News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಬಂಟ್ವಾಳ: ಜುಗಾರಿ ಅಡ್ಡೆಗೆ ದಾಳಿ : 23 ಮಂದಿಯ ಬಂಧನ…!!

ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಹತ್ತಿರದ ಪೂಂಜಾಲಕಟ್ಟೆ ಠಾಣಾ ವ್ಯಾಪ್ತಿಯ ಮಡಂತ್ಯಾರಿನಲ್ಲಿ ನಡೆಯುತ್ತಿದ್ದ ಜುಗಾರಿ ಅಡ್ಡೆಗೆ ದಾಳಿ ನಡೆಸಿದ ಪೊಲೀಸರು 23 ಮಂದಿಯನ್ನು ಬಂಧಿಸಿದ ಘಟನೆ ನಡೆದಿದೆ.

ಬೆಳ್ತಂಗಡಿ ತಾಲೂಕು ಮಾಲಾಡಿ ಗ್ರಾಮದ ಮಡಂತ್ಯಾರು ಪೇಟೆಯ ಬಳಿಯಿರುವ ಅಲ್ಬರ್ಟ್ ಡಿ ಸೋಜಾ ಎಂಬವರಿಗೆ ಸೇರಿದ ಕಟ್ಟಡದ ಹಿಂಭಾಗದ ಶೆಡ್‌ ನಲ್ಲಿ ಜುಗಾರಿ ಆಟದಲ್ಲಿ ನಿರತರಾಗಿದ್ದ ವೇಳೆ ಈ ದಾಳಿ ನಡೆಸಿದ ಪೊಲೀಸರು 23 ಮಂದಿಯನ್ನು ಬಂಧಿಸಿ ಅವರಿಂದ ನಗದು ಹಾಗೂ ಸೊತ್ತುಗಳನ್ನು ವಶಪಡಿಸಿಂಡಿದ್ದಾರೆ. ವಶಪಡಿಸಿಕೊಳ್ಳಲಾದ ಸೊತ್ತುಗಳ ಅಂದಾಜು ಮೌಲ್ಯ ರೂ 36,729 ಎಂದು ತಿಳಿಸಿದ್ದಾರೆ.

ಪ್ರಮುಖ ಆರೋಪಿ ಮೊನಪ್ಪ ಪೂಜಾರಿ ಪರಾರಿಯಾಗಿದ್ದು, ಉಳಿದಂತೆ ಆಟದಲ್ಲಿ ತೊಡಗಿದ್ದ ಅಬ್ದುಲ್‌ ಖಾದರ್‌, ಮೊಹಮ್ಮದ್‌ ಹೈದರ್‌, ಜೋಸ್‌ ತೋಮಸ್‌, ಅಬೂಬಕ್ಕರ್‌, ಲೋಕನಾಥ ತುಕರಾಮ್‌, ಅಬ್ದುಲ್‌ ರಹಿಮಾನ್‌, ಯಶೋಧರ, ರಮೇಶ್‌ ಆಚಾರ್ಯ, ಜಿ.ಎ.ದಾವೂದ್‌, ರಿಯಾಜ್‌ @ ರಿಯಾಜುದ್ದೀನ್ , ಹಮ್ಮದ್, ಅಬೂಬಕ್ಕರ್‌, ಅಬ್ದುಲ್‌ ರವೂಫ್‌, ಮುಸ್ತಾಫ, ಎಂ.ಅಶ್ರಫ್‌, ರಮೇಶ್‌.ಕೆ, ಅಬ್ದುಲ್‌ ರಝಾಕ್‌, ಕಮಲಾಕ್ಷ ದಾಸ್‌, ವಿಜಯ ಕುಮಾರ್, ಮಜೀದ್‌ ಯಾನೆ ಅಬ್ದುಲ್‌ ಮಜೀದ್, ಶ್ರೀಧರ ಪೂಜಾರಿ, ಮುನ್ನ @ ಮುಸ್ತಾಫ ಅವರನ್ನು ಬಂಧಿಸಲಾಗಿದೆ.

ಪುಂಜಾಲಕಟ್ಟೆ ಠಾಣೆಯಲ್ಲಿ ಅ.ಕ್ರ 67/2024 ಕಲಂ: 79, 80 ಕರ್ನಾಟಕ ಪೊಲೀಸ್‌ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಪೊಲೀಸರು ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ.

Leave a Reply

Your email address will not be published. Required fields are marked *