Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಬೈಂದೂರು:  48 ಗಂಟೆಯೊಳಗೆ  ಇಬ್ಬರು  ಗೋ ಕಳ್ಳರನ್ನು  ಹೆಡೆಮುರಿ ಕಟ್ಟಿದ ಗಂಗೊಳ್ಳಿ ಪೊಲೀಸರು

ಬೈಂದೂರು: ಕಳೆದು ಎರಡು ದಿನಗಳ  ಹಿಂದೆ ಉಡುಪಿ ಜಿಲ್ಲೆಯ ಕುಂದಾಪುರ  ತಾಲೂಕಿನ ಗುಜ್ಜಾಡಿ ಗ್ರಾಮದ ನಾಯಕವಾಡಿ ಬ್ರಹ್ಮಶ್ರೀ ನಾರಾಯಣ ಗುರು ಮಂದಿರದ ಬಳಿ ತಡರಾತ್ರಿ  ಮಾರುತಿ ಕಾರಿನಲ್ಲಿ ಬಂದು  ಗೋ ಕಳ್ಳತನ ಮಾಡುವಾಗ ದಿನನಿತ್ಯದಂತೆ ಕರ್ತವ್ಯ ನಿರ್ವಹಿಸಿ ವಿಶ್ರಾಂತಿ ಪಡೆಯುತ್ತಿದ್ದ DAR ಪೊಲೀಸ್ ಸಿಬ್ಬಂದಿ  ಗೋವುಗಳು ಕೂಗುವ ಶಬ್ದ ಕೇಳಿ ಹೊರ ಬಂದು ನೋಡಿದಾಗ   ಗೋ ಕಳ್ಳರು ಕೃತ್ಯಕ್ಕೆ ಬಳಿಸಿದ ಮಾರುತಿ ಕಾರ್ ಬಿಟ್ಟು ಪರರಿಯಾಗಿದ್ದಾರೆ,

ಅದೇ ಸಂದರ್ಭ  ಗಂಗೊಳ್ಳಿ ಪೊಲೀಸ್ ಠಾಣಾಧಿಕಾರಿ ಹರೀಶ್ ಆರ್. ನಾಯಕ್ ಕರ್ತವ್ಯದಲ್ಲಿ ಗಸ್ತು ತಿರುಗುವ ವೇಳೆ ಆರೋಪಿಗಳು ಭಯಭೀತರಾಗಿ ದಿಕ್ಕಾಪಾಲಾಗಿ  ಓಡಿ ಪರಾರಿಯಾಗಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ, ತಕ್ಷಣ  ಗೋಕಳ್ಳರನ್ನು  ಸೆರೆ ಹಿಡಿಯಲು ಕಷ್ಟ ಸಾಧ್ಯವಾದ ಹಿನ್ನೆಲೆಯಲ್ಲಿ   ಕಾರ್ಯಚರಣೆ ಚುರುಕುಗೊಳಿಸಿ ,  24 ಗಂಟೆಯ ಒಳಗೆ  ಇಬ್ಬರು ಆರೋಪಿಗಳ ಪೈಕಿ ಓರ್ವ
ಬಾಲ ಪರಾಧಿಯನ್ನು ಹೆಡೆಮುರಿ ಕಟ್ಟಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು.

ಇಬ್ಬರು ಗೋ ಕಳ್ಳರನ್ನು ಗಂಗೊಳ್ಳಿ ಪೊಲೀಸ್ ಠಾಣಾಧಿಕಾರಿ ಹರೀಶ್ ಆರ್ ನಾಯ್ಕ್ , ಹಾಗೂ ತನಿಖಾಧಿಕಾರಿ ಬಸವರಾಜ್ ಕನಶೆಟ್ಟಿ ನೇತೃತ್ವದಲ್ಲಿ  ಇಂದು ಮಧ್ಯಾಹ್ನ ಕುಂದಾಪುರ ತಾಲೂಕಿನ ಗುಲ್ವಾಡಿ ಮಾವಿನಕಟ್ಟೆಯಲ್ಲಿ  ವಶಕ್ಕೆ ಪಡೆದು ಆರೋಪಿಗಳನ್ನು ಕರೆತಂದು ಮಹಾಜರು ಪ್ರಕ್ರಿಯೆ
ಮಾಡಲಾಗಿದೆ. ಬಳಿಕ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು.

ಕಾರ್ಯಕೆರಣಿಯಲ್ಲಿ ಗಂಗೊಳ್ಳಿ ಪೊಲೀಸ್ ಠಾಣಾಧಿಕಾರಿ ಹರೀಶ ಆರ್. ನಾಯ್ಕ್, ತನಿಖಾಧಿಕಾರಿ, ಬಸವರಾಜ್ ಕನಶೆಟ್ಟಿ, ಸಿಬ್ಬಂದಿಗಳಾದ ರಾಜು ನಾಯ್ಕ, ಶಾಂತರಾಮಶೆಟ್ಟಿ, ರಾಘವೇಂದ್ರ ಪೂಜಾರಿ, ಸಂದೀಪ ಕುರಾಣಿ, ಹಾಗೂ ದೀಪು ಚಾಲಕ ದಿನೇಶ ಪಿ . ಬೈಂದೂರು ಯವರ ಕರ್ತವ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿದೆ,

Leave a Reply

Your email address will not be published. Required fields are marked *