Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಕೋಟ ಸಹಕಾರಿ ವ್ಯವಸಾಯಕ ಸಂಘ ಇದರ ಮಣೂರು ಶಾಖೆ ನೂತನ ಕಟ್ಟಡ, ಗೋದಾಮು, ವಾಣಿಜ್ಯ ಸಂಕೀರ್ಣದ ಶಿಲಾನ್ಯಾಸ

ಕೋಟ: ಸಹಕಾರಿ ಕ್ಷೇತ್ರದ ತಳಹದಿ ಭದ್ರತೆ ಬಹುಮುಖ್ಯವಾದದ್ದು ಈ ದಿಸೆಯಲ್ಲಿ ಕೋಟ ಸಹಕಾರಿ ಸಂಘ ಅಭಿವೃದ್ಧಿಯತ್ತ ಮುನ್ನುಗ್ಗುತ್ತಿದೆ ಇದು ಶ್ಲಾಘನೀಯ ಬೆಳವಣಿಗೆಯಾಗಿದೆ ಎಂದು ಬ್ರಹ್ಮಾವರ ಕೆಥೋಲಿಕ್ ಕ್ರೆಡಿಟ್ ಕೋ.ಸೊಸೈಟಿ ಇದರ ಅಧ್ಯಕ್ಷ ವೆಲೇರಿಯನ್ ಮೆನೆಜಸ್ ಹೇಳಿದರು.

ಭಾನುವಾರ ಕೋಟ ಸಹಕಾರಿ ವ್ಯವಸಾಯಕ ಸಂಘ ಇದರ ಮಣೂರು ಶಾಖೆ ನೂತನ ಕಟ್ಟಡ, ಗೋದಾಮು, ವಾಣಿಜ್ಯ ಸಂಕೀರ್ಣದ ಶಿಲಾನ್ಯಾಸಫಲಕವನ್ನು ಅನಾವರಣಗೈದು ಮಾತನಾಡಿ ಸಹಕಾರಿ ಕ್ಷೇತ್ರ ಎಂಬುವುದು ದೇವಾಲಯದಷ್ಟೆ ಶ್ರೇಷ್ಠತೆಯನ್ನು ಪಡೆದಿದೆ. ಪ್ರಸ್ತುತ ವಿದ್ಯಾಮಾನಗಳಲ್ಲಿ ರಾಷ್ಟಿçಕೃತ ಬ್ಯಾಂಕುಗಳಿಗೆ ಸಡ್ಡು ಹೊಡೆದು ವ್ಯವಹರಿಸಿ ಜನಸಾಮಾನ್ಯರ ಸಂಘವಾಗಿ ಗುರುತಿಸಿಕೊಂಡಿದೆ. ಗ್ರಾಮೀಣ ಹಳ್ಳಿ ಭಾಗದಲ್ಲಿ ತನ್ನ ಕಾರ್ಯವ್ಯಾಪ್ತಿಯನ್ನು ವಿಸ್ತರಿಸಿಕೊಂಡು ಜನರ ಜೀವನಾಡಿಯಾಗಿ ತನ್ನದೆ ಆದ ಸಾಧನೆಯ ಶಿಖರವನ್ನು ಏರಿದೆ ಅಲ್ಲದೆ ಈ ಸಂಘ ಇನ್ನಷ್ಟು ಎತ್ತರಕ್ಕೆ ಬೆಳೆದು ಕೃಷಿಕರ ಮನೆ ಮನೆಗೆ ಸೇವೆ ನೀಡುವ ಸಂಘವಾಗಲಿ ಎಂದು ಹಾರೈಸಿದರು. ಸಹಕಾರ ಸಂಘಗಳ ಸಹಾಯಕ ನಿಬಂಧಕ ಅರುಣ್ ಕುಮಾರ್ ಶಿಲಾನ್ಯಾಸ ನೆರವೆರಿಸಿದರು.
ಧಾರ್ಮಿಕ ವಿಧಿವಿಧಾನಗಳನ್ನು ವೇ.ಮೂಮಧುಸೂಧನ್ ಬಾಯರಿ ನೆರವೆರಿಸಿದರು.

