
ಕೋಟ: ಗೆಳೆಯರ ಬಳಗ ಕಾರ್ಕಡ ,ಸಮುದಾಯ ವೈದ್ಯಕೀಯ ವಿಭಾಗ ಕೆ.ಎಂ.ಸಿ. ಮಣಿಪಾಲ , ಇಂಡಿಯನ್ ಕ್ಯಾನ್ಸರ್ ಸೊಸೈಟಿ, ಮಂಗಳೂರು, ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ ಕಾರ್ಕಡ- ಸಾಲಿಗ್ರಾಮ ಇವರ ಸಂಯುಕ್ತ ಆಶ್ರಯದಲ್ಲಿ ಬಾಯಿ,ಸ್ತನ ಮತ್ತು ಗರ್ಭಕಂಠದ ಕ್ಯಾನ್ಸರ್ ಸಂಬAಧಿತ ಉಚಿತ ತಪಾಸಣಾ ಶಿಬಿರವು ಕಾರ್ಕಡ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆ.20ರ ಮಂಗಳವಾರ ಜರುಗಿತು.
ಶಿಬಿರವನ್ನು ಕೋಟದ ವಿವೇಕ ಪ್ರೌಢ ಶಾಲಾ ನಿವೃತ್ತ ಪ್ರಾಂಶುಪಾಲೆ ಚಿತ್ರಾ ಕಾರಂತ ಉದ್ಘಾಟಿಸಿ ಉಚಿತ ವೈದ್ಯಕೀಯ ಶಿಬಿರಗಳ ಉಪಯೋಗವನ್ನು ಪಡೆಯಲು ಸಾರ್ವಜನಿಕರು ಪ್ರಯೋಜನ ಪಡೆಯಲು ಹೇಳಿದರಲ್ಲದೆ ಎಷ್ಟೋ ಕಡೆಗಳಲ್ಲಿ ವೈದ್ಯಕೀಯ ಸೇವೆಗಾಗಿ ಬಹಳ ಕಷ್ಟ ಪಡಬೇಕಿದ್ದು ,ಗೆಳೆಯರ ಬಳಗ ಕಾರ್ಕಡದಂತಹ ಗ್ರಾಮೀಣ ಪ್ರದೇಶದ ಸಾಮಾಜಿಕ ಸಂಸ್ಥೆಯು ಉಚಿತವಾಗಿ ಕ್ಯಾನ್ಸರ್ನಂತಹ ಖಾಯಿಲೆಗಳ ತಪಾಸಣಾ ಶಿಬಿರವನ್ನು ಏರ್ಪಡಿಸಿರುವುದು ಶ್ಲಾಘನಾರ್ಹ ಎಂದರು.

ಸಾಲಿಗ್ರಾಮ ಶ್ರೀ ಗುರು ನರಸಿಂಹ ದೇವಸ್ಥಾನದ ಅಧ್ಯಕ್ಷ ಡಾ.ಕೆ.ಎಸ್.ಕಾರಂತರು ಶುಭಾಶಂಸನೆಗೈದು ಇಂದಿನ ದಿನಗಳಲ್ಲಿ ಜನರ ಜೀವನ ಶೈಲಿಯಲ್ಲಿ ಬಹಳಷ್ಟು ವ್ಯತ್ಯಾಸವಾಗುತ್ತಿದ್ದು, ವ್ಯಸನಗಳೂ ಸೇರಿದಂತೆ ಹಲವಾರು ಕಾರಣಗಳಿಂದ ಕ್ಯಾನ್ಸರ್‌ನಂತಹ ಖಾಯಿಲೆಗಳು ಹೆಚ್ಚುತ್ತಲಿರುವುದು ಕಳವಳಕಾರಿ ಎಂದರು.
ಸಮಾರAಭದ ಅಧ್ಯಕ್ಷತೆಯನ್ನು ಬಳಗದ ಅಧ್ಯಕ್ಷ ಕೆ.ತಾರಾನಾಥ ಹೊಳ್ಳ ವಹಿಸಿದ್ದರು.
ಸಾಲಿಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ರಾಘವೇಂದ್ರ ರಾವ್ ಶಿಬಿರದ ಮಹತ್ವ ಸಭೆಗೆ ತಿಳಿಸಿದರು.
ಸಮುದಾಯ ವೈದ್ಯಕೀಯ ವಿಭಾಗ ,ಕೆ.ಎಂ.ಸಿ. ಮಣಿಪಾಲದ ಡಾ. ಸುಚರಿತ.ಎಸ್ ಹಾಗೂ ಇಂಡಿಯನ್ ಕ್ಯಾನ್ಸರ್ ಸೊಸೈಟಿ, ಮಂಗಳೂರಿನ ಪ್ರತಿನಿಧಿ ರಂಜನ್ ಉಪಸ್ಥಿತರಿದ್ದರು. ಬಳಗದ ಜಗದೀಶ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು. ಬಳಗದ ಜತೆ ಕಾರ್ಯದರ್ಶಿ ಶ್ರೀಕಾಂತ ಐತಾಳ ವಂದಿಸಿದರು.
ಗೆಳೆಯರ ಬಳಗ ಕಾರ್ಕಡ ,ಸಮುದಾಯ ವೈದ್ಯಕೀಯ ವಿಭಾಗ ಕೆ.ಎಂ.ಸಿ. ಮಣಿಪಾಲ ಸೇರಿದಂತೆ ವಿವಿಧ ಸಂಸ್ಥೆಗಳ ಆಶ್ರಯದಲ್ಲಿ ಆರೋಗ್ಯ ಶಿಬಿರವನ್ನು ಕೋಟದ ವಿವೇಕ ಪ್ರೌಢ ಶಾಲಾ ನಿವೃತ್ತ ಪ್ರಾಂಶುಪಾಲೆ ಚಿತ್ರಾ ಕಾರಂತ ಉದ್ಘಾಟಿಸಿದರು. ಸಾಲಿಗ್ರಾಮ ಶ್ರೀ ಗುರು ನರಸಿಂಹ ದೇವಸ್ಥಾನದ ಅಧ್ಯಕ್ಷ ಡಾ.ಕೆ.ಎಸ್.ಕಾರಂತ, ಬಳಗದ ಅಧ್ಯಕ್ಷ ಕೆ.ತಾರಾನಾಥ ಹೊಳ್ಳ, ಸಾಲಿಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ರಾಘವೇಂದ್ರ ರಾವ್ ಮತ್ತಿತರರು ಇದ್ದರು.














Leave a Reply