
ಕೋಟ: ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ 2023-24ನೇ ಸಾಲಿನ ಅವಧಿ ಹಾಗೂ 15ನೇ ಹಣಕಾಸು ಆಯೋಗದ ಅನುದಾನದ ಬಳಕೆಯ ಸಾಮಾಜಿಕ ಪರಿಶೋಧನೆಯ ಬಗ್ಗೆ ವಿಶೇಷ ಗ್ರಾಮ ಸಭೆ ಮಂಗಳವಾರ ಪಂಚಾಯತ್ ಸಭಾಂಗಣದಲ್ಲಿ ಜರಗಿತು. ಪಂಚಾಯತ್ ಗ್ರಾಮ ಸಭೆಯ ಅಧ್ಯಕ್ಷತೆಯನ್ನು ಬ್ರಹ್ಮಾವರ ವಲಯ ಶಿಕ್ಷಣ ಸಂಯೋಜಕಿ ಪದ್ಮಾವತಿ ವಹಿಸಿದ್ದರು.
ತಾಲೂಕು ಸಂಯೋಜಕ ರಾಜು ಮೂಲ್ಯ ಸಾಮಾಜಿಕ ಪರಿಶೋಧನೆಯ ವಿವರ ನೀಡಿದರು. ಸಮಸ್ಯೆ ಆಲಿಸಿದ ಪಂಚಾಯತ್ ವ್ಯಾಪ್ತಿಯ ಮಠದತೋಟ ಶ್ರೀಧರ ಪಿ.ಎಸ್ ಮನೆಯ ಸಮೀಪ ತೋಡು ಹುಳೆತ್ತದ ಬಗ್ಗೆ ಪ್ರಸ್ತಾಪಿಸಿದ್ದಿರಿ ಆ ಭಾಗದಲ್ಲಿ ಕಾಮಗಾರಿಯೇ ನಡೆದಿಲ್ಲ ಎಂದು ಸ್ಥಳೀಯರೊರ್ವರು ಆಕ್ಷೇಪಿಸಿದರು.ಈ ಬಗ್ಗೆ ಪಂಚಾಯತ್ ಸ್ಪಷೀಕರಣ ನೀಡಿದ್ದು ಕಾಮಗಾರಿ ನಡೆದಿದೆ ದಾಖಲಾತಿ ನಮ್ಮ ಬಳಿ ಇದೆ ನೀಡುತ್ತೇವೆ ಎಂದು ಪಂಚಾಯತ್ ತಿಳಿಸಿತು.
ಹಿಂದೂ ರುದ್ರಭೂಮಿ ಭಾಗದಲ್ಲಿ ಸ್ವಚ್ಛಗೊಳಿಸುವ ಕಾರ್ಯ ಮಾಡಿ ಈ ಬಗ್ಗೆ ಪಂಚಾಯತ್ ಮುತುವರ್ಜಿ ವಹಿಸಲಿ ಎಂದು ಆ ಭಾಗದ ಗ್ರಾಮಸ್ಥರು ಮನವಿ ಮಾಡಿದರು.ಶೀಘ್ರದಲ್ಲಿ ಪರಿಹಾರ ಕಂಡಕೊಳ್ಳಲಿದೆ ಪಂಚಾಯತ್ ಸ್ಪಷ್ಟಪಡಿಸಿತು. ಕೃಷಿಯೇ ಈ ದೇಶದ ಜೀವಾಳ ಅನುತ್ತಿರಿ ಆದರೆ ಕೃಷಿ ಭೂಮಿಗೆ ಪೂರಕ ವಾತಾವರಣ ನಿರ್ಮಿಸಿ ಕಾಲು ಸಂಕ ನಿರ್ಮಾಣಕ್ಕೆ ರೈತವೊರ್ವರು ಸ್ಥಳೀಯಾಡಳಿತಕ್ಕೆ ಮನವಿ ಮಾಡಿದರು.
