Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಕೋಟದ ಶಾಂಭವೀ ಶಾಲೆಯ ಯಕ್ಷಗಾನ ತರಬೇತಿ ಕೇಂದ್ರದ ಕಾರ್ಯಕ್ರಮ
ಮಕ್ಕಳಲ್ಲಿ ಯಕ್ಷಗಾನದ ಕಲಿಕೆ, ಸಂಸ್ಥೆಯ ಕಾರ್ಯ ಶ್ಲಾಘನೀಯ – ಉಪೇಂದ್ರ ಸೋಮಯಾಜಿ

ಕೋಟ: ಮಕ್ಕಳಲ್ಲಿ ಯಕ್ಷಗಾನದ ಬಗ್ಗೆ ನಿರಂತರ ಕಲಿಕೆ ಸಂಸ್ಥೆಯ ಕಾರ್ಯ ಶ್ಲಾಘನೀಯ ಎಂದು ಸಾಹಿತಿ ಉಪೇಂದ್ರ ಸೋಮಯಾಜಿ ನುಡಿದರು.

ಕೋಟದ ಶಾಂಭವೀ ಶಾಲೆಯಲ್ಲಿ ಯಕ್ಷಗಾನ ತರಬೇತಿ ಕೇಂದ್ರ ಶ್ರೀ ಶಾಂಭವೀ ವಿದ್ಯಾದಾಯಿನೀ ಅನುದಾನಿತ ಹಿ.ಪ್ರಾ ಶಾಲೆ ಇಲ್ಲಿ 2024-25ನೇ ಸಾಲಿನ ಯಕ್ಷಗಾನ ನೃತ್ಯ ತರಬೇತಿಯನ್ನು ಉದ್ಘಾಟಿಸಿ ಮಾತನಾಡಿ ಪ್ರಸ್ತುತ ದಿನಗಳಲ್ಲಿ ಕಲೆಯನ್ನು ಉಳಿಸಿ ಬೆಳೆಸಬೇಕಾದರೆ ಮಕ್ಕಳಲ್ಲಿ ಇದನ್ನು ಬಿತ್ತಬೇಕಾಗಿದೆ ಆ ಕೆಲಸ ತರಬೇತಿ ಸಂಸ್ಥೆಗಳಿAದಾಗುತ್ತಿದೆ.ಜ್ಞಾನವೃದ್ಧಿಗೆ ಪೂರಕ ವಾತಾವರ ಯಕ್ಷಗಾನದಿಂದ ಸಿಗುತ್ತದೆ ಎಂದು ಆಶಯ ವ್ಯಕ್ತಪಡಿಸಿದ್ದರು.

ಸಭೆಯ ಅಧ್ಯಕ್ಷತೆಯನ್ನು ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ಕೆ.ರಾಜಾರಾಮ್ ಐತಾಳ್ ವಹಿಸಿದ್ದರು.
ಯಕ್ಷಗಾನ ತರಬೇತಿ ಕೇಂದ್ರದ ಸಂಚಾಲಕ ಎಂ.ಎನ್ ಮಧ್ಯಸ್ಥ ,ಯಕ್ಷಗುರು ಕೃಷ್ಣಮೂರ್ತಿ ಉರಾಳ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ರವೀಂದ್ರ ಜೋಗಿ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಶಾಲಾ ಮುಖ್ಯ ಶಿಕ್ಷಕ ದಿವಾಕರ್ ಐತಾಳ್ ಸ್ವಾಗತಿಸಿ ನಿರೂಪಿಸಿದರು. ನಂತರ ಯಕ್ಷಗಾನ ತರಬೇತಿ ಕೇಂದ್ರದ ವಿದ್ಯಾರ್ಥಿಗಳಿಂದ ಮಾಯಾಪುರಿ ಮಹಾತ್ಮೆ ಯಕ್ಷಗಾನ ಪ್ರದರ್ಶನಗೊಂಡಿತು.
ಕೋಟದ ಶಾಂಭವೀ ಶಾಲೆಯಲ್ಲಿ ಯಕ್ಷಗಾನ ತರಬೇತಿ ಕೇಂದ್ರ ಶ್ರೀ ಶಾಂಭವೀ ವಿದ್ಯಾದಾಯಿನೀ ಅನುದಾನಿತ ಹಿ.ಪ್ರಾ ಶಾಲೆ ಇಲ್ಲಿ 2024-25ನೇ ಸಾಲಿನ ಯಕ್ಷಗಾನ ನೃತ್ಯ ತರಬೇತಿಯನ್ನು  ಸಾಹಿತಿ ಉಪೇಂದ್ರ ಸೋಮಯಾಜಿ ಉದ್ಘಾಟಿಸಿದರು. ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ಕೆ.ರಾಜಾರಾಮ್ ಐತಾಳ್, ಯಕ್ಷಗಾನ ತರಬೇತಿ ಕೇಂದ್ರದ ಸಂಚಾಲಕ ಎಂ.ಎನ್ ಮಧ್ಯಸ್ಥ ಮತ್ತಿತರರು ಇದ್ದರು.

Leave a Reply

Your email address will not be published. Required fields are marked *