
ಕೋಟ: ಆನೆಗುಡ್ಡೆ ಶ್ರೀ ವಿನಾಯಕ ದೇಗುಲಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜೇಂದ್ರ ಭೇಟಿ ನೀಡಿ ಶ್ರೀ ಕ್ಷೇತ್ರದಲ್ಲಿ ನಡೆದ ವಿಶೇಷ ಪೂಜೆಯಲ್ಲಿ ಸಹಸ್ರನಾಳಿಕೇರ ಗಣಯಾಗದಲ್ಲಿ ಕುಟುಂಬ ಸಮೇತರಾಗಿ ಭಾಗಿಯಾದರು. ಈ ಸಂದರ್ಭದಲ್ಲಿ ಮಾತನಾಡಿ ರಾಘವೇಂದ್ರ ರಾಯರು ನಮ್ಮ ತಂದೆಯವರಿಗೆ ಬಹಳ ಆಪ್ತರು ತಂದೆಯವರು ಬರಲು ಸಾಧ್ಯವಾಗಲಿಲ್ಲ ನಾನು ಕುಟುಂಬ ಸಮೇತ ಬಂದಿದ್ದೇನೆ,ರಾಜ್ಯದಲ್ಲಿ ಆರು ಕ್ಷೇತ್ರಗಳಿಗೆ ಚುನಾವಣೆ ನಡೆಯುತ್ತಿದೆ.
ಬಂಡಾಯದ ಕಾರಣಕ್ಕೆ ಹೆಚ್ಚು ಹೆಚ್ಚು ಚರ್ಚೆಯಾಗುತ್ತಿದೆ
ಯಾವುದೇ ಗೊಂದಲ ಇಲ್ಲದೆ ನಮ್ಮ ಶಾಸಕರು ನಾಯಕರು ಕೆಲಸ ಮಾಡುತ್ತಿದ್ದಾರೆ ಡಾ. ಧನಂಜಯ ಸರ್ಜಿ, ಭೋಜೇಗೌಡ ಮೊದಲ ಪ್ರಶಸ್ತಿದ ಮತದಲ್ಲೇ ಗೆಲ್ಲುತ್ತಾರೆಂಬ ವಿಶ್ವಾಸ ಇದೆ,ಈಶ್ವರಪ್ಪ ಧನಂಜಯ ಸರ್ಜಿ ಬಗ್ಗೆ ಪ್ರಶ್ನೆ ಎತ್ತಿದ್ದಾರೆ ಚರ್ಚೆ ಮಾಡಿದ್ದಾರೆ. ನಾನು ದೇವಸ್ಥಾನದ ಮುಂದೆ ನಿಂತು ಹೇಳುತ್ತಿದ್ದೇನೆ, ಅಭ್ಯರ್ಥಿ ಯಾರು ಎಂದು ಚರ್ಚೆ ಆದಾಗ ಈಶ್ವರಪ್ಪನವರೇ ಡಾ. ಸರ್ಜಿ ಅವರನ್ನು ಸೂಚಿಸಿದ್ದು ಡಾ. ಧನಂಜಯ ಸರ್ಜಿ ಸಜ್ಜನರಿದ್ದಾರೆ ಅವರಿಗೆ ಅವಕಾಶ ಕೊಡಬೇಕು ಎಂದು ಅಭಿಪ್ರಾಯ ಹೇಳಿದ್ದರು. ಈಶ್ವರಪ್ಪ ಹೇಳಿದ್ದನ್ನು ಮರೆತಿದ್ದಾರೆ ಎಂದು ಭಾವಿಸುತ್ತೇನೆ, ಭಾರತೀಯ ಜನತಾ ಪಕ್ಷ ಒಟ್ಟಾಗಿ ಶ್ರಮ ಹಾಕುತ್ತಿದೆ ಅಭ್ಯರ್ಥಿಗಳನ್ನ ಗೆಲ್ಲಿಸುತ್ತದೆ. ಕಾಂಗ್ರೆಸ್ ಪಕ್ಷಕ್ಕೆ ನಿರಾಸೆ ಆಗಲಿದೆ. ಅವರು ನಂಬಿಕೊAಡ ಗ್ಯಾರೆಂಟಿ ಅವರ ಕೈ ಹಿಡಿಯಲ್ಲಾ ಆ ಯೋಜನೆ ಸಂಪೂರ್ಣ ವಿಫಲವಾಗಿದೆ. ಮತದಾರರು ಇವತ್ತು ದೇಶದ ಅಭಿವೃದ್ಧಿ ನರೇಂದ್ರ ಮೋದಿಯವರ ನಾಯಕತ್ವವನ್ನು ಮೆಚ್ಚಿ ಬಜೆಪಿಗೆ ಆಶೀರ್ವಾದ ಮಾಡಿದ್ದಾರೆ.
