾರ್ಯಕ್ರಮ. ರಾತ್ರಿ 7.30 ರಿಂದ ಶ್ರೀ ರಾಮ ಭಜನಾ ಮಂಡಳಿ ಗೋಪಾಡಿ ಇವರಿಂದ ಕುಣಿತ ಭಜನೆ ನಡೆಯಲಿರುವುದು. ಹಾಗೂ ರಾತ್ರಿ ಗಂಟೆ 9.30ಕ್ಕೆ ವಿಶೇಷ *ರಂಗಪೂಜೆ* ಜರುಗಲಿರುವುದೆಂದು ದೇವಳದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Leave a Reply