
ದಿನಾಂಕ 10/08/2024 ಶನಿವಾರದಂದು “ಉಜ್ವಲ ಸಂಜೀವಿನಿ ಒಕ್ಕೂಟ”ದ ಆಶ್ರಯದಲ್ಲಿ ಅಂಬಲಪಾಡಿಯ ವಸಂತ ಮಂಟಪದಲ್ಲಿ “ಆಟಿಡೊಂಜಿ ದಿನ” ಕಾರ್ಯಕ್ರಮ ವಿಜೃಂಭಣೆಯಿಂದ ನೆರವೇರಿತು. ಕಾರ್ಯಕ್ರಮದ ಉಧ್ಘಾಟನೆಯನ್ನು ಉದ್ಯಮಿಗಳಾದ ಪ್ರಸಾದ್ ರಾಜ್ ಕಾಂಚನ್ ಅವರು ನೆರವೇರಿಸಿದರು.
ಸಮಾರಂಭದ ವೇದಿಕೆಯಲ್ಲಿ ನಗರಸಭಾ ಸದಸ್ಯರಾದ ಹರೀಶ್ ಶೆಟ್ಟಿ, ಯುವಕ ಮಂಡಲ ಅಂಬಲಪಾಡಿ ಅಧ್ಯಕ್ಷರಾದ ಹರೀಶ್ ಆಚಾರ್ಯ, N.R.L.M.ನ ಮುಖ್ಯ ಜಿಲ್ಲಾ ವ್ಯವಸ್ಥಾಪಕ ಅವಿನಾಶ್ ಸರ್, ಕ್ಲಸ್ಟರ್ ಅಧಿಕಾರಿ ಸುಜಾತ ಮೇಡಂ, ತಾಲೂಕು ಒಕ್ಕೂಟದ ಅಧ್ಯಕ್ಷರಾದ ಲತಾ ಅಶೋಕ್, ಸ್ತ್ರೀ ಶಕ್ತಿ ಸ್ವಸಹಾಯ ಸಂಘದ ನಿರ್ದೇಶಕರಾದ ಐರಿನ್ ಅಂದ್ರಾದೆ, ಉಜ್ವಲ ಸಂಜೀವಿನಿ ಒಕ್ಕೂಟದ ಅಧ್ಯಕ್ಷರಾದ ಸವಿತಾ ಸಂತೋಷ್, ಅಂಬಲಪಾಡಿ ಗ್ರಾಮ ಪಂಚಾಯತ್ ಸದಸ್ಯರಾದ ರಾಜೇಶ್ ಸುವರ್ಣ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಉದ್ಘಾಟಕರಾದ ಪ್ರಸಾದ್ ಕಾಂಚನ್ ಆಟಿಯ ದಿನದ ವಿಶೇಷತೆಯ ಬಗ್ಗೆ ಮಾತನಾಡಿದರು, ಹಿರಿಯ ಕೃಷಿಕರಿಂದ ಆಟಿಯ ದಿನದ ವಿಶೇಷತೆ ಬಗ್ಗೆ ಪಾಡ್ದನ ಹಾಡಿಸಲಾಯಿತು. ಕಾರ್ಯಕ್ರಮಕ್ಕೆ ಜನಾರ್ದನ ಮಹಾಕಾಳಿ ದೇವಸ್ಥಾನದ ಧರ್ಮದರ್ಶಿಗಳಾದ ಡಾಕ್ಟರ್ ನಿ.ಬಿ.ವಿಜಯ ಬಲ್ಲಾಳ್ ಶುಭ ಹಾರೈಸಿದರು. ಐರಿನ್ ಅಂದ್ರಾದೆ ಅವರು ಮಾತನಾಡಿ ಇಂತಹಾ ಕಾರ್ಯಕ್ರಮ ನಡೆಯುತ್ತಿರುವುದು ಪ್ರಥಮ ಬಾರಿ, ನಮ್ಮ ಅಂಬಲಪಾಡಿ ಉಜ್ವಲ ಸಂಜೀವಿನಿ ಒಕ್ಕೂಟ ರಾಜ್ಯಮಟ್ಟದಲ್ಲಿ ಹೆಸರು ಪಡೆಯಲಿ ಎಂದು ಶುಭ ಹಾರೈಸಿದರು. ಸಂಜೀವಿನಿಯ ಮೋಹಿನಿ ಭಾಸ್ಕರ್ ಎಲ್ಲರನ್ನು ಸ್ವಾಗತಿಸಿದರು.
ಶಮಿತಾರವರು ಬಗೆ ಬಗೆ ಖಾದ್ಯಗಳ ಹೆಸರುಗಳನ್ನು ತಿಳಿಸಿದರು. ಅಂಬಲಪಾಡಿ ಗ್ರಾಮ ಪಂಚಾಯತ್ ಸದಸ್ಯರಾದ ಭಾರತಿ ಭಾಸ್ಕರ್, ಹರೀಶ್ ಪಾಲನ್, ಉಷಾ ಶೆಟ್ಟಿ ಸಮಾರಂಭದಲ್ಲಿ ಉಪಸ್ಥಿತರಿದ್ದರು. “ಕೃಷಿ ಸಖಿ” ಸನ್ಮಾನವನ್ನು ಸಂಜೀವಿನಿ ಸದಸ್ಯೆಯಾದ ವಾಣಿ ಪ್ರಭಾಕರ್ ಅವರಿಗೆ ನೀಡಿ ಗೌರವಿಸಲಾಯಿತು. ಸಭಾ ಸಮಾರಂಭದ ನಂತರ ಸಂಜೀವಿನಿ ಸದಸ್ಯರು ತಯಾರಿಸಿದ ವಿವಿಧ ಬಗೆಯ ಆಟಿಯ ಖಾದ್ಯಗಳ ಸವಿಯೂಟ ನಡೆಯಿತು. ಸಂಜೀವಿನಿ ಕಾರ್ಯದರ್ಶಿ ಗೀತಾ ಹರೀಶ್ ಪಾಲನ್ ಅವರು ಕಾರ್ಯಕ್ರಮ ನಿರೂಪಿಸಿದರು. ಪುಷ್ಪಾ ಹರೀಶ್ ಆಚಾರ್ಯ ಅವರು ವಂದಿಸಿದರು.














Leave a Reply