Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಕೋಟ ಸಹಕಾರಿ ವ್ಯವಸಾಯಕ ಸಂಘಕ್ಕೆ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಬೇಸಗರಹಳ್ಳಿ ವಿವಿದ್ಧೋಶ ಗ್ರಾಮೀಣ ಪ್ರಾಥಮಿಕ ಕೃಷಿ ಸಹಕಾರ ಸಂಘದ ಆಡಳಿತ ಮಂಡಳಿ ಸದಸ್ಯರು ಮತ್ತು ಮುಖ್ಯಕಾರ್ಯನಿರ್ವಹಣಾಧಿಕಾರಿಯವರ ಭೇಟಿ

ಕೋಟ: ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಬೇಸಗರಹಳ್ಳಿ ವಿವಿದ್ಧೋಶ ಗ್ರಾಮೀಣ ಪ್ರಾಥಮಿಕ ಕೃಷಿ ಸಹಕಾರ ಸಂಘದ ಆಡಳಿತ ಮಂಡಳಿ ಸದಸ್ಯರು ಮತ್ತು ಮುಖ್ಯಕಾರ್ಯನಿರ್ವಹಣಾಧಿಕಾರಿಯವರು ಕೋಟ ಸಹಕಾರಿ ವ್ಯವಸಾಯಕ ಸಂಘಕ್ಕೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಸಂಘದ ವ್ಯವಹಾರದ ಅಭಿವೃದ್ಧಿ ಕುರಿತು ಸಂಘದ ಅಧ್ಯಕ್ಷ ಜಿ. ತಿಮ್ಮ ಪೂಜಾರಿಯವರು ಮಾಹಿತಿ ನೀಡುವಾಗ ಸಂಘವು ರೂ.೨೨೨.೩೩ ಕೋಟಿ ಠೇವಣಾತಿ ಸಂಗ್ರಹಣೆ ಮಾಡಿ, ರೂ.೧೭೫.೮೦ ಕೋಟಿ ಸಾಲದ ಹೊರಬಾಕಿ ಹೊಂದಿದ್ದು, ರೂ. ೪೧ ಕೋಟಿ ನಿಧಿ ಮತ್ತು ೨೪೦ ಕೋಟಿಗೂ ಮಿಕ್ಕಿ ದುಡಿಯುವ ಬಂಡವಾಳ ಹೊಂದಿ, ರೂ. ೮೧ ಕೋಟಿ ಹೂಡಿಕೆ ಮಾಡಿ ಹೆಮ್ಮರವಾಗಿ ಬೆಳೆದು ಅಭಿವೃದ್ಧಿ ಪಥದಲ್ಲಿದ್ದು, ವರ್ಷಾಂತ್ಯಕ್ಕೆ ಶೇ.೯೯.೫೦% ವಸೂಲಾತಿಯ ಗುರಿ ಹೊಂದಿರುವುದಾಗಿ ತಿಳಿಸಿದರು.

ಸಂಘದ ಕಾರ್ಯವ್ಯಾಪ್ತಿ, ಶಾಖೆಗಳು ಮತ್ತು ಪಡಿತರ ಮಾರಾಟ ಮಳಿಗೆಗಳು, ಸಂಘವು ನಡೆದು ಬಂದ ದಾರಿ, ಸಂಘದ ಸ್ವಂತ ಕಟ್ಟಡಗಳು ಮತ್ತು ಗೋದಾಮುಗಳು, ಕಟ್ಟಡ ನಿರ್ಮಾಣ ಪ್ರಕ್ರಿಯೆಗಳು, ಸಂಘದ ಆಡಳಿತ ವ್ಯವಸ್ಥೆ, ಆಡಳಿತ ಮತ್ತು ಕಾರ್ಯನಿರ್ವಾಹಕ ಸಮಿತಿ ಸಭೆ, ಶಾಖೆಗಳ ವ್ಯವಹಾರದ ಕ್ರಮ ಮತ್ತು ಜವಾಬ್ದಾರಿಗಳು, ಸದಸ್ಯರುಗಳ ವ್ಯವಹಾರ ಮತ್ತು ಜವಾಬ್ದಾರಿ ಬಗ್ಗೆ ವಿವರವಾಗಿ ಮಾಹಿತಿ ನೀಡಿದರು. ಭೇಟಿ ನೀಡಿದ ಅಧಿಕಾರಿಗಳು ಚರ್ಚೆಯ ಮೂಲಕ ವಿಚಾರ ವಿನಿಮಯ ಮಾಡಿಕೊಂಡು ಸಂಘದ ವ್ಯವಸ್ಥಿತ ಕಾರ್ಯವೈಖರಿ ಬಗ್ಗೆ ಸಂತೋಷ ವ್ಯಕ್ತಪಡಿಸಿ, ಅಭಿವೃದ್ಧಿಯನ್ನು ಶ್ಲಾಘಿಸಿದರು.

ಕೃಷಿ ಸದಸ್ಯರಿಗೆ ಸಂಘದಿAದ ದೊರಕುವ ಶೂನ್ಯ ಬಡ್ಡಿ ಕೃಷಿ ಸಾಲ ಸೌಲಭ್ಯ ಮತ್ತು ಶೇ.೩% ಬಡ್ಡಿ ದರದಲ್ಲಿ ಕೃಷಿ ಪೂರಕ ಸಾಲ ವಿತರಣೆ, ಸ್ವ ಸಹಾಯ ಸಂಘ ರಚನೆ ಮತ್ತು ಸಾಲ ನೀಡುವಿಕೆ, ಸುಸ್ತಿಯಾಗಿ ದಾವಾ ದಾಖಲಾದ ಸಾಲಗಳನ್ನು ಏಕಗಂಟಿನಲ್ಲಿ ಸಾಲ ಮರುಪಾವತಿಸಿದಲ್ಲಿ ಬಡ್ಡಿ ರಿಯಾಯಿತಿ ಸೌಲಭ್ಯ, ಸಮೃದ್ದಿ ನಿಧಿ, ಕೃಷಿ ಆವರ್ತನ ನಿಧಿ, ಸದಸ್ಯ ಕಲ್ಯಾಣ ನಿಧಿ, ಜಾನುವಾರು ಮೃತ್ಯುತ್ವ ನಿಧಿಗಳ ಜೋಡಣೆ ಮತ್ತು ಅನುಷ್ಠಾನ, ಭಾರತೀಯ ಜನೌಷಧಿ ಕೇಂದ್ರದ ಮೂಲಕ ಸದಸ್ಯರಿಗೆ ನೀಡುತ್ತಿರುವ ಸೇವೆ, ಕೃಷಿ ಉಪಕರಣ ಮಾರಾಟ ಮಳಿಗೆ, ರೈತ ಸದಸ್ಯರಿಗೆ ಉಪಯೋಗವಾಗುವಂತೆ ರೈತ ಸಂಜೀವಿನಿ ಕ್ರೆಡಿಟ್ ಕಾರ್ಡು ಸಾಲ ಸೌಲಭ್ಯ, ವಾಹನ ಸೇವೆ ಇತ್ಯಾದಿಗಳ ಕುರಿತು ಸಂಘದ ಅಧ್ಯಕ್ಷರು ಮಾಹಿತಿ ನೀಡಿದರು. ಸಂಘದ ನೂತನ ವಿಶಿಷ್ಟ ಯೋಜನೆಗಳಲ್ಲಿ ಒಂದಾದ ‘ಸಕಲ’ ಕೃಷಿ ಉಪಕರಣಗಳ ಮಾರಾಟ ಮಳಿಗೆಗೆ ಭೇಟಿ ನೀಡಿ ಮೆಚ್ಚುಗೆ ವ್ಯಕ್ತಪಡಿಸಿದರು.
ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ಶರತ ಕುಮಾರ್ ಶೆಟ್ಟಿ ಇವರು ಭೇಟಿ ನೀಡಿದ ಅಧಿಕಾರಿಗಳನ್ನು ಸ್ವಾಗತಿಸಿ, ವಂದನಾರ್ಪಣೆ ನೆರವೇರಿಸಿದರು.

ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಬೇಸಗರಹಳ್ಳಿ ವಿವಿದ್ಧೋಶ ಗ್ರಾಮೀಣ ಪ್ರಾಥಮಿಕ ಕೃಷಿ ಸಹಕಾರ ಸಂಘದ ಆಡಳಿತ ಮಂಡಳಿ ಸದಸ್ಯರು ಮತ್ತು ಮುಖ್ಯಕಾರ್ಯನಿರ್ವಹಣಾಧಿಕಾರಿಯವರು ಕೋಟ ಸಹಕಾರಿ ವ್ಯವಸಾಯಕ ಸಂಘಕ್ಕೆ ಭೇಟಿ ನೀಡಿದರು.

Leave a Reply

Your email address will not be published. Required fields are marked *