
ಉಡುಪಿ ಜಿಲ್ಲೆ ಇಂದ್ರಾಳಿ ರೈಲು ನಿಲ್ದಾಣದಲ್ಲಿ ಅಸಹಾಯಕ ಸ್ಥಿತಿಯಲ್ಲಿರುವ ಅಸ್ಸಾಂ ಮೂಲದ ಬಾಲಕಿಯನ್ನು ರೈಲ್ವೆ ಇನ್ಸ್ಪೆಕ್ಟರ್ ಮಧುಸೂಧನ್, ಆರ್ ಪಿ ಎಫ್ ಅಪರ್ಣಾ ಕೆ ರವರು ವಿಚಾರಣೆ ನಡೆಸಿ , ಸಮಾಜ ಸೇವಕ ನಿತ್ಯಾನಂದ ವಳಕಾಡುರವರ ಸಹಾಯದಿಂದ ರಕ್ಷಣೆ ಮಾಡಿ ಉಡುಪಿ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಮುಂದೆ ಹಾಜರು ಪಡಿಸಿದ್ದು, ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷರ ಮೌಖಿಕ ಆದೇಶದ ಮೇರೆಗೆ ಬಾಲಕಿಯ ಪೋಷಕರು ಪತ್ತೆಯಾಗುವವರೆಗೆ ಉಡುಪಿ ಜಿಲ್ಲಾ ಸರಕಾರಿ ಬಾಲಕಿಯರ ಬಾಲಮಂದಿರದ ಸ್ವಾಗತ ಕೇಂದ್ರದಲ್ಲಿ ತಾತ್ಕಾಲಿಕ ಸ್ಥಾನಬದ್ಧತೆ ಆದೇಶದಂತೆ ಪುನರ್ವಸತಿಗೊಳಿಸಲಾಗಿತ್ತು.
ಬಾಲಕಿಯ ಪೋಷಕರ ಪತ್ತೆಗೆ ಶ್ರಮವಹಿಸಿದ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯು ಜಾರ್ಖಂಡ್ ರಾಜ್ಯದಲ್ಲಿರುವ ಬಾಲಕಿಯ ಅಕ್ಕನನ್ನು ಸಂಪರ್ಕಿಸಿ ಉಡುಪಿಗೆ ಬರುವಂತೆ ತಿಳಿಸಿದ್ದು, ಈ ದಿನ ಬಾಲಕಿಯ ಅಕ್ಕ ರೂಪ್ ಮಣಿ ಎಂಬವರು ತಮ್ಮ ಸಂಬಂಧಿಕರೊಂದಿಗೆ ಬಾಲಕಿಯನ್ನು ಕರೆದುಕೊಂಡು ಹೋಗಲು ದೂರದ ಜಾರ್ಖಂಡ್ ರಾಜ್ಯದಿಂದ ಬಂದಿದ್ದು ಬಾಲಕಿಯು ಅಕ್ಕನನ್ನು ಗುರುತಿಸಿದ ನಂತರ ಸೂಕ್ತ ಮುನ್ನೆಚ್ಚರಿಕೆ ನೀಡಿ ಬಾಲಕಿಯ ಭವಿಷ್ಯದ ಹಿತದೃಷ್ಟಿಯಿಂದ ಬಾಲಕಿಯನ್ನ ಅಕ್ಕನೊಂದಿಗೆ ಬಿಡುಗಡೆ ಮಾಡಿ ಕಳುಹಿಸಿಕೊಡಲಾಗಿದೆ.
ಮನೆ ಬಿಟ್ಟು ಬಂದಿರುವ ಬಾಲಕಿಯನ್ನು ಸುರಕ್ಷಿತವಾಗಿ ಮನೆಗೆ ತಲುಪಿಸುವ ಜವಾಬ್ಧಾರಿಯೊಂದಿಗೆ ಉತ್ತಮ ಸೇವೆ ನೀಡಿದ ಉಡುಪಿ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಕಾರ್ಯವೈಖರಿಯನ್ನು ಜಾರ್ಖಂಡ್ ರಾಜ್ಯದಿಂದ ಬಂದಿರುವ ಬಾಲಕಿಯ ಪೋಷಕರು ಮತ್ತು ಸಂಬಂಧಿಕರು ಕೊಂಡಾಡಿ ಪ್ರಶಂಸೆ ವ್ಯಕ್ತಪಡಿಸಿರುತ್ತಾರೆ.













Leave a Reply