
ಕೋಟ: ಸಾಲಿಗ್ರಾಮ ಜಾತ್ರೆಯ ಕುರಿತು ಪೂರ್ವಭಾವಿ ಸಭೆ ಶುಕ್ರವಾರ ಪಟ್ಟಣಪಂಚಾಯತ್ ಸಭಾಂಗಣದಲ್ಲಿ ನಡೆಯಿತು. ಬ್ರಹ್ಮಾವರ ತಹಶಿಲ್ದಾರ್ ಶ್ರೀಕಾಂತ್.ಎಸ್.ಹೆಗ್ಡೆ ನೇತ್ರತ್ವದಲ್ಲಿ ಪಟ್ಟಣಪಂಚಾಯತ್ ಸದಸ್ಯರ ಉಪಸ್ಥಿತಿಯಲ್ಲಿ ಸಭೆಯಲ್ಲಿ ಜಾತ್ರೆಯ ಕುರಿತು ವಿಸ್ತöÈತ ಚರ್ಚೆ ನಡೆಯಿತು.
ಸಾಲಿಗ್ರಾಮ ಜಾತ್ರೆಯಲ್ಲಿ ವಿವಿಧ ಮಾರಾಟ ಮಳಿಗೆ ಸುಂಕ ಇರಿಸುವುದು, ಅಲ್ಲಿನ ಸ್ಥಳ ಸ್ವಚ್ಛಗೊಳಿಸುವುದು ಸೇರಿದಂತೆ,ವಾಹನ ನಿಲುಗಡೆ,ಪೋಲಿಸ್ ಇಲಾಖೆ ನಿಯೋಜನೆ,ಆರೋಗ್ಯ ಇಲಾಖೆ, ಮೆಸ್ಕಾಂ ಕಾರ್ಯನಿರ್ವಹಣೆ ಕುರಿತು ಚರ್ಚಿಸಿ ತಿರ್ಮಾನ ಕೈಗೊಳ್ಳಲಾಯಿತು. ಇದೇ ವೇಳೆ ಸಾಲಿಗ್ರಾಮ ದೇಗುಲದಿಂದ ಆಗಮಿಸಿದ ದೇಗುಲದ ಮ್ಯಾನೇಜರ್ ನಾಗರಾಜ್ ಹಂದೆ, ಸಿಬ್ಬಂದಿ ಶಂಕರ್ ದೇವಾಡಿಗ ಇವರುಗಳಿಗೆ ಆಡಳಿತಾಧಿಕಾರಿ ಜಾತ್ರೆ ನಿರ್ವಹಣೆ ಕುರಿತು ಮಾಹಿತಿ ಪಡೆದು ನಿರ್ದೇಶನ ನೀಡಿದರು.
ಪಟ್ಟಣ ಪಂಚಾಯತ್ ಅಧ್ಯಕ್ಷ ಉಪಾಧ್ಯಕ್ಷ ಪ್ರಕ್ರೀಯೆಗೊಳ್ಳದೆ ವರ್ಷ ಕಳೆದಿದೆ, ಆದರೆ ನಾವುಗಳು ಚುನಾಯಿತ ಸದಸ್ಯರಾಗಿ ನಮ್ಮ ಅಧಿಕಾರವನ್ನು ನಿರ್ಲಕ್ಯಿಸಲಾಗಿದೆ. ಜನಸಾಮಾನ್ಯರ ಭವಣೆ ಆಲಿಸುವ ನಮ್ಮ ಅಧಿಕಾರದ ಅವ್ಯವಸ್ಥೆಯನ್ನು ಪಟ್ಟಣ ಪಂಚಾಯತ್ ಸದಸ್ಯ ರಾಜು ಪೂಜಾರಿ ತಹಶಿಲ್ದಾರ್ರಲ್ಲಿ ಮನದಟ್ಟು ಮಾಡಿ ಇಂದು ಕರೆಯಲಾದ ಸಭೆ ಅಧಿಕೃತವೊ ಅಥವಾ ಅನಧಿಕೃತವೊ ಎಂದು ಪ್ರಶ್ನಿಸಿದರು.
ಈ ಬಗ್ಗೆ ಉತ್ತರಿಸಿದ ಆಡಳಿತಾಧಿಕಾರಿಗಳು ನಿಮ್ಮ ಅಧಿಕಾರದ ಅವ್ಯವಸ್ಥೆ ಸರಕಾರದ ಮಟ್ಟದಲ್ಲಿ ಸ್ಪಷ್ಟವಾಗಬೇಕಾಗಿದೆ ಇವತ್ತಿನ ಸಭೆ ಅಧಿಕೃತವಾಗಿದೆ. ಮಾಸಿಕ ಸಭೆ ನಡೆಸುವ ಕುರಿತು ತಿರ್ಮಾನಿಸಿ ನಿಮ್ಮ ವ್ಯಾಪ್ತಿಯ ಸಮಸ್ಯೆಗಳ ಕುರಿತು ಚರ್ಚಿಸುವಾ ದಿನಾಂಕ ನಿಗದಿಪಡಿಸಲು ಮುಖ್ಯಾಧಿಕಾರಿಗಳಿಗೆ ಸೂಚಿಸಿದರು.
ಇದೇ ವೇಳೆ ಜಾತ್ರೆ ಸಸೂತ್ರವಾಗಿಸಲು ಸದಸ್ಯರ ಬೆಂಬಲ ಹಾಗೂ ಅವರ ಮಾರ್ಗದರ್ಶನಕ್ಕೆ ಸಲಹೆ ನಿಡುವಂತೆ ಕೇಳಿಕೊಂಡರು. ಸಭೆಯಲ್ಲಿ ಮುಖ್ಯಾಧಿಕಾರಿ ಶಿವ ಎಸ್ ನಾಯ್ಕ್, ಬಿಜೆಪಿ ಹಾಗೂ ಕಾಂಗ್ರೆಸ್ ಬೆಂಬಲಿತ ಸದಸ್ಯರು,ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
ಸಾಲಿಗ್ರಾಮ ಜಾತ್ರೆಯ ಕುರಿತು ಪೂರ್ವಭಾವಿ ಸಭೆ ಬ್ರಹ್ಮಾವರ ತಹಶಿಲ್ದಾರ್ ಶ್ರೀಕಾಂತ್.ಎಸ್.ಹೆಗ್ಡೆ ನೇತ್ರತ್ವದಲ್ಲಿ ಪಟ್ಟಣಪಂಚಾಯತ್ ಸದಸ್ಯರ ಉಪಸ್ಥಿತಿಯಲ್ಲಿ ಪಟ್ಟಣಪಂಚಾಯತ್ ಸಭಾಂಗಣದಲ್ಲಿ ನಡೆಯಿತು. ಮುಖ್ಯಾಧಿಕಾರಿ ಶಿವ ಎಸ್ ನಾಯ್ಕ್, ಬಿಜೆಪಿ ಹಾಗೂ ಕಾಂಗ್ರೆಸ್ ಬೆಂಬಲಿತ ಸದಸ್ಯರು ಉಪಸ್ಥಿತರಿದ್ದರು.
Leave a Reply