
ಕೋಟ: ರಕ್ಷಾ ಬಂಧನದ ಮಹತ್ವ ಅರಿತು ಅದನ್ನು ಅರ್ಥಪೂರ್ಣವಾಗಿ ಆಚರಿಸಬೇಕಾದದ್ದು ನಮ್ಮೆಲ್ಲ ಆದ್ಯ ಕರ್ತವ್ಯ ಎಂದು ಕುಂದಾಪುರ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಸೌರಭಿ ಪೈ ಹೇಳಿದರು.
ಕೋಟದ ಪಂಚವರ್ಣದ ಕಛೇರಿಯಲ್ಲಿ ಕುಂದಾಪುರ ಮಂಡಲ ಬಿಜೆಪಿ ಮಹಿಳಾ ಮೋರ್ಚಾ ವತಿಯಿಂದ ಪಂಚವರ್ಣ ಯುವಕ ಮಂಡಲ ಹಾಗೂ ಪಂಚವರ್ಣ ಮಹಿಳಾ ಮಂಡಲ ಇಲ್ಲಿ ಹಮ್ಮಿಕೊಂಡ ರಕ್ಷಾ ಬಂಧನ ಇದರ ಕಾರ್ಯಕ್ರಮದಲ್ಲಿ ಪದಾಧಿಕಾರಿಗಳಿಗೆ ಸದಸ್ಯರಿಗೆ ರಕ್ಷಾ ಬಂಧನದ ರಕ್ಷಾ ಕವಚ ನೀಡಿ ಮಾತನಾಡಿ ರಕ್ಷಾ ಬಂಧನ ಸಹೋದರತ್ವದ ಸಂಕೇತ ,ಪೌರಾಣಿಕ ಹಿನ್ನಲ್ಲೆ ಹೊಂದಿದ ಈ ರಕ್ಷಾ ಬಂಧನದ ಸಂಬAಧವನ್ನು ಮತ್ತಷ್ಟು ಗಟ್ಟಿಗೊಳಿಸುವ ಕಾರ್ಯ ನಡೆಯಲಿ ಆ ಮೂಲಕ ಸಮಾಜದಲ್ಲಿ ಶಾಂತಿ ನೆಮ್ಮದಿಯ ವಾತಾವರಣದ ಸೃಷ್ಠಿಯಾಗಲಿ ಎಂದು ಹಾರೈಸಿದರು.

ಇದೇ ವೇಳೆ ಸಂಘದ ಪದಾಧಿಕಾರಿಗಳಿಗೆ ಹಾಗೂ ಸದಸ್ಯರನ್ನು ಕುಳಿರಿಸಿ ಹಣೆಗೆ ತಿಲಕ ಇರಿಸಿ, ದೀಪದಾರತಿ ಬೆಳಗಿ ರಕ್ಷಾ ಬಂಧನದ ರಾಖಿ ಕಟ್ಟಿಸಿದರು.
ಈ ಸಂದರ್ಭದಲ್ಲಿ ಪಂಚವರ್ಣ ಸಂಸ್ಥೆಯ ಸ್ಥಾಪಾಕಾಧ್ಯಕ್ಷ ಶೇವಧಿ ಸುರೇಶ್ ಗಾಣಿಗ,ಕಾಯಾಧ್ಯಕ್ಷ ರವೀಂದ್ರ ಕೋಟ, ಸಂಚಾಲಕ ಅಮೃತ್ ಜೋಗಿ,ಪಂಚವರ್ಣ ಮಹಿಳಾ ಮಂಡಲದ ಅಧ್ಯಕ್ಷೆ ಲಲಿತಾ ಪೂಜಾರಿ, ಕಾರ್ಯದರ್ಶಿ ವಸಂತಿ, ಉಪಾಧ್ಯಕ್ಷೆ ಪುಷ್ಭಾ ಹಂದಟ್ಟು, ಬಿಜೆಪಿ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿಗಳಾದ ವಿದ್ಯಾ ಸಾಲಿಯಾನ್, ಶ್ವೇತಾ ಶ್ರೀನಿಧಿ, ನಿಕಟಪೂರ್ವ ಅಧ್ಯಕ್ಷೆ ರೂಪಾ ಪೈ,ಜಿಲ್ಲಾ ಮಹಿಳಾ ಮೋರ್ಚಾದ ಕಾರ್ಯದರ್ಶಿ ನಿರ್ಮಲ ಎಸ್. ಶೆಟ್ಟಿ, ಮಂಡಲ ಉಪಾಧ್ಯಕ್ಷೆ ಅಶ್ಚಿನಿ ದಿನೇಶ್, ಮಹಿಳಾ ಮೋರ್ಚಾದ ಪ್ರಮುಖರಾದ ವನೀತಾ ಶ್ರೀಧರ ಆಚಾರ್, ಜ್ಯೋತಿ ಭರತ್ ಕುಮಾರ್ ಶೆಟ್ಟಿ, ಲಲಿತಾ ಪೂಜಾರಿ,, ಸರಸ್ವತಿ ಪೂಜಾರಿ, ಸೀತಾ, ಸೀಮಾ ನಾಗರಾಜ್,ಅ ನುಸೂಯ ಹೇರ್ಳೆ,ಜ್ಯೋತಿ ಹಂದಟ್ಟು,ಗುಲಾಬಿ ಪೂಜಾರಿ,ರೋಹಿಣಿ ಪೈ,ಸಿಮಿತಾ,ಪ್ರತಿಮಾ ಮತ್ತು ಪದಾಧಿಕಾರಿ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಪಂಚವರ್ಣ ಮಹಿಳಾ ಮಂಡಲದ ಸಂಚಾಲಕಿ ಸುಜಾತ ಬಾಯರಿ ನಿರೂಪಿಸಿದರು. ಕೋಟದ ಪಂಚವರ್ಣದ ಕಛೇರಿಯಲ್ಲಿ ಕುಂದಾಪುರ ಮಂಡಲ ಬಿಜೆಪಿ ಮಹಿಳಾ ಮೋರ್ಚಾ ವತಿಯಿಂದ ಪಂಚವರ್ಣ ಯುವಕ ಮಂಡಲ ಹಾಗೂ ಪಂಚವರ್ಣ ಮಹಿಳಾ ಮಂಡಲದ ಪದಾಧಿಕಾರಿಗಳಿಗೆ ರಕ್ಷಾ ಬಂಧನ ರಾಖಿ ಕಟ್ಟಿಸಿ ಸಂಭ್ರಮಿಸಿದರು. ಕುಂದಾಪುರ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಸೌರಭಿ ಪೈ, ಮಹಿಳಾ ಮೋರ್ಚಾ ಉಪಾಧ್ಯಕ್ಷೆ ಅಮಿತಾ, ಪಂಚವರ್ಣ ಸಂಸ್ಥೆಯ ಸ್ಥಾಪಾಕಾಧ್ಯಕ್ಷ ಶೇವಧಿ ಸುರೇಶ್ ಗಾಣಿಗ, ,ಬಿಜೆಪಿ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿಗಳಾದ ವಿದ್ಯಾ ಸಾಲಿಯಾನ್, ಶ್ವೇತಾ ಶ್ರೀನಿಧಿ, ನಿಕಟಪೂರ್ವ ಅಧ್ಯಕ್ಷೆ ರೂಪಾ ಪೈ ಮತ್ತಿತರರು ಇದ್ದರು.














Leave a Reply