Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಸಾಧಕರಿಗೆ ಗೌರವ ಸಲ್ಲಿಸುವುದು ಶ್ರೇಷ್ಠವಾದ ಕಾರ್ಯ  – ಗಣಪತಿ .ಟಿ.ಶ್ರೀಯಾನ್
ಮಹಾಂಕಾಳಿ ಫ್ರೆಂಡ್ಸ್ 24ನೇ ವರ್ಷೋತ್ಸವ ಸಂಭ್ರಮ

ಕೋಟ: ಸಾಧಕರನ್ನು ಗುರುತಿಸಿ ಅವರಿಗೆ ವಿಶೇಷ ಗೌರವ ಸಲ್ಲಿಸುವಕಾರ್ಯ ನಿಜಕ್ಕೂ ಪ್ರಶಂಸನೀಯ ಎಂದು ಮಾಜಿ ಜಿ.ಪಂ ಸದಸ್ಯ ಗಣಪತಿ.ಟಿ.ಶ್ರೀಯಾನ್ ಹೇಳಿದರು.
ಗುರುವಾರ ಕೊರವಡಿ ಮಲಸಾವರಿ ದೇಗುಲದ ವಠಾರದಲ್ಲಿ ಮಹಾಂಕಾಳಿ ಫ್ರೆಂಡ್ಸ್ ಕೊರವಡಿ ಇದರ 24ನೇ ವರ್ಷೋತ್ಸವ ಸಂಭ್ರಮ ನಮ್ಮೂರ ಪರ್ವ -2024 ಕಾರ್ಯಕ್ರಮದಲ್ಲಿ ಮಾತನಾಡಿ  ಸಂಘ  ಸಂಸ್ಥೆಗಳು ಗ್ರಾಮದಲ್ಲಿ ಸಾಂಸ್ಕöತಿಕ  ಚಿಂತನೆಗಳನ್ನು ಪಸರಿಸಿ  ಪ್ರೇರಣೆದಾಯಕ ಕಾರ್ಯಗಳನ್ನು ಹಮ್ಮಿಕೊಂಡು, ಈಶ್ವರ್ ಮಲ್ಪೆಯಂತಹ ಸಾಧಕರಿಗೆ ಗೌರವ ಸಲ್ಲಿಸುವ ಮಹತ್ತರವಾದ ಕಾರ್ಯಕ್ಕೆ ಸಾಕ್ಷಿಯಾಗಿರುವುದಕ್ಕೆ ಹರ್ಷ ವ್ಯಕ್ತಪಡಿಸಿದರು.ಮಹಾಂಕಾಳಿ ಫ್ರೆಂಡ್ಸ್ ಸಾಮಾಜಿಕಕೈಂಕರ್ಯ ಗ್ರಾಮದ ಏಳಿಗೆಯ ಪ್ರತೀಕವಾಗಿದೆ ಎಂದು ಶ್ಲಾಘಿಸಿದರು.

ಈ ವೇಳೆ ಸಮಾಜಸೇವಕ ಈಶ್ವರ ಮಲ್ಪೆ ವಿಶೇಷವಾಗಿ ಸನ್ಮಾನಿಸಲಾಯಿತು. ಹಾಗೂ ನಿವೃತ್ತ ಸೈನಿಕ ರವೀಂದ್ರ ಕಾಂಚನ್ ಹುಟ್ಟೂರ ಅಭಿನಂದನೆ ಸಲ್ಲಿಸಲಾಯಿತು.
ಸಭಾಧ್ಯಕ್ಷತೆಯನ್ನು ಕುಂಭಾಶಿ ಗ್ರಾ.ಪಂ ಅಧ್ಯಕ್ಷ. ಆನಂದ್ ಪೂಜಾರಿ ವಹಿಸಿದ್ದರು.

ಮುಖ್ಯ ಅಭ್ಯಾಗತರಾಗಿ  ಮಹಾಂಕಾಳಿ ದೈವಸ್ಥಾನದ ಅನುವಂಶಿಕ ಮುಕ್ತೇಸರ ಲಕ್ಷ್ಮೀ ಹತ್ವಾರ್, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೊರವಡಿ ಇದರ ಮುಖ್ಯ ಶಿಕ್ಷಕಿ ಮಾಲತಿ ಶೆಟ್ಟಿ,ಮಹಾಂಕಾಳಿ ದೈವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ಸೋಮ ಕಾಂಚನ್,ಮಹಾAಕಾಳಿ ಫ್ರೆಂಡ್ಸ್ ಅಧ್ಯಕ್ಷ ಗಣೇಶ್ ಚಂದನ್ ಮತ್ತಿತರರು ಉಪಸ್ಥಿತರಿದ್ದರು. ಫ್ರೆಂಡ್ಸ್ ಮಾಜಿ ಅಧ್ಯಕ್ಷ ವಿಜಯ ಶ್ರೀಯಾನ್ ಸ್ವಾಗತಿಸಿದರು. ಕಾರ್ಯಕ್ರಮವನ್ನು ಮಾಜಿ ಅಧ್ಯಕ್ಷ ಹರೀಶ್ ಚಂದನ್ ನಿರೂಪಿಸಿ ವಂದಿಸಿದರು.


ಮಹಂಕಾಳಿ ಫ್ರೆಂಡ್ಸ್ ಕೊರವಡಿ ಇದರ 24ನೇ ವರ್ಷೋತ್ಸವ ಸಂಭ್ರಮ ನಮ್ಮೂರ ಪರ್ವ -2024 ಕಾರ್ಯಕ್ರಮದಲ್ಲಿಸಮಾಜಸೇವಕ ಈಶ್ವರ ಮಲ್ಪೆ ವಿಶೇಷವಾಗಿ ಸನ್ಮಾನಿಸಲಾಯಿತು. ಮಾಜಿ ಜಿ.ಪಂ ಸದಸ್ಯ ಗಣಪತಿ.ಟಿ.ಶ್ರೀಯಾನ್ ,ಮಹಾಂಕಾಳಿ ದೈವಸ್ಥಾನದ ಅನುವಂಶಿಕ ಮುಕ್ತೇಸರ ಲಕ್ಷ್ಮೀ ಹತ್ವಾರ್, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೊರವಡಿ ಇದರ ಮುಖ್ಯ ಶಿಕ್ಷಕಿ ಮಾಲತಿ ಶೆಟ್ಟಿ,ಮಹಾಂಕಾಳಿ ದೈವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ಸೋಮ ಕಾಂಚನ್ ಮತ್ತಿತರರು ಇದ್ದರು.

Leave a Reply

Your email address will not be published. Required fields are marked *