
ಕೋಟ: ಪ್ರತಿಯೊಬ್ಬರಲ್ಲೂ ಸ್ವಚ್ಛಾಗೃಹಿ ಮನಸ್ಸು ಸೃಷ್ಠಿಯಾದಾಗ ಪರಿಸರ ತನ್ನಿಂತಾನೆ ಸ್ವಚ್ಛವಾಗುತ್ತದೆ ಎಂದು ತೆಕ್ಕಟ್ಟೆ ಗ್ರಾಮಪಂಚಾಯತ್ ಎಸ್‌ಎಲ್‌ಆರ್‌ಎಂ ಘಟಕ ಮುಖ್ಯಸ್ಥೆ ರೇವತಿ ತೆಕ್ಕಟ್ಟೆ ಅಭಿಪ್ರಾಯಪಟ್ಟರು.
ಭಾನುವಾರ ತೆಕ್ಕಟ್ಟೆ ಗ್ರಾ.ಪಂ ವ್ಯಾಪ್ತಿಯ ಕೊಮೆ ಬೀಚ್ ನಲ್ಲಿ ಜಿಲ್ಲಾಡಳಿತದ ನಿರ್ದೇಶನದ ಮೇರೆಗೆ ತೆಕ್ಕಟ್ಟೆ ಗ್ರಾಮಪಂಚಾಯತ್ ಎಸ್‌ಎಲ್‌ಆರ್‌ಎಂ ಘಟಕ ತೆಕ್ಕಟ್ಟೆ ಪಂಚಾಯತ್ ಇದರ ನೇತೃತ್ವದಲ್ಲಿ ಸ್ವಚ್ಛ ಕಡಲಕಿನಾರೆ ಕಾರ್ಯಕ್ರಮದಲ್ಲಿ ಮಾತನಾಡಿ ತ್ಯಾಜ್ಯ ಎಸೆಯುವ ಮನಸ್ಥಿತಿ ಮೊದಲು ತೊಲಗಬೇಕು ಪ್ರಸ್ತುತ ಅತಿಯಾದ ಪ್ಲಾಸ್ಟಿಕ್ ತ್ಯಾಜ್ಯ ಸಮುದ್ರದ ಪಾಲಾಗುತ್ತಿದೆ ಇದಕ್ಕೆ ನಮ್ಮ ಮನುಕುಲಮನೋ ದೌರ್ಬಲ್ಯವೇ ಕಾರಣ ಈ ಹಿನ್ನಲ್ಲೆಯಲ್ಲಿ ಸಾಕಷ್ಟು ಪ್ರಾಕೃತಿಕ ವಿಕೋಪಗಳು ಸಂಭವಿಸುತ್ತಿದೆ ಎಂದು ಖೇಧ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮೈತ್ರೇಯ ಆಯುರ್ವೇದ ಆಶ್ರಮ ಕೊಮೆ ಇದರ ಮುಖ್ಯಸ್ಥ ತನ್ಮಯ್ ಗೋ ಸ್ವಾಮೀ ,ವೇವ್ಸ್ ಬೀಚ್ ಹೌದ್ ಮುಖ್ಯಸ್ಥ ಮಹೇಶ್ ಮಟ್ಟಿ,ತೆಕ್ಕಟ್ಟೆ ಗ್ರಾಮಪಂಚಾಯತ್ ಎಸ್ ಎಲ್ ಆರ್ ಎಂ ಘಟಕದ ಸಿಬ್ಬಂದಿವರ್ಗ ಉಪಸ್ಥಿತರಿದ್ದರು.
ತೆಕ್ಕಟ್ಟೆ ಗ್ರಾಮಪಂಚಾಯತ್ ಎಸ್‌ಎಲ್‌ಆರ್‌ಎಂ ಘಟಕ ತೆಕ್ಕಟ್ಟೆ ಪಂಚಾಯತ್ ಇದರ ನೇತೃತ್ವದಲ್ಲಿ ಸ್ವಚ್ಛ ಕಡಲಕಿನಾರೆ ಕಾರ್ಯಕ್ರಮದಲ್ಲಿ ತೆಕ್ಕಟ್ಟೆ ಗ್ರಾಮಪಂಚಾಯತ್ ಎಸ್‌ಎಲ್‌ಆರ್‌ಎಂ ಘಟಕ ಮುಖ್ಯಸ್ಥೆ ರೇವತಿ ತೆಕ್ಕಟ್ಟೆ ಮಾತನಾಡಿದರು.
ಮೈತ್ರೇಯ ಆಯುರ್ವೇದ ಆಶ್ರಮ ಕೊಮೆ ಇದರ ಮುಖ್ಯಸ್ಥ ತನ್ಮಯ್ ಗೋ ಸ್ವಾಮೀ ,ವೇವ್ಸ್ ಬೀಚ್ ಹೌದ್ ಮುಖ್ಯಸ್ಥ ಮಹೇಶ್ ಮಟ್ಟಿ ಮತ್ತಿತರರು ಇದ್ದರು.













Leave a Reply