
ಬೈಂದೂರು: ಗಂಗೊಳ್ಳಿ ಪರಿಸರದಲ್ಲಿ ನೆಲೆ ನಿಂತು ಮೀನುಗಾರರ ಕಷ್ಟ ಕಾರ್ಪಣ್ಯಗಳನ್ನು ಕಾಪಾಡಿ ಕೊಂಡು ಬಂದಿರುವ ಅಧಿದೇವತೆ ಗಂಗೊಳ್ಳಿಯ ಶ್ರೀ ಮಹಾಂಕಾಳಿ
ಅಮ್ಮನವರ ದೇವಸ್ಥಾನ ದೇವಿಗೆ ಅರ್ಪಿಸಿದ ಚಿನ್ನದ ಕರಿಮಣಿ ಸರವನ್ನು ದೇವಸ್ಥಾನದ ಪ್ರಧಾನ ಅರ್ಚಕ ಶಿರಸಿ ಮೂಲದ ನರಸಿಂಹ ಭಟ್ ಅಸಲಿ ಸರವನ್ನು ನಕಲಿ ಮಾಡಿದ ಘಟನೆ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಗಂಗೊಳ್ಳಿಯಲ್ಲಿ ನಡೆದಿದೆ,
ಕಳೆದ ಒಂದು ವಾರದಗಳಿಂದ ದೇವಸ್ಥಾನದ ಆಡಳಿತ ಮಂಡಳಿ ಯವರಿಗೆ ಅನುಮಾನ ಬಂದ ಹಿನ್ನೆಲೆಯಲ್ಲಿ ನಿನ್ನೆ ಶನಿವಾರವದೊಂದು ಚಿನ್ನ ಕೆಲಸ ಮಾಡುವವರನ್ನು ಕರೆಸಿ ದೇವರ ಕುತ್ತಿಗೆಯಲ್ಲಿರುವ ಚಿನ್ನದ ಸರ ಪರಿಶೀಲಿಸಿದಾಗ ನಕಲಿ ಎಂದು ಸಾಬೀತಾದ ಮೇಲೆ ದೇವಸ್ಥಾನದ ಆಡಳಿತ ಮಂಡಳಿ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ, ಶನಿವಾರ ರಾತ್ರಿ 9:30 ಸಮಯದಲ್ಲಿ ದೇವಸ್ಥಾನದ ಪ್ರಧಾನ ಅರ್ಚಕ ನರಸಿಂಹ ಭಟ್ಟನನ್ನು ಬಂಧಿಸಿ ಠಾಣೆಗೆ ಕರೆತರಲಾಗಿದೆ,
ಗಂಗೊಳ್ಳಿ ಪೊಲೀಸರು ತನಿಖೆ ಪ್ರಾರಂಭಿಸಿದ್ದು ಈ ಪ್ರಕರಣದಲ್ಲಿ ಇನ್ನು ಯಾವ ವ್ಯಕ್ತಿಗಳು ಭಾಗಿಯಾಗಿದ್ದಾರೆ ಎಂಬುವುದು ನಿನ್ನಷ್ಟೇ ತಿಳಿಯಬೇಕಾಗಿದೆ,
Leave a Reply