
ಕೋಟ: ಗ್ರಾಮೀಣ ಪರಿಸರಲ್ಲಿ ಕೋಟ ಮಹಿಳಾ ಮಂಡಲ ಸಮಾಜಮುಖಿ ಕಾರ್ಯ ನಿಜಕ್ಕೂ ಶ್ಲಾಘನೀಯ ಎಂದು ಕೋಟದ ಅಮೃತೇಶ್ವರಿ ದೇಗುಲದ ಮಾಜಿ ಅಧ್ಯಕ್ಷ ಆನಂದ್ ಸಿ ಕುಂದರ್ ಹೇಳಿದರು.
ಕೋಟದ ಮಹಿಳಾ ಮಂಡಲ ಇದರ 59ನೇ ವರ್ಷದ ವಾರ್ಷಿಕೋತ್ಸವದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಅಶಕ್ತರಿಗೆ ಸಹಾಯಹಸ್ತ ನೀಡುವ ಕಾರ್ಯಗಳು,ಮಹಿಳೆಯರ ಬಗ್ಗೆ ಸಾಕಷ್ಟು ಕಾರ್ಯಕ್ರಮಗಳನ್ನು ರೂಪಿಸಿ ಹಿರಿಯ ಮಹಿಳಾ ಮಂಡಲ ಎಂಬ ಪ್ರಸಿದ್ಧಿ ಪಡೆದಿದೆ ಎಂದರು.
ಈ ಸಂದರ್ಭದಲ್ಲಿ ಸಾಮಾಜಿಕ ಸೇವೆಯಲ್ಲಿ ತೊಡಗಿಕೊಂಡ ಮಹಿಳಾ ಮಂಡಲದ ಹಿರಿಯ ಪದಾಧಿಕಾರಿಗಳಾದ ಭಾಗ್ಯವಾದಿರಾಜ್ ಹಾಗೂ ವಸುಧಾ ಪ್ರಭು ಇವರುಗಳನ್ನು ಸನ್ಮಾನಿಸಲಾಯಿತು.ಅಶಕ್ತ ,ಹಾಗೂ ಅನಾರೋಗ್ಯಕ್ಕಿಡಾದವರಿಗೆ ನೆರವು ನೀಡಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಹಿಳಾಮಂಡಲ ಕೋಟ ಇದರ ಅಧ್ಯಕ್ಷೆ ಗೀತಾ ಎ ಕುಂದರ್ ವಹಿಸಿದ್ದರು.
ಪ್ರಸಿದ್ಧ ವೈದ್ಯ ಡಾ.ಸವಿತಾ ಉಪಾಧ್ಯಾ ಆಶಯದ ನುಡಿಗನ್ನಾಡಿದರು.
ಮಹಿಳಾ ಮಂಡಲದ ಹಿರಿಯ ಸದಸ್ಯೆ ಚಂದ್ರಿಕಾ ಭಟ್,ಕೋಟದ ವಿವೇಕ ವಿದ್ಯಾಸಂಸ್ಥೆಯ ಕನ್ನಡ ಪ್ರಾದ್ಯಾಪಕ ಸದಾಶಿವ ಹೊಳ್ಳ, ಉಪಸ್ಥಿತರಿದ್ದರು.ಮಹಿಳಾ ಮಂಡಲದ ಮಾಜಿ ಅಧ್ಯಕ್ಷೆ ಸುಶೀಲಸೋಮಶೇಖರ್ ಸ್ವಾಗತಿಸಿ ಪ್ರಾಸ್ತಾವನೆ ಸಲ್ಲಿಸಿದರು. ವರದಿಯನ್ನು ಕಾರ್ಯದರ್ಶಿ ಶುಭ ಅಡಿಗ ವಾಚಿಸಿದರು.ಸನ್ಮಾನ ಪತ್ರವನ್ನು ಭಾರತಿ ವಿ. ಮಯ್ಯ ವಾಚಿಸಿದರು. ಕಾರ್ಯಕ್ರಮವನ್ನು ಮಹಿಳಾ ಮಂಡಲದ ಸದಸ್ಯೆ ಸುವರ್ಣ ನಿರೂಪಿಸಿದರು.ನಂತರ ಸಾಂಸ್ಕöÈತಿಕ ಕಾರ್ಯಕ್ರಮಗಳು ಜರಗಿದವು.
ಕೋಟದ ಮಹಿಳಾ ಮಂಡಲ ಇದರ 59ನೇ ವರ್ಷದ ವಾರ್ಷಿಕೋತ್ಸವದ ಕಾರ್ಯಕ್ರಮದಲ್ಲಿ ಸಾಮಾಜಿಕ ಸೇವೆಯಲ್ಲಿ ತೊಡಗಿಕೊಂಡ ಮಹಿಳಾ ಮಂಡಲದ ಹಿರಿಯ ಪದಾಧಿಕಾರಿಗಳಾದ ಭಾಗ್ಯವಾದಿರಾಜ್ ಹಾಗೂ ವಸುಧಾ ಪ್ರಭು ಇವರುಗಳನ್ನು ಸನ್ಮಾನಿಸಲಾಯಿತು. ಪ್ರಸಿದ್ಧ ವೈದ್ಯ ಡಾ.ಸವಿತಾ ಉಪಾಧ್ಯಾ ಆಶಯದ ನುಡಿಗನ್ನಾಡಿದರು.
ಮಹಿಳಾ ಮಂಡಲದ ಹಿರಿಯ ಸದಸ್ಯೆ ಚಂದ್ರಿಕಾ ಭಟ್,ಕೋಟದ ವಿವೇಕ ವಿದ್ಯಾಸಂಸ್ಥೆಯ ಕನ್ನಡ ಪ್ರಾದ್ಯಾಪಕ ಸದಾಶಿವ ಹೊಳ್ಳ, ಉಪಸ್ಥಿತರಿದ್ದರು.
Leave a Reply