ಈ ಬಗ್ಗೆ ಯಾರು ಕೂಡ ಮನವಿ ಮಾಡಿಲ್ಲ ಈಗಾಗಲೇ ಅದಕ್ಕೆ ಹಣ ಕಾಯ್ದಿರಿಸಿ ಕ್ರೀಯಾಯೋಜನೆಯ ಮೂಲಕ ನಿರ್ಮಾಣ ಮಾಡುದಾಗಿ ಪಂಚಾಯತ್ ಉಪಾಧ್ಯಕ್ಷ ವೈ.ಬಿ ರಾಘವೇಂದ್ರ ಹೇಳಿದರು.
ಈ ವೇಳೆ ಶೇ.25ರ ವಿಕಲಚೇತನ ನಿಧಿಯ ಸಹಾಯಧನದ ಅಡಿಯಲ್ಲಿ ವಿಕಲಚೇತನರಿಗೆ ಚಕ್ ವಿತರಿಸಲಾಯಿತು. ಬ್ರಹ್ಮಾವರ ವಲಯ ಗ್ರಾಮ ಸಂಪನ್ಮೂಲವ್ಯಕ್ತಿಗಾಗಿ ಆಶಾ, ಉತ್ಸವ, ಕು. ರಕ್ಷಾ, ಕು. ಸುಮನ, ಕು. ಚೈತನ್ಯ, ಕು. ಶಿಲ್ಪಾ ಭಾಗವಹಿಸಿದರು. ಪಂಚಾಯತ್ ಅಧ್ಯಕ್ಷೆ ಸುಶೀಲ ಪೂಜಾರಿ ,ಪಂಚಾಯತ್ ಅಭಿವೃದ್ಧಿ ಅಧಿಕಾರಿ ಲೋಲಾಕ್ಷಿ
ಉಪಾಧ್ಯಕ್ಷ ವೈ ಬಿ ರಾಘವೇಂದ್ರ,ಪAಚಾಯತ್ ಸದಸ್ಯರು ಉಪಸ್ಥಿತರಿದ್ದರು. ಸಂಜೀವಿನಿ ಸಂಘದ ಸದಸ್ಯರು, ರೈತರು, ನೋಂದಾಯಿತ ಕೂಲಿ ಕಾರ್ಮಿಕರು, ಸಂಘ ಸಂಸ್ಥೆಯವರು ಹಾಗೂ ಗ್ರಾಮಸ್ಥರು ಭಾಗವಹಿಸಿದರು. ಸಭೆಯನ್ನು ಪಂಚಾಯತ್ ಕಾರ್ಯದರ್ಶಿ ವಿಜಯ ಭಂಢಾರಿ ನಿರ್ವಹಿಸಿದರು.
ಪಾಂಡೇಶ್ವರ ಗ್ರಾಮ ಪಂಚಾಯತ್ ಇದರ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ , 15ನೇ ಹಣಕಾಸು ಆಯೋಗದ ಅನುದಾನದ ಬಳಕೆಯ ಸಾಮಾಜಿಕ ಪರಿಶೋಧನೆಯ ವಿಶೇಷ ಗ್ರಾಮ ಸಭೆಯಲ್ಲಿಶೇ.25ರ ವಿಕಲಚೇತನ ನಿಧಿಯ ಸಹಾಯಧನದ ಅಡಿಯಲ್ಲಿ ವಿಕಲಚೇತನರಿಗೆ ಚಕ್ ವಿತರಿಸಲಾಯಿತು. ಬ್ರಹ್ಮಾವರ ವಲಯ ಶಿಕ್ಷಣ ಸಂಯೋಜಕಿ ಪದ್ಮಾವತಿ, ತಾಲೂಕು ಸಂಯೋಜಕ ರಾಜು ಮೂಲ್ಯ ,ಪಂಚಾಯತ್ ಅಧ್ಯಕ್ಷೆ ಸುಶೀಲ ಪೂಜಾರಿ, ಪಿ.ಡಿ.ಓ ಲೋಲಾಕ್ಷಿ ಪಂಚಾಯತ್ ಸದಸ್ಯರು ಉಪಸ್ಥಿತರಿದ್ದರು.














Leave a Reply