
ಕೋಟ: ರೋಟರಿ ಕ್ಲಬ್ ಕೋಟ ಸಾಲಿಗ್ರಾಮ ಇದರ ಆಶ್ರಯದಲ್ಲಿ ಗ್ರೀನ್ ಇಂಡಿಯಾ ಕ್ಲೀನ್ ಇಂಡಿಯಾ ಕಾರ್ಯಕ್ರಮ ಕೋಟದ ರೋಟರಿ ಭವನದಲ್ಲಿ ಶುಕ್ರವಾರ ನಡೆಯಿತು.
ಸಭೆಯ ಅಧ್ಯಕ್ಷತೆಯನ್ನು ರೋಟರಿ ಕ್ಲಬ್ ಕೋಟ ಸಾಲಿಗ್ರಾಮ ಅಧ್ಯಕ್ಷ ತಿಮ್ಮ ಪೂಜಾರಿ ವಹಿಸಿದ್ದರು.
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಿರಿಯ ಕೃಷಿಕ ಪಡುಕರೆ ಭಾಸ್ಕರ ಶೆಟ್ಟಿ ವಿವರವಾದ ಮಾಹಿತಿ ನೀಡಿ ಪ್ಲಾಸ್ಟಿಕ್ ತಿರಸ್ಕರಿಸಿ ,ಕಸದಿಂದ ಗೊಬ್ಬರ ಮಾಡಿ ಕೃಷಿಗೆ ಬಳಸಿ, ಕೃಷಿ ತೋಟಗಾರಿಕೆಗೆ ಹೆಚ್ಚಿನ ಮಹತ್ವ ನೀಡಿ ಎಂದು ಕರೆ ನೀಡಿದರು. ರೋಟರಿ ಕ್ಲಬ್ನ ನಿಕಟಪೂರ್ವ ಅಧ್ಯಕ್ಷ ಗಣೇಶ ಹೊಳ್ಳ ಉಪಸ್ಥಿತರಿದ್ದರು. ಕೋಟ ಸಾಲಿಗ್ರಾಮ ರೋಟರಿ ಕಾರ್ಯದರ್ಶಿ ಚಂದ್ರ ಪೂಜಾರಿ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು.
ರೋಟರಿ ಕ್ಲಬ್ ಕೋಟ ಸಾಲಿಗ್ರಾಮ ಇದರ ಆಶ್ರಯದಲ್ಲಿ ಗ್ರೀನ್ ಇಂಡಿಯಾ ಕ್ಲೀನ್ ಇಂಡಿಯಾ ಕಾರ್ಯಕ್ರಮದಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಿರಿಯ ಕೃಷಿಕ ಪಡುಕರೆ ಭಾಸ್ಕರ ಶೆಟ್ಟಿ ಮತನಾಡಿದರು. ರೋಟರಿ ಕ್ಲಬ್ ಕೋಟ ಸಾಲಿಗ್ರಾಮ ಅಧ್ಯಕ್ಷ ತಿಮ್ಮ ಪೂಜಾರಿ,ರೋಟರಿ ಕ್ಲಬ್ನ ನಿಕಟಪೂರ್ವ ಅಧ್ಯಕ್ಷ ಗಣೇಶ ಹೊಳ್ಳ ಉಪಸ್ಥಿತರಿದ್ದರು.













Leave a Reply