
ಕುಂದಾಪುರ* ಇಲ್ಲಿನ ಕಂದಾವರ ಗ್ರಾಮ ಪಂಚಾಯತ್ ವ್ಯಾಪ್ತಿಯ ಉಳ್ಳೂರು-ಕಂದಾವರ ಅಂಗನವಾಡಿ ಶಾಲೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಶಿಶು ಅಭಿವೃದ್ಧಿ ಇಲಾಖೆಯ ಸಹಯೋಗದೊಂದಿಗೆ ಆಗಸ್ಟ್.7 ರಂದು ಸ್ತನ್ಯಪಾನ ಸಪ್ತಾಹ ಹಾಗೂ ವಿವಿಧ ಕೊಡುಗೆಗಳ ಹಸ್ತಾಂತರ ಕಾರ್ಯಕ್ರಮ ಜರುಗಿತು.
ರಕ್ಷಿತ್ ಶೆಟ್ಟಿ ಇವರು ಕಲಿಕಾ ಮೇಜು ನೀಡಿದರೆ, ಉಳ್ಳೂರು ಶಾಲಾ ಶಿಕ್ಷಕಿಯಾದ ಉಷಾ ಅವರು ಸ್ಕೂಲ್ ಬ್ಯಾಗ್, ಸಂಗೀತಾ ಹಾಗೂ ಭಾರತಿ ಅವರು ಸಮವಸ್ತ್ರ, ಸ್ಕಂದ ಒಕ್ಕೂಟದ ಸದಸ್ಯರು ಸಮವಸ್ತ್ರದ ಜೊತೆ ಸ್ಟೀಲ್ ಬುಟ್ಟಿ, ರಾಜೇಶ್ ಅರಳಿಕಟ್ಟೆ ಫ್ಯಾನ್ ಹಾಗೂ ವಿಜಯಾ ಗಣೇಶ್ ಬೋವಿ ಅವರು ಸಂಗ್ರಾಹಕ ಡಬ್ಬಿಯನ್ನು ಕೊಡುಗೆಯಾಗಿ ನೀಡಿದರು.
ಬಾಲ ವಿಕಾಸ ಸಮಿತಿ ಅಧ್ಯಕ್ಷರಾದ ಸವಿತಾ ಪೂಜಾರಿಯವರು ಕಾರ್ಯಕ್ರಮ ಉದ್ಘಾಟಿಸಿದ್ದರು. ಅಧ್ಯಕ್ಷತೆ ವಹಿಸಿದ್ದ ಈ ಸಭೆಯಲ್ಲಿ ಅಂಗನವಾಡಿ ಪುಟಾಣಿಗಳು ಪ್ರಾರ್ಥನೆ ಮಾಡಿ, ಅಂಗನವಾಡಿ ಕಾರ್ಯಕರ್ತೆ ಇಂದಿರಾ ಸ್ವಾಗತಿಸಿ ನಿರೂಪಿಸಿದರು.
ಮಹಿಳಾ ಮತ್ತು ಮಕ್ಕಳ ಇಲಾಖೆಯ ಮೇಲ್ವಿಚಾರಕಿ ಪ್ರಭಾವತಿ ಶೆಟ್ಟಿ ಅವರು ಪ್ರಸ್ತಾವಿಸಿ, ಸ್ತನ್ಯಪಾನದ ಬಗ್ಗೆ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಪಂಚಾಯತ್ ಸದಸ್ಯೆ ಜಯಶ್ರೀ ಆರ್ ಶೆಟ್ಟಿ, ಸುಬ್ರಹ್ಮಣ್ಯ ಶೆರಿಗಾರ್ , ಆಶಾ ಕಾರ್ಯಕರ್ತೆ ಜ್ಯೋತಿ, ಕಾರ್ತಿಕ್ ದೇವಾಡಿಗ , ಸತ್ಯನಾರಾಯಣ ಅಡಿಗ ಉಪಸ್ಥಿತರಿದ್ದರು.













Leave a Reply