
ಬ್ರಹ್ಮಾವರ: ಇಲ್ಲಿನ ವೀರ ಮಾರುತಿ ಜಿಮ್‌ನ ಅಶೋಕ್ ໕.໖. ಅವರು ಮಧ್ಯ ಪ್ರದೇಶದ ಇ೦ದೋರ್‌ನಲ್ಲಿ ನಡೆದ ಮಾಸ್ಟರ್ಸ್ ರಾಷ್ಟ್ರೀಯ ಪವರ್ ಲಿಫ್ಟಿಂಗ್ ಚಾಂಪಿ ಯನ್‌ಷಿಪ್‌ನ ಇಕ್ವಿಪ್ಟ್ ವಿಭಾಗದ ಬೆಸ್ಟ್ ಲಿರ್ಪ್ಟ ಪ್ರಶಸ್ತಿ ತಮ್ಮದಾಗಿಸಿಕೊಂಡಿದ್ದಾರೆ.

ಎಂ-3 ವಿಭಾಗದ ಕ್ಲಾಸಿಕ್ ಮತ್ತು -ಇಕ್ವಿಪ್‌ನಲ್ಲಿ ಅಮೋಘ ಸಾಧನೆ ಮಾಡಿರುವ ಅವರು ಒಟ್ಟು ಐದು ಚಿನ್ನದ ಪದಕಗಳನ್ನು ಕೊರಳಿಗೇರಿಸಿ ಕೊಂಡಿದ್ದಾರೆ. ಇಕ್ವಿಪ್‌ನಲ್ಲಿ ಒಟ್ಟು 487.5 ಕೆ.ಜಿ ಭಾರ ಎತ್ತುವ ಮೂಲಕ ಚಿನ್ನದ ಪದಕ ಗಳಿಸಿರುವ ಅವರು ಸ್ಮಾಟ್, ಬೆಂಚ್ ಪ್ರೆಸ್ಮತ್ತು ಡೆಡ್‌ಲಿಸ್ಟ್‌ನಲ್ಲಿ ಚಿನ್ನ ಗೆದ್ದುಕೊಂಡಿದ್ದಾರೆ. ಮೂರೂ ಮಾದರಿ ಯಲ್ಲಿ ಕ್ರಮವಾಗಿ 180 ಕೆ.ಜಿ, 107.50 ಕೆ.ಜಿ, 200 ಕೆ.ಜಿ ಸಾಧನೆ ಮಾಡಿದ್ದಾರೆ. ಕ್ಲಾಸಿಕ್‌ನಲ್ಲಿ ಒಟ್ಟು 402.50 ಕೆಜಿ ಅವರ ಸಾಧನೆಯಾಗಿದ್ದು ಬೆಳ್ಳಿ ಪದಕ ಗಳಿಸಿದ್ದಾರೆ. ಡೆಡ್‌ಲಿಸ್ಟ್‌ನಲ್ಲಿ 175 ಕೆಜಿ ಭಾರ ಎತ್ತಿ ಚಿನ್ನಕ್ಕೆ ಮುತ್ತಿಟ್ಟಿರುವ ಅವರು ಸ್ಮಾಟ್‌ನಲ್ಲಿ 142.50 ಕೆ.ಜಿಯೊಂದಿಗೆ ಕಂಚಿನ ಪದಕ ಗೆದ್ದಿದ್ದಾರೆ.














Leave a Reply