Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಉಡುಪಿ ಜಿಲ್ಲಾ ಸರ್ಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷ ಷಡಕ್ಷರಿ ಪಟಾಲಂ ದಿನಕರ ಶೆಟ್ಟಿ ಕರ್ಮಕಾಂಡ – ವರ್ಗಾವಣೆ ಆದೇಶವಾಗಿ ವಸಂತಗಳೇ ಉರುಳಿದರೂ ವಸತಿ ಗೃಹ ತೆರವು ಮಾಡದೇ ಸರ್ಕಾರದ ಭೋಕ್ಕಸಕ್ಕೆ ತೀವ್ರ ನಷ್ಟ!!  – ಖಡಕ್ ಅಧಿಕಾರಿ ರಾಮಣ್ಣ ಗೌಡ ದಾಖಲಿಸುವವರೇ ಕ್ರಿಮಿನಲ್ ಪ್ರಕರಣ?

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷ ಷಡಕ್ಷರಿ ವಸತಿ ಗೃಹ ತೆರವು ಸಹಿತ ದಂಡ ಸರ್ಕಾರದ ಆದೇಶ ಬೆನ್ನಲ್ಲೇ ಉಡುಪಿ ಜಿಲ್ಲಾ ಸರ್ಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷ ಷಡಕ್ಷರಿ ಪಟಾಲಂ ದಿನಕರ ಶೆಟ್ಟಿ ಕರ್ಮಕಾಂಡ – ವರ್ಗಾವಣೆ ಆದೇಶವಾಗಿ ವಸಂತಗಳೇ ಉರುಳಿದರೂ ವಸತಿ ಗೃಹ ತೆರವು ಮಾಡದೇ ಸರ್ಕಾರದ ಭೋಕ್ಕಸಕ್ಕೆ ತೀವ್ರ ನಷ್ಟ – ಕುಂಭಕರ್ಣ ನಿದ್ರೆಯಲ್ಲಿ ಕರ್ನಾಟಕ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು?

ಕುಂದಾಪುರ : ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷ *ಷಡಕ್ಷರಿ ಸರ್ಕಾರಿ ವಸತಿ ಗೃಹ ದಂಡ ಸಹಿತ ತೆರವು ಬಗ್ಗೆ ಸರ್ಕಾರದ ಆದೇಶ ಹೊರಬೀಳುತ್ತಲೇ ಇಲ್ಲೊಬ್ಬ ಷಡಕ್ಷರಿ ಪಟಾಲಂ ನ ಮಹಾಶಯ ವರ್ಗಾವಣೆಯಾಗಿ ವರ್ಷಗಳೇ ಕಳೆದರೂ ಸರ್ಕಾರಿ ವಸತಿ ಗೃಹದಲ್ಲೇ ವಾಸ್ತವ್ಯ ಹಿಂದೇ ಕರ್ನಾಟಕ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಕುಂಭಕರ್ಣ ನಿದ್ರೆಯಲ್ಲಿದ್ದಾರೆಯೇ ಎಂದೂ ಉತ್ತರವೇ ಸಿಗದ ಯಕ್ಷಪ್ರೆಶ್ನೆಯೊಂದಿಗೆ ಬೆತ್ತಲೆ ಜಗತ್ತಿನ ಪ್ರಜ್ಞಾವಂತರಲ್ಲಿ ಮೂಡುವುದು ಹೀಗೂ ಉಂಟೇ………?!

ಕುಂದಾಪುರ : ಉಡುಪಿ ಜಿಲ್ಲಾ ಸರ್ಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷರಾದ ದಿನಕರ ಶೆಟ್ಟಿ ಅವರು ಈ ಹಿಂದೆ ಕುಂದಾಪುರದಲ್ಲಿ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾಗ ಕುಂದಾಪುರದ ಲೋಕೋಪಯೋಗಿ ಇಲಾಖೆಯ ವ್ಯಾಪ್ತಿಯೊಳಗೆ ಬರುವ ವಸತಿಗೃಹದಲ್ಲಿ ವಾಸವಾಗಿದ್ದರು. ನಂತರ ಅವರ ವರ್ಗಾವಣೆ ಬ್ರಹ್ಮವಾರ ತಾಲೂಕಿನ ಅಲಂಗಾರ ಕಿರಿಯ ಪ್ರಾಥಮಿಕ ಶಾಲೆಗೆ ಶಿಕ್ಷಕರಾಗಿರುತ್ತಾರೆ,

