Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಸಾಲಿಗ್ರಾಮ- ಯಕ್ಷಸೌರಭ ಶ್ರೀ ಹಿರೇಮಹಾಲಿಂಗೇಶ್ವರ ಕಲಾರಂಗ ಕೋಟ ಇವರ ಪ್ರಸ್ತುತಿಯಲ್ಲಿ ಯಕ್ಷಗಾನ ಸಪ್ತಾಹ ಸೌರಭ ಸಪ್ತಮಿಗೆ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿಯವರಿಂದ ಚಾಲನೆ

ಕೋಟ: ಹವ್ಯಾಸೀ ಯಕ್ಷಪ್ರಪಂಚದ ಮೊತ್ತಮೊದಲ ಯಕ್ಷಗಾನ ಸಪ್ತಾಹ ಸೌರಭ ಸಪ್ತಮಿ ಭಾನುವಾರ ಸಾಲಿಗ್ರಾಮ ಗುರುನರಸಿಂಹ ದೇಗುಲದಲ್ಲಿ ಚಾಲನೆಗೊಂಡಿತು.

ಯಕ್ಷಸೌರಭ ಶ್ರೀ ಹಿರೇಮಹಾಲಿಂಗೇಶ್ವರ ಕಲಾರಂಗ ಕೋಟ ಇವರ ಪ್ರಸ್ತುತಿಯಲ್ಲಿ ಆ.25ರಿಂದ ಆ.31ರ ವರೆಗೆ ನಡೆಯುವ ಹವ್ಯಾಸಿ ಯಕ್ಷಗಾನ ಸಪ್ತಾಹವನ್ನು ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿಯವರು ದೀಪ ಬೆಳಗಿ,ಯಕ್ಷಗಾನದ ವೀರವಾದ್ಯ ಚಂಡೆಯನ್ನು ಬಾರಿಸಿ ಉದ್ಘಾಟಿಸಿದರು.

ಸಾಲಿಗ್ರಾಮ ದೇವಳದ ಆಡಳಿತ ಮಂಡಳಿ ಅಧ್ಯಕ್ಷ ಡಾ.ಕೆ.ಎಸ್.ಕಾರಂತರು ಶುಭಾಶಂಸನೆಗೈದರು.
ಯಕ್ಷಸೌರಭ ಹಿರೇ ಮಹಾಲಿಂಗೇಶ್ವರ ಕಲಾರಂಗ ಕೋಟ ಇದರ ಅಧ್ಯಕ್ಷರಾದ ಕೋಡಿ ರಾಘವೇಂದ್ರ ಕರ್ಕೇರ ಸಭಾಧ್ಯಕ್ಷತೆ ವಹಿಸಿದ್ದರು. ಹಿರಿಯ ಯಕ್ಷಗಾನ ಕಲಾವಿದ,ಯಕ್ಷಗುರು ಚಿತ್ರಪಾಡಿ ಕೃಷ್ಣಮೂರ್ತಿ ಉರಾಳರು ಕೀರ್ತಿಶೇಷ ಹಂದಾಡಿ ಬಾಲಕೃಷ್ಣನಾಯಕ್ ಅವರಿಗೆ ನುಡಿನಮನ ಸಲ್ಲಿಸಿದರು.

ಪತ್ರಕರ್ತ ರಾಜೇಶ ಗಾಣಿಗ ಅಚ್ಲಾಡಿ, ಏಕದಂತ ಎಂಟರ್ ಪ್ರೆöÊಸಸ್ ಮಾಲಿಕ ಚಂದ್ರಶೇಖರ ಕಾರಂತ್ ಅಭ್ಯಾಗತರಾಗಿ ಉಪಸ್ಥಿತರಿದ್ದರು. ಯಕ್ಷ ಸೌರಭದ ಸ್ಥಾಪಕಾಧ್ಯಕ್ಷ ಹರೀಶ ಭಂಡಾರಿ ಗಿಳಿಯಾರು ಸ್ವಾಗತಿಸಿದರು. ರಾಜೇಶ ಕರ್ಕೇರ ಕೋಡಿ ನಿರೂಪಿಸಿದರು. ಪ್ರಧಾನ ಕಾರ್ಯದರ್ಶಿ ಶ್ರೀನಾಥ ಉರಾಳ ವಂದಿಸಿದರು.
ಬಳಿಕ ಪ್ರಸಾದಕುಮಾರ್ ಮೊಗೇಬೆಟ್ಟು ಶಿಷ್ಯರಿಂದಲೇ ಸಪ್ತಾಹದ ಮೊದಲ ಪ್ರದರ್ಶನ- ಸಾಂಪ್ರದಾಯಿಕ ನಡುತಿಟ್ಡಿನ ನಡೆಯ ಚಿತ್ರಸೇನ ಕಾಳಗ ನಡೆಯಿತು.

ಮಕ್ಕಳಿಗೆ,ಯುವ ತಲೆಮಾರಿಗೆ ಯಕ್ಷಗಾನದಂತಹ ಸಮಗ್ರ ಸಂಪನ್ನತೆಯ ಸಮಷ್ಠಿಕಲೆಯನ್ನು ಶೈಕ್ಷಣಿಕವಾಗಿ ಮತ್ತು ಪ್ರದರ್ಶನಮುಖವಾಗಿ ಒದಗಿಸಿದಾಗ  ಸಂಸ್ಕಾರ- ಸಂಸ್ಕೃತಿಯ  ಸಾಕ್ಷಾತ್ಕಾರವಾಗುತ್ತದೆ. ನಾಡಿನಲ್ಲಿ ವೃದ್ಧಾಶ್ರಮ,ಅನಾಥಾಶ್ರಮಗಳ ಸಂಖ್ಯೆ ಕಡಿಮೆಯಾಗುತ್ತದೆ: ಡಾ.ತಲ್ಲೂರು ಶಿವರಾಮ ಶೆಟ್ಟಿ

ಯಕ್ಷಸೌರಭ ಶ್ರೀ ಹಿರೇಮಹಾಲಿಂಗೇಶ್ವರ ಕಲಾರಂಗ ಕೋಟ ಇವರ ಪ್ರಸ್ತುತಿಯಲ್ಲಿ ಆ.25ರಿಂದ ಆ.31ರ ವರೆಗೆ ನಡೆಯುವ ಹವ್ಯಾಸಿ ಯಕ್ಷಗಾನ ಸಪ್ತಾಹವನ್ನು ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿಯವರು ದೀಪ ಬೆಳಗಿ,ಯಕ್ಷಗಾನದ ವೀರವಾದ್ಯ ಚಂಡೆಯನ್ನು ಬಾರಿಸಿ ಉದ್ಘಾಟಿಸಿದರು. ಹಿರಿಯ ಯಕ್ಷಗಾನ ಕಲಾವಿದ,ಯಕ್ಷಗುರು ಚಿತ್ರಪಾಡಿ ಕೃಷ್ಣಮೂರ್ತಿ ಉರಾಳ, ಪತ್ರಕರ್ತ ರಾಜೇಶ ಗಾಣಿಗ ಅಚ್ಲಾಡಿ, ಏಕದಂತ ಎಂಟರ್ ಪ್ರೆöÊಸಸ್ ಮಾಲಿಕ ಚಂದ್ರಶೇಖರ ಕಾರಂತ್ ಅಭ್ಯಾಗತರಾಗಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *