
ಕೋಟ: ಭಾರತೀಯ ವೈದ್ಯಕೀಯ ಸಂಘದ ಪದಾಧಿಕಾರಿಗಳಿಂದ ಉಡುಪಿಯ ಸಂಸದ ಕೋಟ ಶ್ರೀನಿವಾಸ ಪೂಜಾರಿಯವರನ್ನು ಅವರ ಗೃಹ ಕಛೇರಿಯಲ್ಲಿ ಭೇಟಿಯಾದರು.
ಐ.ಎಂ.ಎ. ಕೇಂದ್ರ ಕಾರ್ಯಕಾರಿಣಿ ಸದಸ್ಯ ಡಾ.ಕೆ.ಎಸ್.ಕಾರಂತರು ಇತ್ತೀಚೆಗಷ್ಟೆ ಕೊಲ್ಕತ್ತಾದಲ್ಲಿ ಸ್ನಾತಕೋತ್ತರ ವೈದ್ಯ ವಿದ್ಯಾರ್ಥಿನಿಯ ಮೇಲೆ ನಡೆದ ಅಮಾನುಷ ಕೃತ್ಯ ಮತ್ತು ಹತ್ಯೆಯೂ ಸೇರಿದಂತೆ ದೇಶದಲ್ಲಿ ಆರೋಗ್ಯ ಪ್ರದಾನ ಕ್ಷೇತ್ರದಲ್ಲಿ ದುಡಿಯುತ್ತಿರುವ ಸಿಬ್ಬಂದಿ ಮತ್ತು ಆಸ್ಪತ್ರೆಗಳ ಮೇಲೆ ನಡೆಯುತ್ತಿರುವ ದೌರ್ಜನ್ಯದ ಬಗ್ಗೆ ಸಂಸದರ ಗಮನ ಸೆಳೆದರು. ರಾಷ್ಟ್ರ ಐ.ಎಂ.ಎ.ಯ ಬೇಡಿಕೆಗಳ ಮತ್ತು ಸಂಬಂಧಿತ ಪ್ರಬಲವಾದ ಕೇಂದ್ರೀಯ ಶಾಸನದ ಬಗ್ಗೆ ಹಕ್ಕೊತ್ತಾಯದ ಮನವಿ ಪತ್ರವನ್ನು ಸಂಸದರಿಗೆ ಹಸ್ತಾಂತರಿಸಲಾಯಿತು. ನಿಯೋಗದ ಮನವಿಯನ್ನು ಪರಿಶೀಲಿಸಿ, ಆರೋಗ್ಯ ಸಚಿವ ಮತ್ತು ಪ್ರಧಾನ ಮಂತ್ರಿ ಯವರೊಂದಿಗೆ ಚರ್ಚಿಸುವ ಭರವಸೆಯನ್ನು ಶ್ರೀನಿವಾಸ ಪೂಜಾರಿ ಯವರು ನೀಡಿದರು.
ಕುಂದಾಪುರ ಐ.ಎಂ.ಎ.ಶಾಖೆಯ ರಾಜ್ಯ ಪ್ರತಿನಿಧಿ ಡಾ.ಕಮಲಾಕ್ಷ ಶೆಣೈ, ತೆಕ್ಕಟ್ಟೆ ಮುಂತಾದ ಪ್ರಮುಖರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಭಾರತೀಯ ವೈದ್ಯಕೀಯ ಸಂಘದ ಪದಾಧಿಕಾರಿಗಳಿಂದ ಉಡುಪಿಯ ಸಂಸದ ಕೋಟ ಶ್ರೀನಿವಾಸ ಪೂಜಾರಿಯವರನ್ನು ಅವರ ಗೃಹ ಕಛೇರಿಯಲ್ಲಿ ಭೇಟಿಯಾದರು. ಐ.ಎಂ.ಎ. ಕೇಂದ್ರ ಕಾರ್ಯಕಾರಿಣಿ ಸದಸ್ಯ ಡಾ.ಕೆ.ಎಸ್.ಕಾರಂತರು ಕುಂದಾಪುರ ಐ.ಎಂ.ಎ.ಶಾಖೆಯ ರಾಜ್ಯ ಪ್ರತಿನಿಧಿ ಡಾ.ಕಮಲಾಕ್ಷ ಶೆಣೈ ಮತ್ತಿತರರು ಇದ್ದರು.













Leave a Reply