ಕುಂದಾಪುರದ ಅನಗಳ್ಳಿ ಶಾಲೆಯಲ್ಲಿ ಕರ್ತವ್ಯ ಲೋಪದ ಆರೋಪದ ಮೇಲೆ ಇವರನ್ನು ವರ್ಗಾವಣೆ ಮಾಡಲಾಗಿತ್ತು ಎನ್ನಲಾಗಿದೆ. ಆದರೂ ಕೂಡ ಕುಂದಾಪುರದ ವಸತಿ ಗೃಹವನ್ನು ದಿನಕರ ಶೆಟ್ಟಿಯವರು ಖಾಲಿ ಮಾಡಿರಲಿಲ್ಲ. ಬದಲಾಗಿ ಸರಿಸುಮಾರು ಒಂದು ವರ್ಷದಿಂದ ಸರಕಾರಿ ನೌಕರರ ಸಂಘದಲ್ಲಿ ಕೆಲಸ ಮಾಡುತ್ತಿರುವ ಸರಕಾರಿ ನೌಕರರ ಅಲ್ಲದ ಸವಿತ ಮಡಿವಾಳರವರಿಗೆ ವಾಸ್ತವ ಮಾಡಲು ಅನುಕೂಲ ಮಾಡಿಕೊಟ್ಟಿರುತ್ತಾರೆ. ಕಳೆದ 3 ತಿಂಗಳಿಂದ ಹಲವಾರು ಸರಕಾರಿ ನೌಕರರು ದೂರು ನೀಡಿದರು, ಹಲವು ನೋಟಿಸ್ ನೀಡಿದರು. ಲೋಕೋಪಯೋಗಿ ಇಲಾಖೆಯ ನೀಡಿದ್ದ ವಸತಿ ಗೃಹವನ್ನು ತೆರವುಗೊಳಿಸಲು ಹರಸಾಹಸ ಪಟ್ಟಿದೆ. ಲೋಕೋಪಯೋಗಿ ಇಲಾಖೆಯ ದಕ್ಷ ಖಡಾಕ್ ಅಧಿಕಾರಿ ರಾಮಣ್ಣ ಗೌಡರವರು ಕೊನೆಗೂ ವಸತಿಗೃಹವನ್ನು ಒಪ್ಪಿಸುವಂತೆ ದಿನಕರ ಶೆಟ್ಟಿಗೆ ಸೂಚಿಸಿ, ಇಂದು ವಸತಿಗೃಹವನ್ನು ಹಿಂಪಡೆದು ಕೊಂಡಿರುದಕ್ಕೆ ಕುಂದಾಪುರದ ಜನತೆ ರಾಮಣ್ಣ ಗೌಡರರನ್ನು ಕೊಂಡಾಡಿದೆ.

ಒಂದು ವರ್ಷಗಳ ಕಾಲ ಆಕ್ರಮವಾಗಿ ಸರಕಾರಿ ವಸತಿಗೃಹದಲ್ಲಿ ವಾಸಿಸುತ್ತಿದ್ದ  ಸವಿತಾ ಮಡಿವಾಳರ ಮತ್ತು ದಿನಕರ್ ಶೆಟ್ಟಿ ಅವರ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸುತ್ತದೆಯೇ? ಒಂದು ವರ್ಷಗಳ ಕಾಲ ಸರಕಾರಕ್ಕೆ ಆದ ನಷ್ಟವನ್ನು  ದಿನಕರ ಶೆಟ್ಟಿಯವರಿಂದ ದಂಡ ರೂಪದಲ್ಲಿ  ಪಡೆಯುತ್ತದೆಯೇ ಎಂದು ಕಾದು ನೋಡಬೇಕಾಗಿದೆ?. ಶಿಕ್ಷಣ ಇಲಾಖೆ, ಇವರ ಮೇಲೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದೇ ಎಂದು ಉಡುಪಿ ಜಿಲ್ಲೆಯ ಜನತೆ ಕಾತುರದಿಂದ ಎದುರು ನೋಡುತ್ತಿದೆ

Leave a Reply

Your email address will not be published. Required fields are marked *