Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಕುಂಭಾಶಿ ದ್ರಾವಿಡ ಬ್ರಾಹ್ಮಣ ಪರಿಷತ್ ವಲಯದ ಶ್ರಾವಣಸಂಜೆ ಕಾರ್ಯಕ್ರಮ

ಕೋಟ: ಮನೆಯೇ ಮೊದಲ ಪಾಠಶಾಲೆ,ಜನನಿ ತಾನೇ ಮೊದಲ ಗುರು ತಾಯಿಯಾದವಳು ಮಕ್ಕಳಿಗೆ ಸಂಸ್ಕಾರ,ಸAಪ್ರದಾಯದ ಅರಿವನ್ನು ನೀಡಿ ಬೆಳೆಸಬೇಕು,ಮಕ್ಕಳನ್ನು ಸನ್ಮಾರ್ಗದಲ್ಲಿ ನೆಡೆಸುವ ಹೊಣೆಗಾರಿಕೆ ತಾಯಿಯದ್ದು ಎನ್ನುತ್ತಾ ನಹೀ ಜ್ಞಾನೇನ ಸದೃಶಂ’ ಎಂಬAತೆ  ಜ್ಞಾನಕ್ಕೆ ಸಮನಾದುದು ಯಾವುದೂ ಇಲ್ಲ. ಬದುಕಿನಲ್ಲಿ ಧರ್ಮ, ಅರ್ಥ, ಕಾಮ,ಮೋಕ್ಷವೆಂಬ ಚತುರ್ವಿಧ ಫಲ ಕೊಡುವಂತಹ ವಿದ್ಯೆ ಕಲಿಯಬೇಕೆಂದು ವೇದಮೂರ್ತಿ ವಿದ್ವಾನ್ ಮಂಜುನಾಥ ಭಟ್ ಹರೇಗೋಡು ಹೇಳಿದರು.

ಅವರು ಇತ್ತೀಚಿಗೆ ದ್ರಾವಿಡ ಬ್ರಾಹ್ಮಣ ಪರಿಷತ್ ಕುಂಭಾಶಿ ವಲಯದ ಕುಂಭಾಸಿ ಸೋದೆ ಮಠದಲ್ಲಿ ನೆಡೆದ ಶ್ರಾವಣಸಂಜೆ ಕಾರ್ಯಕ್ರಮದಲ್ಲಿ ಧಾರ್ಮಿಕ ಉಪನ್ಯಾಸದಲ್ಲಿ ಹೇಳಿದರು.

ಈ ಸಂದರ್ಭದಲ್ಲಿ ಕುಂದಾಪುರ ತಾಲೂಕು ದ್ರಾವಿಡ ಬ್ರಾಹ್ಮಣ ಪರಿಷತ್ತಿನ ಅಧ್ಯಕ್ಷೆ ಶುಭಚಂದ್ರ ಹತ್ವಾರ್, ವಾಣಿ ಹತ್ವಾರ್,ಕೋಟೇಶ್ವರ ಬ್ರಾಹ್ಮಣ ಪರಿಷತ್ತಿನ ಮಹಿಳಾ ಅಧ್ಯಕ್ಷೆ  ವಾಣಿಶ್ರೀ ಹೆಬ್ಬಾರ್,ವಲಯದ ಅಧ್ಯಕ್ಷ ರಮೇಶ್ ಚಾತ್ರ,ಮಾಜಿ ಅಧ್ಯಕ್ಷ ರಾಮಚಂದ್ರ ಹಂದೆ, ಲಕ್ಷಿ÷್ಮÃ ನಾರಾಯಣ ವೈದ್ಯ,ರಾಮಚಂದ್ರ ಉಪಾಧ್ಯ, ಕಾರ್ಯಕಾರಿ ಸಮಿತಿಯ ಸದಸ್ಯರಾದ ಶ್ರೀಧರ್ ಪುರಾಣಿಕ್, ವಿಷ್ಣುಮೂರ್ತಿ ಹೆಬ್ಬಾರ್, ಮಹಿಳಾ ಕಾರ್ಯದರ್ಶಿ ನಾಗರತ್ನ ಆಚಾರ್ಯ ಉಪಸ್ಥಿತರಿದ್ದರು.

ವಿಪ್ರ ಮಹಿಳೆಯರಿಂದ ಲಕ್ಷೀಶೋಭಾನೆ, ಲಕ್ಷಿ÷್ಮÃ ಸಹಸ್ರನಾಮ ಸಹಿತ ಕುಂಕುಮಾರ್ಚನೆ,ಭಜನೆ ನೆರವೇರಿತು.ಮಹಿಳೆಯರು ಮಹಾಲಕ್ಷಿ÷್ಮಗೆ ಮಂಗಳಾರತಿ ಬೆಳಗಿ ಕಾರ್ಯಕ್ರಮಕ್ಕೆ ಮಂಗಳ ಹಾಡಿದರು.


ಇತ್ತೀಚಿಗೆ ದ್ರಾವಿಡ ಬ್ರಾಹ್ಮಣ ಪರಿಷತ್ ಕುಂಭಾಶಿ ವಲಯದ ಕುಂಭಾಸಿ ಸೋದೆ ಮಠದಲ್ಲಿ ನೆಡೆದ ಶ್ರಾವಣಸಂಜೆ ಕಾರ್ಯಕ್ರಮದಲ್ಲಿ ವೇದಮೂರ್ತಿ ವಿದ್ವಾನ್ ಮಂಜುನಾಥ ಭಟ್ ಹರೇಗೋಡು ಧಾರ್ಮಿಕ ಉಪನ್ಯಾಸ ನೀಡಿದರು. ಕುಂದಾಪುರ ತಾಲೂಕು ದ್ರಾವಿಡ ಬ್ರಾಹ್ಮಣ ಪರಿಷತ್ತಿನ ಅಧ್ಯಕ್ಷರಾದ ಶುಭಚಂದ್ರ ಹತ್ವಾರ್,ಶ್ರೀಮತಿ ವಾಣಿ ಹತ್ವಾರ್,ಕೋಟೇಶ್ವರ ಬ್ರಾಹ್ಮಣ ಪರಿಷತ್ತಿನ ಮಹಿಳಾ ಅಧ್ಯಕ್ಷೆ ಶ್ರೀಮತಿ ವಾಣಿಶ್ರೀ ಹೆಬ್ಬಾರ್ ಮತ್ತಿತರರು ಇದ್ದರು.

Leave a Reply

Your email address will not be published. Required fields are marked *