
ಬೈಂದೂರು: ಉಡುಪಿ ಜಿಲ್ಲೆಯ ಬೈಂದೂರು ವಿಧಾನಸಭಾ ಕ್ಷೇತ್ರದ ಕುಂದಾಪುರ ತಾಲೂಕಿನ ಗಂಗೊಳ್ಳಿ ಪೊಲೀಸ್ ಠಾಣೆಗೆ ಬಹಳ ವರ್ಷದಿಂದ ನೀರಿನ ವ್ಯವಸ್ಥೆ ಇಲ್ಲದೆ ಪೊಲೀಸ್ ಸಿಬ್ಬಂದಿಗಳು ಕಷ್ಟ ಅನುಭವಿಸಿದಂತಾಗಿದೆ,
ಪೊಲೀಸ್ ಠಾಣೆಯಲ್ಲಿ ಮುಖ್ಯವಾಗಿ ಕುಡಿಯುವ ಶುದ್ಧ ನೀರು ಹಾಗೂ ಟಾಯ್ಲೆಟ್ ಬಾತ್ ರೂಮ್ ನಲ್ಲಿ ನೀರಿನ ವ್ಯವಸ್ಥೆ ಇಲ್ಲದೆ ಪೊಲೀಸರು ಅದರಲ್ಲೂ ಮಹಿಳಾ ಪೊಲೀಸ್ ಸಿಬ್ಬಂದಿ ಹೇಳಲು ಆಗದೆ ಪರದಾಡುತ್ತಿರುವ ಪರಿಸ್ಥಿತಿ ಎದುರಾಗಿದ್ದಂತು ಸತ್ಯ,
ಈ ಹಿಂದೆ ಹೊಸಡು ಗ್ರಾಮ ಪಂಚಾಯತ್ ಕಡೆಯಿಂದ ಸ್ವಲ್ಪ ನೀರು ಠಾಣೆಗೆ ಒದಗಿಸಲಾಗುತ್ತಿತ್ತು ಇತ್ತೀಚಿನ ದಿನಗಳಲ್ಲಿ ಅವರು ಸಹ ನೀರು ನೀಡದ ಹಿನ್ನೆಲೆಯಲ್ಲಿ ಪೊಲೀಸ್ ಸಿಬ್ಬಂದಿಗಳಿಗೆ ತೊಂದರೆ ಅನುಭವಿಸುವಂತಾಗಿದೆ.
ಜನಪ್ರತಿನಿಧಿಗಳೇ ದಿನದ 24 ಗಂಟೆ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸ್ ಇಲಾಖೆಗೆ ಇಂತಹ ದುಸ್ಥಿತಿ ಎದುರಾಗಿದೆ, ತಕ್ಷಣ ಸಂಬಂಧಪಟ್ಟ ಇಲಾಖೆ ಹಾಗೂ ಜನಪ್ರತಿನಿಧಿಗಳು ಇತ್ತ ಕಡೆ ಗಮನಹರಿಸಿ ಪೊಲೀಸರಿಗೆ ಆಗುತ್ತಿರುವ ತೊಂದರೆಯನ್ನು ನಿರ್ಧಾರಣೆ ಮಾಡಬೇಕೆಂದು ಸ್ಥಳೀಯ ದಲಿತ ಮುಖಂಡ , ಸಮಾಜ ಸೇವಕ ಸತೀಶ್ ಕಂಚುಗೋಡು ಮತ್ತು ಸಾರ್ವಜನಿಕರ ಮನವಿ.













Leave a Reply