
ನಮೋ ಫ್ರೆಂಡ್ಸ್ ಗುಂಡಿಬೈಲು ಇದರ ವತಿಯಿಂದ ದೊಡ್ಡಣಗುಡ್ಡೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಲ್ಯಾಬ್ ಉಪಕರಣಗಳ ಹಸ್ತಾಂತರ ಹಾಗೂ ವೈದ್ಯಕೀಯ ನೆರವು ವಿತರಣೆ ಕಾರ್ಯಕ್ರಮದಲ್ಲಿ ಉಡುಪಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಯಶ್ ಪಾಲ್ ಸುವರ್ಣ ಭಾಗವಹಿಸಿ ನಮೋ ಫ್ರೆಂಡ್ಸ್ ಸದಸ್ಯರ ಸಮಾಜಮುಖಿ ಕಾರ್ಯಕ್ಕೆ ಅಭಿನಂದನೆ ಸಲ್ಲಿಸಿದರು.
ಸಮಾರಂಭದಲ್ಲಿ ನಗರ ಸಭಾ ಸದಸ್ಯರಾದ ಶ್ರೀ ಪ್ರಭಾಕರ ಪೂಜಾರಿ, ನಮೋ ಫ್ರೆಂಡ್ಸ್ ಅಧ್ಯಕ್ಷರಾದ ಶ್ರೀ ವಿನಯ ಪೂಜಾರಿ, ಉದ್ಯಮಿಗಳಾದ ಶ್ರೀ ಪ್ರಭಾಕರ ಜಿ., ಶ್ರೀ ಪ್ರಸನ್ನ ಆಚಾರ್ಯ, ಶ್ರೀ ರತನ್ ಆಚಾರ್ಯ, ಶ್ರೀ ಪ್ರಕಾಶ್ ಶೆಟ್ಟಿ, ಶಾಲೆಯ ಶಿಕ್ಷಕರು, ಸಂಸ್ಥೆಯ ಸದಸ್ಯರು ಉಪಸ್ಥಿತರಿದ್ದರು.













Leave a Reply