
ಕೋಟ: ಆಸರೆ ಯುವಕ ಮಂಡಲ ಕಾರ್ತಟ್ಟು ಚಿತ್ರಪಾಡಿ ಇವರ ಪಂಚಮ ವರುಷದ ಸಾಂಘಿಕ ಪಯಣದ ಸವಿ ನೆನಪಿನಲ್ಲಿ ಆಸರೆ ಪಂಚಮ ಸಂಭ್ರಮ ಕಾರ್ಯಕ್ರಮವು ಆ. 15 ರಂದು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕೋಟ ಇಲ್ಲಿನ ಸಭಾಂಗಣದಲ್ಲಿ ಜರುಗಿತು.
ಕಾರ್ಯಕ್ರಮವನ್ನು ಶಾಲೆಯ ಮುಖ್ಯೋಪಾಧ್ಯಾಯರಾದ ಪುಷ್ಪಾವತಿ ಹೆಚ್ ಇವರು ಉದ್ಘಾಟಿಸಿದರು. ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕöÈತರಾದ ಯಕ್ಷಗುರು ಕೃಷ್ಣಮೂರ್ತಿ ಉರಾಳ ಚಿತ್ರಪಾಡಿ ಇವರಿಗೆ ಆಸರೆ ಪಂಚಮ ಸಂಭ್ರಮದ ಗೌರವ ಅಭಿನಂದನೆಯನ್ನು ಸಲ್ಲಿಸಲಾಯಿತು.
ಕಾರ್ಯಕ್ರಮದಲ್ಲಿ ತ್ರಿಶಿಕಾ ಪೂಜಾರಿ ಎಂಬ ಮಗುವಿನ ಚಿಕಿತ್ಸಾ ವೆಚ್ಚದ ಸಹಾಯಾರ್ಥವಾಗಿ ಹಮ್ಮಿಕ್ಕೊಂಡ ಆಸರೆ ಅದೃಷ್ಟ ಬಹುಮಾನ ಯೋಜನೆಯ ಫಲಿತಾಂಶ ಪ್ರಕಟಗೊಳಿಸಲಾಯಿತು. ಹಾಗೂ ಅದೃಷ್ಟ ಬಹುಮಾನ ಯೋಜನೆಯಿಂದ ಸಂಗ್ರಹಿಸಿದ ಮೂರು ಲಕ್ಷ ರೂಪಾಯಿ ಗಳಲ್ಲಿ ಬಹುಮಾನದ ಮೊತ್ತವನ್ನು ಹೊರತುಪಡಿಸಿ ಉಳಿದ 2,75,000/- ಮೊತ್ತವನ್ನು ಆಸರೆ ಸಹಾಯ ನಿಧಿಯಾಗಿ ಮಗುವಿನ ಪೋಷಕರಿಗೆ ಹಿರಿಯ ಸಾಹಿತಿಗಳಾದ ಚಿತ್ರಪಾಡಿ ಉಪೇಂದ್ರ ಸೋಮಯಾಜಿ ಇವರಿಂದ ಹಸ್ತಾಂತರಿಸಲಾಯಿತು.
ಮುಖ್ಯ ಅತಿಥಿಗಳಾಗಿ ಪತ್ರಕರ್ತ ಸಂಘದ ಅಧ್ಯಕ್ಷ ರಾಜೇಶ್ ಗಾಣಿಗ ಅಚ್ಲಾಡಿ ಅವರು ಉಪಸ್ಥಿತರಿದ್ದರು.
ಯುವಕ ಮಂಡಲದ ಅಧ್ಯಕ್ಷ ಯೋಗೀಶ್ ಆಚಾರ್ ಕಾರ್ಯಕ್ರಮದ ಉದ್ದೇಶ ಹಾಗೂ ಯುವಕ ಮಂಡಲದ ಕಾರ್ಯವೈಖರಿಯ ಬಗ್ಗೆ ಪ್ರಾಸ್ತಾವನೆಯ ಮೂಲಕ ಸಲ್ಲಿಸಿದರು.ಯುವಕಮಂಡಲದ ಕಾರ್ಯದರ್ಶಿ ಮಂಜುನಾಥ್ ಕಾರ್ತಟ್ಟು ಕಾರ್ಯಕ್ರಮ ನಿರೂಪಿಸಿದರು.
ಆಸರೆ ಯುವಕ ಮಂಡಲ ಕಾರ್ತಟ್ಟು ಚಿತ್ರಪಾಡಿ ಇವರ ಪಂಚಮ ವರುಷದ ಸಾಂಘಿಕ ಪಯಣದ ಸವಿ ನೆನಪಿನಲ್ಲಿ ಆಸರೆ ಪಂಚಮ ಸಂಭ್ರಮ ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕöÈತರಾದ ಯಕ್ಷಗುರು ಕೃಷ್ಣಮೂರ್ತಿ ಉರಾಳ ಚಿತ್ರಪಾಡಿ ಇವರಿಗೆ ಆಸರೆ ಪಂಚಮ ಸಂಭ್ರಮದ ಗೌರವ ಅಭಿನಂದನೆಯನ್ನು ಸಲ್ಲಿಸಲಾಯಿತು.













Leave a Reply