Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಮಂಗಳೂರು: ಸಿಸಿಬಿ ಪೊಲೀಸರಿಂದ ಬೃಹತ್‌ ಪ್ರಮಾಣದ ಡ್ರಗ್ಸ್‌ ವಶ : ನೈಜೀರಿಯನ್‌ ಪ್ರಜೆಯ ಬಂಧನ…!!

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ನಗರದಲ್ಲಿ ಮಹತ್ವದ ಕಾರ್ಯಾಚರಣೆಯೊಂದರಲ್ಲಿ ಮಂಗಳೂರು ಸಿಸಿಬಿ ಪೊಲೀಸರು  6 ಕೋಟಿ ರೂ. ಮೌಲ್ಯದ ಮಾದಕ ವಸ್ತುವನ್ನು ಜಪ್ತಿ ಮಾಡಿದ್ದಾರೆ. ಜೊತೆಗೆ ಓರ್ವ ನೈಜೀರಿಯನ್‌ ಪ್ರಜೆಯನ್ನ ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ. ಬಂಧಿತ ಆರೋಪಿ ನೈಜೀರಿಯಾ ಪ್ರಜೆ ಪೀಟರ್ ಇಕೇಡಿ ಬೆಲೊನು ಎಂದು ಗುರುತಿಸಲಾಗಿದೆ.

ಮಂಗಳೂರು ಪೊಲೀಸ್ ಇತಿಹಾಸದಲ್ಲಿ ಇದು ಅತಿ ದೊಡ್ಡ ಕಾರ್ಯಾಚರಣೆಯಾಗಿದೆ. ಕದ್ರಿ ಪೊಲೀಸರಿಂದ ಅರೆಸ್ಟ್ ಆಗಿದ್ದ ಪೆಡ್ಲರ್ ಹೈದರಾಲಿ ಬೆನ್ನತ್ತಿದ್ದ ಪೊಲೀಸರು, ಎಲ್ಲಿಂದ ಡ್ರಗ್ಸ್ ಪೂರೈಕೆ ಆಗುತ್ತೆ? ಅನ್ನೋ ಬಗ್ಗೆ ಶೋಧ ನಡೆಸಿದಾಗ ನೈಜೀರಿಯಾ ಪ್ರಜೆ ಬಗ್ಗೆ ಮಾಹಿತಿ ತಿಳಿದಿದೆ.

ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದಾಗ ನೈಜೀರಿಯಾ ಪ್ರಜೆ ಪೀಟರ್ ಇಕೇಡಿ ಬೆಲೊನು ಸಿಕ್ಕಿಬಿದ್ದಿದ್ದಾನೆ. ಈತ ಬೆಂಗಳೂರಿನ ವಿವೇಕಾನಂದ ನಗರದಲ್ಲಿ 6 ಕೆಜಿ 300 ಗ್ರಾಂನಷ್ಟು ಡ್ರಗ್ಸ್ ಸ್ಟಾಕ್ ಇಟ್ಟಿದ್ದ ಎನ್ನಲಾಗಿದೆ. ಅವಧಿ ಮೀರಿದ ವೀಸಾ ಹೊಂದಿದ್ದು, ಅಕ್ರಮವಾಗಿ ನೆಲೆಸಿದ್ದ ಅನ್ನೋದು ಈ ವೇಳೆ ಗೊತ್ತಾಗಿದೆ. ಕೂಡಲೇ ಆತನನ್ನ ಬಂಧಿಸಿ, ಡ್ರಗ್ಸ್‌ಅನ್ನು ಜಪ್ತಿ ಮಾಡಿದ್ದಾರೆ.

ಈತ ಬೆಂಗಳೂರು ನಗರದಿಂದ, ಕರ್ನಾಟಕದ ವಿವಿಧ ಭಾಗಗಳಿಗೆ ಹಾಗೂ ಬೆಂಗಳೂರು ಮೂಲಕ ಕೇರಳಕ್ಕೆ ಡ್ರಗ್ಸ್ ಪೂರೈಕೆ ಮಾಡುತ್ತಿದ್ದ ಎಂಬ ಶಂಕೆಯೂ ವ್ಯಕ್ತವಾಗಿದೆ. ಒಂದು ಫ್ಲಾಟಲ್ಲಿ ಫ್ಯಾಮಿಲಿ ಇರಿಸಿ, ಇನ್ನೊಂದು ಫ್ಲಾಟಲ್ಲಿ ಡ್ರಗ್ ಸ್ಟಾಕ್ ಇಟ್ಟಿದ್ದ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ. ಪೊಲೀಸರು ಆರೋಪಿಯನ್ನು ಬಂಧಿಸಿ‌ ವಿಚಾರಣೆ ನಡೆಸಿದ್ದಾರೆ.

Leave a Reply

Your email address will not be published. Required fields are marked *