ನಮ್ಮ ರಾಷ್ಟಾçಧ್ಯಕ್ಷರ ಜೊತೆ ಚರ್ಚೆ, ಸಮಾಲೋಚನೆ ಮಾಡಿದ್ದೇನೆ. ಅನೇಕ ಹೆಸರುಗಳ ಬಗ್ಗೆ ಪ್ರಸ್ತಾಪ ಆಗಿದೆ. ನಾವು ಇವತ್ತು ನಿರ್ಧಾರವನ್ನು ಘೋಷಣೆ ಮಾಡ್ತೇವೆ. ಜನರನ್ನು ಮೂರ್ಖರನ್ನಾಗಿ ಮಾಡುವ ಪ್ರಯತ್ನ ಮಾಡ್ತಾ ಇದ್ದಾರೆ. ಬಹಳ ದಿನ ಅವರ ಆಟಗಳು ನಡೆಯೋದಿಲ್ಲ. ರಾಹುಲ್ ಗಾಂಧಿ ಏನು, ಅವರ ವ್ಯಕ್ತಿತ್ವ ಏನು, ಅವರ ನಾಯಕತ್ವ ಏನು ಎಷ್ಟರ ಮಟ್ಟಿಗೆ ಎಲ್ಲಾ ಕೂಡಾ ದೇಶದ ಜನ, ರಾಜ್ಯದ ಜನ ನೋಡಿದ್ದಾರೆ. ಯಾವುದೇ ಬೂಟಾಟಿಕೆ ಜನರ ಮನಸ್ಸನ್ನು ಗೆಲ್ಲೋದಕ್ಕೆ ಸಾಧ್ಯವಿಲ್ಲ ಎಂದು ಕಾಂಗ್ರೆಸ್ ವಿರುದ್ಧ ಹರಿಹಾಯ್ದರು, ಈ ಸಂದರ್ಭ ಶಾಸಕರಾದ ಕಿರಣ್ ಕುಮಾರ್ ಕೊಡ್ಗಿ,ಬಿಜೆಪಿ ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್ , ಕ್ಷೇತ್ರಾಧ್ಯಕ್ಷ ಸುರೇಶ ಶೆಟ್ಟಿ , ಮಂಗಳೂರು ಪ್ರಭಾರಿ ರಾಜೇಶ್ ಕಾವೇರಿ ಇದ್ದರು.
ಆನೆಗುಡ್ಡೆ ಶ್ರೀ ವಿನಾಯಕ ದೇಗುಲಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜೇಂದ್ರ ಭೇಟಿ ನೀಡಿ ಶ್ರೀ ಕ್ಷೇತ್ರದಲ್ಲಿ ನಡೆದ ವಿಶೇಷ ಪೂಜೆಯಲ್ಲಿ ಸಹಸ್ರನಾಳಿಕೇರ ಗಣಯಾಗದಲ್ಲಿ ಕುಟುಂಬ ಸಮೇತರಾಗಿ ಭಾಗಿಯಾದರು.
Leave a Reply