
ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ 2023-24ನೇ ಸಾಲಿನ ಪ್ರಥಮ ಹಂತ…(01.04.2022-31.03.2023) ಹಾಗೂ 15ನೇ ಹಣಕಾಸು (2022-23) ಯೋಜನೆಯ ಸಾಮಾಜಿಕ ಪರಿಶೋಧನೆಯ ಬಗ್ಗೆ “ವಿಶೇಷ ಗ್ರಾಮ ಸಭೆ”ಯು ದಿನಾಂಕ 09.01.2024 ಮಂಗಳವಾರ ಅಂಬಲಪಾಡಿ ಗ್ರಾಮ ಪಂಚಾಯತ್ ಸಭಾಭವನದಲ್ಲಿ ಜರಗಿತು.
ಈ ವಿಶೇಷ ಗ್ರಾಮ ಸಭೆಯ ಸಭಾಧ್ಯಕ್ಷತೆಯನ್ನು ವಿವೇಕಾನಂದ ಗಾಂವ್ಕರ್, ಸಹಾಯಕ ನಿರ್ಧೇಶಕರು, ಅಕ್ಷರ ದಾಸೋಹ ಇಲಾಖೆ ಇವರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸುಜಾತ ಯೋಗೀಶ್ ಉಪಾಧ್ಯಕ್ಷರಾದ ಸುಜಾತ ಸುಧಾಕರ್, ಓಂಪ್ರಕಾಶ್ ತಾಂತ್ರಿಕ ಸಹಾಯಕ ಅಭಿಯಂತರರು MGNREGA, ಸಾಮಾಜಿಕ ಪರಿಶೋಧನಾ ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕರಾದ ಪ್ರವೀಣ್ ಆಚಾರ್ಯ & ಪಂಚಾಯತ್ ಪಿಡಿಒ ವಸಂತಿ ಉಪಸ್ಥಿತರಿದ್ದರು. & ಗ್ರಾಮ ಪಂಚಾಯತ್ ಸದಸ್ಯರುಗಳಾದ ರಾಜೇಶ್ ಸುವರ್ಣ, ಹರೀಶ್ ಪಾಲನ್, ಶಶಿಧರ್ ಸುವರ್ಣ ಸೋಮನಾಥ ಬಿ.ಕೆ, ಪ್ರಮೋದ್ ಸಾಲ್ಯಾನ್, ಸುರೇಶ್ ಪೂಜಾರಿ, ಸುಮಂಗಲಾ, ಉಷಾ ಶೆಟ್ಟಿ & ಪಂಚಾಯತ್ ಸಿಬ್ಬಂದಿಗಳು, ಸಾಮಾಜಿಕ ಪರಿಶೋಧನಾ ತಂಡದ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಇಂದಿನ ಈ ವಿಶೇಷ ಗ್ರಾಮ ಸಭೆಯಲ್ಲಿ ಅಂಬಲಪಾಡಿ ಗ್ರಾಮ ಪಂಚಾಯತ್ ಉಜ್ವಲ ಸಂಜೀವಿನಿ ಒಕ್ಕೂಟದ ಅಧ್ಯಕ್ಷರಾದ ಸವಿತಾ ಸಂತೋಷ್ & ಸದಸ್ಯರು, ಅಂಗನವಾಡಿ ಕಾರ್ಯಕರ್ತೆಯರು, ನರೇಗಾ ಫಲಾನುಭವಿಗಳು ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು. ಪಿಡಿಒ ವಸಂತಿ ಅವರು ಕಾರ್ಯಕ್ರಮ ನಿರೂಪಣೆ ಮಾಡಿದರು & ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಎಲ್ಲರಿಗೂ ಧನ್ಯವಾದ ಸಲ್ಲಿಸಿದರು.
Leave a Reply