ಸಭೆಯ ಅಧ್ಯಕ್ಷತೆಯನ್ನು ಕೋಟ ಸಹಕಾರ ವ್ಯವಸಾಯಕ ಸಂಘ ಅಧ್ಯಕ್ಷ ಜಿ.ತಿಮ್ಮ ಪೂಜಾರಿ ವಹಿಸಿದ್ದರು. ಕೋಟ ಗ್ರಾಮಪಂಚಾಯತ್ ಅಧ್ಯಕ್ಷೆ ಜ್ಯೋತಿ ಬಿ ಶೆಟ್ಟಿ ಉದ್ಘಾಟಿಸಿ ಶುಭಹಾರೈಸಿದರು. ಸಂಘದ ಉಪಾಧ್ಯಕ್ಷ ರಾಜೀವ್ ದೇವಾಡಿಗ,ಸಾಸ್ತಾನ ಸಿ ಎ ಬ್ಯಾಂಕ್ ಅಧ್ಯಕ್ಷ ಸುರೇಶ್ ಅಡಿಗ,ನಿವೃತ್ತ ಮುಖ್ಯ ಶಿಕ್ಷಕ ಎಂ.ಎನ್ ಮಧ್ಯಸ್ಥ, ನಾರಾಯಣ ಕಾರ್ವಿ,ಮಣೂರು ಮಹಾಲಿಂಗೇಶ್ವರ ದೇವಸ್ಥಾನ ಅಧ್ಯಕ್ಷ ಸತೀಶ್ ಹೆಚ್ ಕುಂದರ್,ಒಡಗಿನ ನಂದಿಕೇಶ್ವರ ದೇಗುಲದ ಮುಕ್ತೇಸರ ಜಯರಾಮ ಶೆಟ್ಟಿ, ಬಿಎಸ್ ಎನ್ ಎಲ್ ನಿವೃತ್ತ ಅಧಿಕಾರಿ ವಿಷ್ಣುಮೂರ್ತಿ ಮಯ್ಯ,ಒಡಗಿನ ನಂದಿಕೇಶ್ಚರ ದೇಗುಲದ ಪಾತ್ರಿ ಪ್ರಕಾಶ್ ಶೆಟ್ಟಿ,ಸಾಹಿತಿ ನಾರಾಯಣ ಕಾರ್ವಿ,ಸಂಘದ ನಿರ್ದೇಶಕರು ಸಿಬ್ಬಂದಿವರ್ಗ ಉಪಸ್ಥಿತರಿದ್ದರು. ಶಾಖಾ ಪ್ರಭಂಧಕ ಮಹೇಶ್ ಶೆಟ್ಟಿ ಸ್ವಾಗತಿಸಿದರು.ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶರತ್ ಕುಮಾರ್ ಶೆಟ್ಟಿ ಪ್ರಸ್ತಾವನೆ ಸಲ್ಲಿಸಿದರು.ಕಾರ್ಯಕ್ರಮವನ್ನು ಸಂಘದ ಸಿಬ್ಬಂದಿಗಳಾದ ಸುಧೀರ್ ಪೂಜಾರಿ,ಸಂಧ್ಯಾ ಶೆಟ್ಟಿ ನಿರೂಪಿಸಿದರು.

ಕೋಟ ಸಹಕಾರಿ ವ್ಯವಸಾಯಕ ಸಂಘ ಇದರ ಮಣೂರು ಶಾಖೆ ನೂತನ ಕಟ್ಟಡ, ಗೋದಾಮು, ವಾಣಿಜ್ಯ ಸಂಕೀರ್ಣದ ಶಿಲಾನ್ಯಾಸಫಲಕವನ್ನು ಬ್ರಹ್ಮಾವರ ಕೆಥೋಲಿಕ್ ಕ್ರೆಡಿಟ್ ಕೋ.ಸೊಸೈಟಿ ಇದರ ಅಧ್ಯಕ್ಷ ವೆಲೇರಿಯನ್ ಮೆನೆಜಸ್ ಅನಾವರಣಗೈದರು. ಸಹಕಾರ ಸಂಘಗಳ ಸಹಾಯಕ ನಿಬಂಧಕ ಅರುಣ್ ಕುಮಾರ್, ಸಹಕಾರ ವ್ಯವಸಾಯಕ ಸಂಘ ಅಧ್ಯಕ್ಷ ಜಿ.ತಿಮ್ಮ ಪೂಜಾರಿ, ಸಂಘದ ಉಪಾಧ್ಯಕ್ಷ ರಾಜೀವ್ ದೇವಾಡಿಗ, ಸಾಸ್ತಾನ ಸಿ ಎ ಬ್ಯಾಂಕ್ ಅಧ್ಯಕ್ಷ ಸುರೇಶ್ ಅಡಿಗ ಮತ್ತಿತರರು ಇದ್ದರು.

Leave a Reply

Your email address will not be published. Required fields are marked *