ಕೋಟ: ಗೆಳೆಯರ ಬಳಗ ಕಾರ್ಕಡ ವತಿಯಿಂದ ಅ. 19ರಂದು ಶನಿವಾರ ಸಂಜೆ 6:30 ಕ್ಕೆ ಕಾರ್ಕಡ ಗಿರಿಜಾ ಕಲ್ಯಾಣ ಮಂಟಪದಲ್ಲಿ ಕಾರಂತರ ಸಂಸ್ಮರಣೆ ಹಾಗೂ ಗೆಳೆಯರ ಬಳಗ ಕಾರಂತ ಪುರಸ್ಕಾರ ಸಮಾರಂಭ ನಡೆಯಲಿದೆ.
ಡಾ. ಕೋಟ ಶಿವರಾಮ ಕಾರಂತರ ಹುಟ್ಟು ಹಬ್ಬದ ಪ್ರಯುಕ್ತ, ಪ್ರತಿ ವರ್ಷವೂ ನೀಡುತ್ತಾ ಬಂದಿರುವ ಗೆಳೆಯರ ಬಳಗ ಕಾರಂತ ಪುರಸ್ಕಾರ 2024 ಪ್ರಶಸ್ತಿಗೆ ನಾಡಿನ ಹಿರಿಯ ಸಾಹಿತಿ, ಸಂಘಟಕ, ಕವಿ , ಕಾದಂಬರಿಕಾರ, ಸಾಂಸ್ಕöÈತಿಕ ಚಿಂತಕ, ಡಾ. ನಾ. ಮೊಗಸಾಲೆ ಅವರು ಭಾಜನರಾಗಿದ್ದಾರೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ರಾಜ್ಯಾಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು ವಹಿಸಲಿದ್ದಾರೆ. ಕರ್ನಾಟಕ ಬ್ಯಾಂಕ್ ಸಹಾಯಕ ಮಹಾ ಪ್ರಬಂಧಕಾರದ ವಾದಿರಾಜ ಕೆ ಅವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಸಂಜೆ 5 ರಿಂದ ಕಾರ್ಯಕ್ರಮ ಹಾಗೂ ರಾತ್ರಿ ಶ್ರೀ ಮೆಕ್ಕೆಕಟ್ಟು ಮೇಳದ ಆಯ್ದ ಕಲಾವಿದರಿಂದ ಪೌರಾಣಿಕ ಯಕ್ಷಗಾನ ಪಾರಿಜಾತ ನರಕಾಸುರ ನಡೆಯಲಿದೆ















Leave a Reply