Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ನೈರುತ್ಯ ಪದವೀಧರರ ಕ್ಷೇತ್ರ ಬಿಜೆಪಿ ಕಾರ್ಯಕರ್ತರು ಬೆಂಬಲಿತ ಅಭ್ಯರ್ಥಿ ರಘುಪತಿ ಭಟ್ ಹಿತೈಷಿಗಳ ಸಭೆ – ಚುನಾವಣಾ ಕಚೇರಿ ಉದ್ಘಾಟನೆ

ಕರ್ನಾಟಕ ವಿಧಾನ ಪರಿಷತ್ ಚುನಾವಣೆ -2024 ಇದರ ನೈರುತ್ಯ ಪದವೀಧರರ ಕ್ಷೇತ್ರದ ಬಿಜೆಪಿ ಕಾರ್ಯಕರ್ತರ ಬೆಂಬಲಿತ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ  ಶ್ರೀ ಕೆ. ರಘುಪತಿ ಭಟ್ ಅವರ ಹಿತೈಷಿಗಳ ಸಭೆ ಹಾಗೂ ಚುನಾವಣಾ ಕಾರ್ಯಾಲಯ ಉದ್ಘಾಟನೆ ಇಂದು ದಿನಾಂಕ 15-05-2024 ರಂದು ರಘುಪತಿ ಭಟ್ ಅವರ ಮನೆ ಶ್ರೀ-ನಿವಾಸದಲ್ಲಿ ನಡೆಯಿತು.

ಸಭೆಯಲ್ಲಿ ಮಾತನಾಡಿದ ಶ್ರೀ ಕೆ. ರಘುಪತಿ ಭಟ್ ಅವರು ನಾನು ಎಂದಿಗೂ ಬಿಜೆಪಿಯ ಕಾರ್ಯಕರ್ತ. ಬಿಜೆಪಿ ಕಾರ್ಯಕರ್ತರಿಗೆ ಅನ್ಯಾಯ ಆಗಲು ಬಿಡುವುದಿಲ್ಲ. ಬಿಜೆಪಿ ಕಾರ್ಯಕರ್ತರ ಬೆಂಬಲಿತ ಅಭ್ಯರ್ಥಿಯಾಗಿ ಮೈಸೂರಿನಲ್ಲಿ ದಿನಾಂಕ 16-05-2024 ರಂದು ಗುರುವಾರ ಮಧ್ಯಾಹ್ನ 1.00 ಗಂಟೆಗೆ ಮೆರವಣಿಗೆಯಲ್ಲಿ ತೆರಳಿ ನಾಮಪತ್ರ ಸಲ್ಲಿಸಲಾಗುವುದು. ಈ ಕಾರ್ಯಕ್ರಮ ದಲ್ಲಿ ಪಾಲ್ಗೊಂಡು ನನ್ನನ್ನು ಹಾರೈಸಿ ಎಂದು ಮನವಿ ಮಾಡಿದರು.

ಸಭೆಯಲ್ಲಿ 500ಕ್ಕೂ ಅಧಿಕ ಮಂದಿ ರಘುಪತಿ ಭಟ್ ಹಿತೈಷಿಗಳು ಭಾಗವಹಿಸಿದ್ದರು. ರಘುಪತಿ ಭಟ್ ಅವರ ಮಾತೃಶ್ರೀ ಸರಸ್ವತಿ ಭಾರಿತ್ತಾಯ ಕರಂಬಳ್ಳಿ,  ಸ್ಥಳೀಯ ಪ್ರಮುಖರಾದ ರಘುರಾಮ್ ಶೆಟ್ಟಿ ಕರಂಬಳ್ಳಿ, ಪಕ್ಷದ ಹಿರಿಯರು, ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷರಾದ  ಕೆ.ಟಿ. ಪೂಜಾರಿ, ಬಿಜೆಪಿಯ ಹಿರಿಯ ಮುಖಂಡರಾದ ಪಾಂಡುರಂಗ ಮಲ್ಪೆ, ಶಿವರಾಮ್ ಉಡುಪ, ಉಡುಪಿ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷರಾದ ಉಪೇಂದ್ರ ನಾಯಕ್, ನಿವೃತ್ತ ಉಪನ್ಯಾಸಕರಾದ ಸುರೇಂದ್ರ ಶೆಟ್ಟಿ ಕೊಕ್ಕರ್ಣೆ, ವಿಶ್ವ ಹಿಂದೂ ಪರಿಷತ್ ನ ಮಾಜಿ ಜಿಲ್ಲಾಧ್ಯಕ್ಷರಾದ ರಾಘವೇಂದ್ರ ಆಚಾರ್ಯ, ಬಿಜೆಪಿ ಮುಖಂಡರಾದ ಜಯಕರ ಆಚಾರ್ಯ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *