
ಗ್ರಾಮದ ಅಭಿವೃದ್ಧಿಯತ್ತ ಅನುದಾನಗಳನ್ನು ಬಿಡುಗಡೆ ಮಾಡೋದು ಬಿಟ್ಟು ತಾಳಗುಪ್ಪ ಗ್ರಾಮ ಪಂಚಾಯಿತಿ ಅವ್ಯವಹಾರ ಭ್ರಷ್ಟಾಚಾರ ಅಕ್ರಮಕ್ಕೆ ಅನವಶ್ಯಕವಾಗಿ ಮೂಗು ತೂರಿಸುವ ಹುನ್ನಾರದತ್ತ ಸಂಸದ ಬಿ. ವೈ. ರಾಘವೇಂದ್ರ ಗಂಭೀರ ಆರೋಪ – ಬಿ ವೈ ಆರ್ ಗೆ ಕಿವಿ ಹಿಂಡುವ ಸ್ಥಳೀಯ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯನ ಕೈವಾಡ…..,…?!
ತಾಳಗುಪ್ಪ :- ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ಸೊರಬ ವಿಧಾನಸಭಾ ಕ್ಷೇತ್ರದ ತಾಳಗುಪ್ಪ ಹೋಬಳಿಯ ತಾಳಗುಪ್ಪ ಗ್ರಾಮ ಪಂಚಾಯಿತಿಯಲ್ಲಿ ನೆಡೆದಿರಬಹುದಾದ ಅಕ್ರಮ ಅವ್ಯವಹಾರ ಭ್ರಷ್ಟಾಚಾರ ಕುರಿತಾಗಿ ಪೂರಕವಾದ ಪುರಾವೆಗಳ ದೃಡೀಕೃತ ದಾಖಲಾತಿಗಳೊಂದಿಗೆ ಶಿವಮೊಗ್ಗ ಜಿಲ್ಲಾಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಸಕ್ಷಮ ಶಿಸ್ತು ಪ್ರಾಧಿಕಾರಿಗಳಾದ ಹೇಮಂತ್ ಐಎಎಸ್ ರವರಿಗೆ ಖುದ್ದಾಗಿ ನ್ಯಾಯಯುತ ತನಿಖೆಗೆ ಆಗ್ರಹಿಸಿ ದೂರು ಸಲ್ಲಿಸಿದ್ದೂ, ನನ್ನ ದೂರನ್ನು ಪುರಸ್ಕರಿಸಿದ ಹೇಮಂತ್ ಐಎಎಸ್ ಅಧಿಕಾರಿ ವಿಚಾರಣಾ/ ತನಿಖೆಗಾಗಿ ಅಧಿಕಾರಿಗಳ ತಂಡ ರಚನೆ ಮಾಡಿ ಈಗಾಗಲೇ ನಿಯೋಜಿತ ಅಧಿಕಾರಿಗಳು ತನಿಖೆ ನೆಡೆಸಿರುವುದು ಸರಿಯಷ್ಟೇ, ಆದರೇ ಮಾಸಗಳು ಗತಿಸಿದರೂ ನಿಯೋಜಿತ ತನಿಖಾ ತಂಡ ತನಿಖಾ ವರದಿ ಜಿಲ್ಲಾಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಮುಂದಿನ ಕಾನೂನು ಕ್ರಮಕ್ಕೆ ಸಲ್ಲಿಸಲು ಹಿಂದೇಟು ಹಾಕುತ್ತಿರುವ ಬಗ್ಗೆ ಸಂಸದ ಬಿ ವೈ ರಾಘವೇಂದ್ರ ಸಂಬಂಧ ಪಟ್ಟ ಅಧಿಕಾರಿಗಳಿಗೆ ತಡೆ ನೀಡಿರುವ ಬಗ್ಗೆ ಉಹಾಪೋಹಗಳ ವದಂತಿಗಳು ಹಬ್ಬಿರುವುದು ತಡವಾಗಿ ಬೆಳಕಿಗೆ ಬಂದಿರುವುದು ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರು ಪ್ರಜ್ಞಾವಂತರೂ ಸಂಸದ ಬಿ ವೈ ಆರ್ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸುವುದು ಅಷ್ಟೇ ನಗ್ನಸತ್ಯ.
*ಸಂಸದ ಬಿ ವೈ ಆರ್ ಉಹಾಪೋಹದ ವದಂತಿಗಳಿಗೆ ಉತ್ತರಿಸಬಲ್ಲಿರಾ…….?!*
✍️ *ಸಾಮಾಜಿಕ ಹೋರಾಟಗಾರ ಓಂಕಾರ ಎಸ್. ವಿ. ತಾಳಗುಪ್ಪ*
Leave a Reply