
ಕೋಟ: ಇಲ್ಲಿನ ಕೋಟ ಗ್ರಾ.ಪಂ ವ್ಯಾಪ್ತಿಯ ಮಣೂರು ಕಂಬಳಗದ್ದೆ ನಿವಾಸಿ ಸವಿತಾ ಮರಕಾಲರವರಿಗೆ ಬಾಂಧವ್ಯ ಫೌಂಡೇಶನ್‌ನಿಂದ ನೂತನ ಮನೆ ನಿರ್ಮಿಸಿದ್ದು ಇದರ ಉದ್ಘಾಟನೆ ಸಮಾರಂಭ ಭಾನುವಾರ ಜರಗಿತು. ಈ ವೇಳೆ ಮನೆಯ ಕೀ ಹಸ್ತಾಂತರಿಸುವ ಮೂಲಕ ಮನೆಯನ್ನು ಉದ್ಘಾಟಿಸಲಾಯಿತು.
ಈ ಸಂದರ್ಭದಲ್ಲಿ ರಾಜ್ಯ ಉತ್ತಮ ಪ್ರಶಸ್ತಿ ವಿಜೇತ ನರೇಂದ್ರ ಕುಮಾರ್ ಕೋಟ, ಹೃದಯ ವಿಭಾಗದಲ್ಲಿ ಪಿಎಚ್‌ಡಿ ಪದವಿದರೆ ಡಾ.ಜ್ಯೋತಿ ಸಾಮಂತ್ ಸೇರಿದಂತೆ ಮನೆ ನಿರ್ಮಾಣದ ಸ್ವಯಂ ಸೇವಕರನ್ನು ಗೌರವಿಸಲಾಯಿತು. ಇವರುಗಳನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಬಾಂಧವ್ಯ ಫೌಂಡೇಶನ್‌ನ ಸ್ಥಾಪಾಕಾಧ್ಯಕ್ಷ ದಿನೇಶ್ ಬಾಂಧವ್ಯ ಯೋಜನೆ ನೆಡೆದು ಬಂದ ಕುರಿತು ಪ್ರಾಸ್ತಾವಿಕ ಮಾತನಾಡಿದರು, ಮುಖ್ಯ ಅತಿಥಿಗಳಾಗಿ ಮಂಗಳೂರಿನ ಸೇವ್ ಲೈಫ್ ಚಾರಿಟೇಬಲ್ ಟ್ರಸ್ಟ್ನ ಅರ್ಜುನ್ ಭಂಡಾರ್ಕರ್, ಆಸರೆ ಅನಿಮಲ್ ಟ್ರಸ್ಟ್ನ ಸಾಕ್ಷಿ ಸುನೀಲ್ ಕಾಮತ್, ಉಡುಪಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ರವಿರಾಜ್ ಎಚ್ ಪಿ, ಉಡುಪಿ ಟೌನ್ ಪೊಲೀಸ್ ಠಾಣೆ ಎ.ಎಸ್.ಐ ಜಯಕರ್ ಐರೋಡಿ ಮತ್ತಿತರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಟಿವಿ ನಿರೂಪಕ ಪ್ರಣುತ್ ಗಾಣಿಗ ನಿರೂಪಿಸಿ ಧನ್ಯವಾದ ಸಮರ್ಪಿಸಿದರು.
ಇಲ್ಲಿನ ಕೋಟ ಗ್ರಾ.ಪಂ ವ್ಯಾಪ್ತಿಯ ಮಣೂರು ನಿವಾಸಿ ಸವಿತಾ ಮರಕಾಲರವರಿಗೆ ಬಾಂಧವ್ಯ ಫೌಂಡೇಶನ್‌ನಿAದ ನೂತನ ಮನೆಯ ಕೀ ಹಸ್ತಾಂತರಿಸುವ ಮೂಲಕ ಮನೆಯನ್ನು ಉದ್ಘಾಟಿಸಲಾಯಿತು. ಮುಖ್ಯ ಅತಿಥಿಗಳಾಗಿ ಮಂಗಳೂರಿನ ಸೇವ್ ಲೈಫ್ ಚಾರಿಟೇಬಲ್ ಟ್ರಸ್ಟ್ನ ಅರ್ಜುನ್ ಭಂಡಾರ್ಕರ್, ಆಸರೆ ಅನಿಮಲ್ ಟ್ರಸ್ಟ್ನ ಸಾಕ್ಷಿ ಸುನೀಲ್ ಕಾಮತ್, ಬಾಂಧವ್ಯ ಫೌಂಡೇಶನ್‌ನ ಸ್ಥಾಪಾಕಾಧ್ಯಕ್ಷ ದಿನೇಶ್ ಬಾಂಧವ್ಯ ಮತ್ತಿತರರು ಇದ್ದರು.
Leave a Reply