Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಕೋಟ- ಆ್ಯನ್ಸ್ ಕ್ಲಬ್ ಕೋಟ ಸಿಟಿ: ಪದ ಪ್ರಧಾನ

ಕೋಟ: ಆ್ಯನ್ಸ್ ಕ್ಲಬ್ ಕೋಟ ಸಿಟಿ ಪದ ಪ್ರಧಾನ ಸಮಾರಂಭವು ಶನಿವಾರ  ಕೋಟ ಸಮೂದ್ಯತಾ ಬ್ಯಾಂಕ್ವೆಟ್ ಹಾಲ್‌ನಲ್ಲಿ ನಡೆಯಿತು. ಮುಖ್ಯ ಅತಿಥಿಗಳಾಗಿ  ನಿರೂಪಕಿ ಅಕ್ಷತಾ ಗಿರೀಶ್ ಮಾತನಾಡಿ ಆಧುನಿಕತೆಯ ಈ ಯುಗದಲ್ಲಿ ಮಹಿಳೆಯರು ಎಲ್ಲಾ ಕ್ಷೇತ್ರದಲ್ಲೂ ತಮ್ಮ ಛಾಪನ್ನು ಮೂಡಿಸಿದ್ದಾರೆ. ಮಹಿಳೆಯರು ಹಿಂಜರಿಕೆಯಿಂದ ಮನೆಯಲ್ಲಿಯೇ ಕುಳಿತರೆ ಏನನ್ನು ಮಾಡಲು ಸಾಧ್ಯವಿಲ್ಲ. ರೋಟರಿಯಂತ ಸಮಾಜ ಸೇವಾ ಸಂಸ್ಥೆಗಳಿಗೆ ಮಹಿಳೆಯರು ಸೇರ್ಪಡೆಗೊಂಡಾಗ ಸಮಾಜ ಸೇವೆಯಲ್ಲಿಯೂ ಕೂಡಾ ತಮ್ಮನ್ನು ತೊಡಗಿಸಿಕೊಂಡತಾಗುತ್ತದೆ. ಈ ನಿಟ್ಟಿನಲ್ಲಿ ಆ್ಯನ್ಸ್ ಕ್ಲಬ್ ಕೋಟ ಸಿಟಿ ಮಹಿಳೆಯರನ್ನು ತೊಡಗಿಸಿಕೊಂಡು ಸಮಾಜಮುಖಿ ಕೆಲಸಗಳನ್ನು ಮಾಡುತ್ತಿರುವುದು ಶ್ಲಾಘನೀಯ ಎಂದರು.

ಆ್ಯನ್ಸ್ ಕ್ಲಬ್ ನೂತನ ಅಧ್ಯಕ್ಷರಾಗಿ ರೇವತಿ ಶ್ಯಾಮಸುಂದರ್ ನಾÊರಿ ಹಾಗೂ ಕಾರ್ಯದರ್ಶಿಯಾಗಿ ಶಶಿಕಲಾ ಗಣೇಶ್ ಅಧಿಕಾರ ಸ್ವೀಕರಿಸಿದರು. ರೋಟರಿ ಕ್ಲಬ್ ಕೋಟ ಸಿಟಿ ಅಧ್ಯಕ್ಷ ಅನಿಲ್ ಸುವರ್ಣ ಪದ ಪ್ರಧಾನ ನೆರವೇರಿಸಿದರು. ಆ್ಯನ್ಸ್ ಕ್ಲಬ್ ಸಭಾಪತಿ ಚಂದ್ರಶೇಖರ್ ಮೆಂಡನ್ ಶುಭಾಶಂಸನೆ ಗೈದರು. ಹಿಂದಿನ ಸಾಲಿನ ಅಧ್ಯಕ್ಷರಾದ ರೂಪಶ್ರೀ ಶಿವಾನಂದ ನಾÊರಿ ಕಾರ್ಯದರ್ಶಿ ರೇಖಾ ಅನಿಲ್ ಸುವರ್ಣ , ಹಿಂದಿನ ಸಾಲಿನ ಸಭಾಪತಿ ಶಿವಾನಂದ ನಾÊರಿ ಉಪಸ್ಥಿತರಿದ್ದರು.

ಈ ಸಂದರ್ಭ ಕ್ರೀಡೆಯಲ್ಲಿ ರಾಷ್ಟçಮಟ್ಟದಲ್ಲಿ ಸಾಧನೆ ಮಾಡಿದ 8ನೇ ತರಗತಿ ವಿಧ್ಯಾರ್ಥಿ ಮಾಸ್ಟರ್ ಚಿನ್ಮಯಿಯವರನ್ನು ಗೌರವಿಸಲಾಯಿತು. ಹಾಗೂ ಬ್ರಾಹ್ಮಿ ಶ್ಯಾಮಸುಂದರ್ ನಾÊರಿ ಅವರ ಹುಟ್ಟು ಹಬ್ಬ ಆಚರಿಸಲಾಯಿತು. ಸ್ನೇಹಲತಾ ಉದಯ್ ಕುಮಾರ್ ಶೆಟ್ಟಿ, ಪ್ರೀತಿ ಸುಭ್ರಹ್ಮಣ್ಯ , ಜ್ಯೋತಿ ನಿತ್ಯಾನಂದ ನಾÊರಿ ಅತಿಥಿಗಳನ್ನು ಪರಿಚಯಿಸಿದರು. ಶಾರದಾ ಸತೀಶ್ ಪೂಜಾರಿ  ಪ್ರಾರ್ಥನೆ ನೆರವೇರಿಸಿದರು. ದೀಪಾ ಶರತ್ ಶೆಟ್ಟಿ ಸ್ವಾಗತಿಸಿ, ಶಶಿಕಲಾ ಗಣೇಶ್ ಧನ್ಯವಾದ ನೀಡಿದರು. ಸುನೀತಾ ಚಂದ್ರಶೇಖರ್ ಮೆಂಡನ್ ಕಾರ್ಯಕ್ರಮ ನಿರೂಪಿಸಿದರು.

ಆ್ಯನ್ಸ್ ಕ್ಲಬ್ ನೂತನ ಅಧ್ಯಕ್ಷರಾಗಿ ರೇವತಿ ಶ್ಯಾಮಸುಂದರ್ ನಾÊರಿ ಹಾಗೂ ಕಾರ್ಯದರ್ಶಿಯಾಗಿ ಶಶಿಕಲಾ ಗಣೇಶ್ ಅಧಿಕಾರ ಸ್ವೀಕರಿಸಿದರು.

Leave a Reply

Your email address will not be published. Required fields are marked *