
ಕೋಟ: ತ್ಯಾಗ ಬಲಿದಾನದ ಮೂಲಕ ಈ ದೇಶಕ್ಕೆ ಸ್ವಾತಂತ್ರ್ಯ ದೊರಕಿದೆ  ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ನುಡಿದರು. ಸಾಸ್ತಾನದ ಐರೋಡಿಯಲ್ಲಿ ರಾಜ್ಯ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ಉಪಾಧ್ಯಕ್ಷ ವಿಠ್ಠಲ್ ಪೂಜಾರಿ ಮನೆಯಂಗಳದಿ ರಾಷ್ಟç ಧ್ವಜಾರೋಹಣ ನೆರವೆರಿಸಿ ಮಾತನಾಡಿ ಸ್ವಾತಂತ್ರ÷್ಯ ಕಾಲಘಟದಿಂದ ಇಂದು ನಾವು ಬಹು ಎತ್ತರಕ್ಕೆ ಬೆಳೆದಿದ್ದೇವೆ ವಿಶ್ವ ಮಟ್ಟದಲ್ಲಿ ಭಾರತ ಮಹತ್ತರ ಪಾತ್ರ ವಹಿಸುವ ಕಾಲಘಟ್ಟಕ್ಕೆ ಬಂದು ನಿಂತಿದ್ದೇವೆ ಮಹಾನ್ ಕ್ರಾಂತಿಕಾರಿಗಳ ಹೋರಾಟದ ಫಲವಾಗಿ ವಿಶ್ವಮಟ್ಟದ ದೇಶದ ಕೀರ್ತಿಯನ್ನು ನರೇಂದ್ರ ಮೋದಿಜೀ ಪಸರಿಸಿದ್ದಾರೆ ಈ ದಿಸೆಯಲ್ಲಿ ಎಲ್ಲರೂ ಒಂದಾಗಿ ದೇಶ ಕಟ್ಟುವ ಕಾಯಕದಲ್ಲಿ ನಿರತರಾಗುವು ಆ ಮೂಲಕ ಭದ್ರ ಭಾರತವನ್ನು ನಿರ್ಮಿಸೋಣ ಎಂದು ಕರೆಕೊಟ್ಟರು.
ಈ ಸಂದರ್ಭದಲ್ಲಿ ಉದ್ಯಮಿ ಎಂ.ಸಿ ಚಂದ್ರಶೇಖರ್, ಕೋಡಿ ಪಂಚಾಯತ್ ಸದಸ್ಯ ಕೃಷ್ಣ ಪೂಜಾರಿ ಪಿ,ಐರೋಡಿ ಗ್ರಾ.ಪಂ ಸದಸ್ಯ ನಟರಾಜ್ ಗಾಣಿಗ,ಸಾಲಿಗ್ರಾಮ ಪಟ್ಟಣಪಂಚಾಯತ್ ಸದಸ್ಯ ಸಂಜೀವ ದೇವಾಡಿಗ,ಪಾಂಡೇಶ್ವರ ಗ್ರಾ.ಪಂ ಸದಸ್ಯ ಪ್ರತಾಪ್ ಶೆಟ್ಟಿ ಸಾಸ್ತಾನ ಮತ್ತಿತರರು ಇದ್ದರು
ಪ್ರಶಾಂತ್ ಪುತ್ರನ್ ಸ್ವಾಗತಿಸಿ,ಕಾರ್ಯಕ್ರಮ ಸಂಯೋಜಕ ರಾಜ್ಯ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ಉಪಾಧ್ಯಕ್ಷ ಐರೋಡಿ ವಿಠ್ಠಲ್ ಪೂಜಾರಿ ವಂದನಾರ್ಪಣೆ ಮಾಡಿದರು. ನಂತರ ಸಿಹಿ ತಿಂಡಿ ವಿತರಣೆ, ಮಲ್ಲಿಗೆ ಗಿಡದ ವಿತರಣೆ ನಡೆಯಿತು.
ಸಾಸ್ತಾನದ ಐರೋಡಿಯಲ್ಲಿ ರಾಜ್ಯ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ಉಪಾಧ್ಯಕ್ಷ ವಿಠ್ಠಲ್ ಪೂಜಾರಿ ಮನೆಯಂಗಳದಿ ರಾಷ್ಟç ಧ್ವಜಾರೋಹಣ ಸಂಸದ ಕೋಟ ಶ್ರೀನಿವಾಸ ಪೂಜಾರಿ ನೆರವೆರಿಸಿ ಮಾತನಾಡಿದರು. ಉದ್ಯಮಿ ಎಂ.ಸಿ ಚಂದ್ರಶೇಖರ್, ಕೋಡಿ ಪಂಚಾಯತ್ ಸದಸ್ಯ ಕೃಷ್ಣ ಪೂಜಾರಿ ಪಿ,ಐರೋಡಿ ಗ್ರಾ.ಪಂ ಸದಸ್ಯ ನಟರಾಜ್ ಗಾಣಿಗ ಮತ್ತಿತರರು ಇದ್ದರು.













Leave a Reply