
ಕೋಟ: ಇತ್ತೀಚಿಗೆ ಮಣೂರು ಒಡಗಿನ ಶ್ರೀ ನಂದಿಕೇಶ್ವರ ದೇಗುಲದ ಜಾತ್ರೆ ಸಂಪನ್ನಗೊಂಡ ಹಿನ್ನಲ್ಲೆಯಲ್ಲಿ ಆ ದೇಗುಲವನ್ನು ಸ್ವಚ್ಛಗೊಳಿಸುವ ಕಾರ್ಯಕ್ರಮ ಭಾನುವಾರ ನಡೆಯಿತು.
ಕೋಟದ ಪಂಚವರ್ಣ ಯುವಕ ಮಂಡಲ ಹಾಗೂ ಪಂಚವರ್ಣ ಮಹಿಳಾ ಮಂಡಲ ಇದರ ಸಾರಥ್ಯದಲ್ಲಿ ಮಣೂರು ಫ್ರೆಂಡ್ಸ್ ,ಹಂದಟ್ಟು ಮಹಿಳಾ ಬಳಗ ಕೋಟ, ವಿಪ್ರ ಮಹಿಳಾ ಬಳಗ ಸಾಲಿಗ್ರಾಮ ಇವರುಗಳ ಜಂಟಿ ಆಶ್ರಯದಲ್ಲಿ 192 ನೇ ವಾರದ ಪರಿಸರಸ್ನೇಹಿ ಅಭಿಯಾನ ಕಾರ್ಯಕ್ರಮದ ಅಂಗವಾಗಿ ಹಮ್ಮಿಕೊಂಡಿತು. ಈ ಸಂದರ್ಭದಲ್ಲಿ ದೇಗುಲದ ಸುತ್ತಮುತ್ತ ಪ್ಲಾಸ್ಟಿಕ್ ಹಾಗೂ ಕಸದಿಂದ ಮುಕ್ತಗೊಳಿಸಲಾಯಿತು.

ಕೋಟದ ಪಂಚವರ್ಣ ಯುವಕ ಮಂಡಲ ಹಾಗೂ ಪಂಚವರ್ಣ ಮಹಿಳಾ ಮಂಡಲ ಇದರ ಸಾರಥ್ಯದಲ್ಲಿ ಮಣೂರು ಒಡಗಿನ ಶ್ರೀ ನಂದಿಕೇಶ್ವರ ದೇಗುಲದ ಸ್ವಚ್ಛಗೊಳಿಸುವ ಕಾರ್ಯಕ್ರಮ ನಡೆಯಿತು.
Leave a Reply