Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಸಾಲಿಗ್ರಾಮ- ಅವೈಜ್ಞಾನಿಕ ಮರಳುಗಾರಿಕೆಯ ವಿರುದ್ಧ ಗ್ರಾಮಸ್ಥರ ಪ್ರತಿಭಟನೆ

ಕೋಟ : ಅವೈಜ್ಞಾನಿಕ ಮರಳುಗಾರಿಕೆಯಲ್ಲಿ ಸ್ಥಳೀಯಾಡಳಿತ ನಿರ್ಲಕ್ಷ್ಮೀಣೆಯ ಧೋರಣೆ ಅನುಸರಿಸಿದೆ ಎಂದು ಸಾಮಾಜಿಕ ಕಾರ್ಯಕರ್ತ ನಾಗರಾಜ್ ಗಾಣಿಗ ಸಾಲಿಗ್ರಾಮ ಆರೋಪಿಸಿದರು.

ಬುಧವಾರ ಸಾಲಿಗ್ರಾಮ ಪಟ್ಟಣಪಂಚಾಯತ್ ವ್ಯಾಪ್ತಿಯ ಕಾರ್ಕಡ ಮೂಡೋಳಿ ಕಾವಡಿ ಸೇತುವೆ ಪ್ರದೇಶದ ಬಳಿ ಅಕ್ರಮವಾಗಿ ಮರಳುಗಾರಿಕೆಗೆ ಸಂಬಂಧ ಕಾರ್ಕಡ ರೈತರು ಸೇರಿದಂತೆ ಗ್ರಾಮಸ್ಥರು ಪ.ಪಂ ಎದುರು ಹಮ್ಮಿಕೊಂಡ ಪ್ರತಿಭಟನಾ ಸಭೆಯಲ್ಲಿ ಮಾತನಾಡಿ ಒರ್ವ ಸಾಮಾನ್ಯ ಮನೆ ಕಟ್ಟುವುದಾದರೆ ಸ್ಥಳೀಯಾಡಳಿತ ಲೈಸೆನ್ಸ್ ನೀಡಲು ಹಲವು ಕಾರಣಗಳ ನೆಪವೊಡ್ಡುತ್ತದೆ.

ಆದರೆ ಕಾರ್ಕಡ ಪರಿಸರದಲ್ಲಿ ಅಕ್ರಮವಾಗಿ ಮರಳುಗಾರಿಕೆ ಶಡ್ಡ ನಿರ್ಮಾಣಕ್ಕೆ ಶೀಘ್ರಗತಿಯಲ್ಲಿ ಎನ್‌ಓಸಿ ನೀಡಿ ಅಕ್ರಮ ಮರಳುಗಾರಿಕೆಗೆ ಪ್ರೋತ್ಸಾಹ ನೀಡುತ್ತಿದೆ, ಹಾಗಾದರೆ ಈ ಮರಳುಗಾರಿಕೆಗೆ ಬ್ರೇಕ್ ಹಾಕುವರಾರು ನೂರಾರು ಎಕ್ಕರೆ ಕೃಷಿ ಭೂಮಿ, ಡಾಮ್, ಸೇತುವೆಗಳಿಗೆ ಈ ಮರಳುಗಾರಿಕೆಯಿಂದ ತೊಂದರೆ ಉಂಟಾಗಲಿದೆ ಇಷ್ಟಿದ್ದು ಜಿಲ್ಲಾಡಳಿತ,ಸ್ಥಳೀಯಾಡಳಿತ ನಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂಬ ಕಾರಣ ಹೇಳುತ್ತಿದೆ ಹೀಗಾದರೆ ಜನಸಮಾನ್ಯರ ಕೃಷಿಕರ ಭವಣೆ ಆಲಿಸುವವರಾರು ಈ ಬಗ್ಗೆ ಆಡಳಿತ ವ್ಯವಸ್ಥೆ ಎಚ್ಚರ ಆಗುವುದು ಒಳಿತು ಒಂದೊಮ್ಮೆ ನಿರ್ಲಕ್ಷ ಮಾಡಿದರೆ ಮುಂದೆ ಉಗ್ರ ಸ್ವರೂಪದ ಹೋರಾಟ ನಡೆಸಲಿದ್ದೇವೆ ಎಂದು ಎಚ್ಚರಿಸಿದರು.

ಈ ಸಂದರ್ಭದಲ್ಲಿ ಗ್ರಾಮಸ್ಥರು , ರೈತ ಪ್ರತಿನಿಧಿಗಳು ಅಕ್ರಮ , ಅವೈಜ್ಞಾನಿಕ ಮರಳುಗಾರಿಕೆಯ ವಿರುದ್ಧ ಘೋಷಣೆ ಕೂಗಿ ಸಾಲಿಗ್ರಾಮ ಪ.ಪಂ ಮುಖ್ಯಾಧಿಕಾರಿ ಶಿವ ಎಸ್ ನಾಯ್ಕ್ ಮನವಿ ಸಲ್ಲಿಸಿ, ಪ್ರತಿಭಟಿಸಿದರು. ಸಾಲಿಗ್ರಾಮ ಪ.ಪಂ ವ್ಯಾಪ್ತಿಯ ಕಾರ್ಕಡ ಪರಿಸರದ ಸ್ಥಳೀಯ ಸಂಘಟನೆಗಳು, ರೈತರು ಉಪಸ್ಥಿತರಿದ್ದರು.

ಸಾಲಿಗ್ರಾಮ ಪಟ್ಟಣಪಂಚಾಯತ್ ವ್ಯಾಪ್ತಿಯ ಕಾರ್ಕಡ ಮೂಡೋಳಿ ಕಾವಡಿ ಸೇತುವೆ ಪ್ರದೇಶದ ಬಳಿ ಅಕ್ರಮವಾಗಿ ಮರಳುಗಾರಿಕೆಗೆ ಸಂಬAಧ ಕಾರ್ಕಡ ಪರಿಸರದ ರೈತರು ಸೇರಿದಂತೆ ಗ್ರಾಮಸ್ಥರು ನಡೆಸಿ ಪ್ರತಿಭಟನೆಯಲ್ಲಿ  ಸಾಲಿಗ್ರಾಮ ಪ.ಪಂ ಮುಖ್ಯಾಧಿಕಾರಿ ಶಿವ ಎಸ್ ನಾಯ್ಕ್ ಮನವಿ ಸಲ್ಲಿಸಿದರು. ಸಾಲಿಗ್ರಾಮ ಪ.ಪಂ ವ್ಯಾಪ್ತಿಯ ಕಾರ್ಕಡ ಪರಿಸರದ ಸ್ಥಳೀಯ ಸಂಘಟನೆಗಳು ,ರೈತರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *