Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಟ್ರೇಡಿಂಗ್ ಹೆಸರಿನಲ್ಲಿ ಹಣ ಹೂಡಿಕೆ ಮಾಡಿಸಿ 97 ಕೋಟಿ ರೂಪಾಯಿ ವಂಚನೆ : ಆ್ಯಕ್ಸಿಸ್ ಬ್ಯಾಂಕ್ ನೌಕರರು ಸೇರಿ ಒಟ್ಟು 8 ಮಂದಿ ಸಿಸಿಬಿ ಬಲೆಗೆ…!!

ಬೆಂಗಳೂರು : ಸಿಸಿಬಿ ಪೊಲೀಸರ ಬೃಹತ್ ಕಾರ್ಯಾಚರಣೆಯಲ್ಲಿ ಆ್ಯಕ್ಸಿಸ್ ಬ್ಯಾಂಕ್ನ ನೌಕರರು ಸೇರಿ ಒಟ್ಟು 8 ಜನರು ಬಂಧನಕ್ಕೊಳಗಾಗಿದ್ದಾರೆ. ವಿಐಪಿ ಷೇರು ಟ್ರೇಡಿಂಗ್ ಹೆಸರಿನಲ್ಲಿ ಹಣ ಹೂಡಿಕೆ ಮಾಡಿಸಿ ವಂಚನೆ ಮಾಡಿರುವ ಆರೋಪ ಕೇಳಿ ಬಂದಿದೆ.

ಬೆಂಗಳೂರಿನ ನಾಗರಭಾವಿ ಆ್ಯಕ್ಸಿಸ್ ಬ್ಯಾಂಕ್ನಲ್ಲಿ ಇಂತಹದೊಂದು ಘಟನೆ ನಡೆದಿದೆ. ಇದೇ ಮೊದಲ ಬಾರಿ ಇಂತಹ ಆರೋಪದಲ್ಲಿ ಬ್ಯಾಂಕ್ ಮ್ಯಾನೆಜರೊಬ್ಬರು ಬಂಧನಕ್ಕೆ ಒಳಗಾಗಿದ್ದಾರೆ. 

ಷೇರ್ ಟ್ರೇಡಿಂಗ್ನಲ್ಲಿ ಹಣ ಹೂಡಿಕೆ ಮಾಡುವಂತೆ ಹೇಳಿ. ಅವರನ್ನು ನಂಬಿಸಿ ವಂಚಿಸಲಾಗಿದೆ ಎಂಬ ಆರೋಪ ಬ್ಯಾಂಕ್ ಸಿಬ್ಬಂದಿಗಳ ವಿರುದ್ಧ ಕೇಳಿ ಬಂದಿದೆ. ಅವರ ಮಾತನ್ನು ಕೇಳಿ 1.5 ಕೋಟಿ ರೂಪಾಯಿ ಹಣ ಹೂಡಿಕೆ ಮಾಡಿದ್ದರು ಜನರು ನಂತರ ಷೇರು ಮಾರುಕಟ್ಟೆಯಲ್ಲಿ 28 ಕೋಟಿ ರೂಪಾಯಿ ಲಾಭ ಬಂದಿರುವುದು ಗೊತ್ತಾಗಿ, ಹಣವನ್ನು ವಾಪಸ್ ಪಡೆಯಲು ಹೋಗಿದ್ದಾರೆ.

ಈ ವೇಳೆ 75 ಲಕ್ಷ ರೂಪಾಯಿ ಕೊಡುವಂತೆ ಆರೋಪಿಗಳು ಡಿಮ್ಯಾಂಡ್ ಇಟ್ಟಾಗ, ತಾವು ವಂಚನೆಗೆ ಒಳಗಾಗಿದ್ದೇವೆ ಎಂಬುದು ಜನರಿಗೆ ಗೊತ್ತಾಗಿದೆ. ಇದೇ ವಿಚಾರವಾಗಿ ಸೈಬರ್ ಠಾಣೆಯಲ್ಲಿ ಸುಮಾರು 245 ದೂರುಗಳು ದಾಖಲಾಗಿವೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ಬ್ಯಾಂಕ್ ಮ್ಯಾನೇಜರ್ ಕಿಶೋರ್, ಸೇಲ್ಸ್ಮೆನ್ ಮನೋಹರ್, ರಾಕೇಶ್ ಕಾರ್ತಿಕ್ ಸೇರಿದಂತೆ ಅಕೌಂಟ್ ಹೋಲ್ಡರ್ ಕೆಂಚೇಗೌಡ, ರಘು, ಲಕ್ಷ್ಮೀಕಾಂತ್, ಮಾಲ ಎಂಬುವವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

Leave a Reply

Your email address will not be published. Required fields are marked *