Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಭಜನಾ ಸಂಸ್ಕಾರ ಮನೆ ಮನದಲ್ಲಿ ಪಸರಿಸಲಿ- ಸತೀಶ್ ಹೆಚ್ ಕುಂದರ್
ಮಣೂರು ದೇಗುಲದ ಭಜನಾ ತಂಡ ಚಾಲನೆ ನೀಡಿ ಹೇಳಿಕೆ

ಕೋಟ: ಮಣೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಇದರ ಅಧೀನಕ್ಕೊಳಪಟ್ಟ ಶ್ರೀ ಮಹಾಲಿಂಗೇಶ್ವರ ಭಜನಾ ಮಂಡಳಿ ವಿದ್ಯುಕ್ತವಾಗಿ ಶನಿವಾರ ಚಾಲನೆಗೊಂಡಿತು.
ಭಜನಾ ತಂಡವನ್ನು ಮಣೂರು ದೇಗುಲದ ಅಧ್ಯಕ್ಷ  ಅಧ್ಯಕ್ಷ  ಸತೀಶ್ ಕುಂದರ್ ಉದ್ಘಾಟಿಸಿ ಮಾತನಾಡಿ ಭಜನಾ ಸಂಸ್ಕಾರ ಪ್ರತಿ ಮನೆ ಮನದಲ್ಲೂ ಬೆಳೆಯಬೇಕು ಆಗಮಾತ್ರ  ಸಮಾಜದಲ್ಲಿ ಧಾರ್ಮಿಕ ಪ್ರಜ್ಞೆ ಪಸರಿಸಿ ಕೊಳ್ಳುತ್ತದೆ ,ಭಜನೆ ಮೂಲಕ ದೇವರನ್ನು ಅತಿ ಸಮೀಪಿಸಿದ ಅನುಭವ ದೊರೆಯುತ್ತದೆ, ಪ್ರಸ್ತುತ ಕರಾವಳಿ ಭಜನಾ ಸಂಸ್ಕಾರ ತಾಣವಾಗಿ ರೂಪುಗೊಂಡಿದೆ, ಮಕ್ಕಳಲ್ಲಿ ಭಜನಾ ಸಂಸ್ಕಾರ ಬೆಳೆಸಿ ಎಂದು ದೇಗುಲದಲ್ಲಿ ಆರಂಭಗೊ0ಡ ಭಜನಾ ಸಂಕೀರ್ತನೆ ನಿತ್ಯ ನಿರಂತರವಾಗಿ ನಡೆಯಲಿ ಎಂದು ಹಾರೈಸಿದರು.

ದೇಗುಲದ ಅರ್ಚಕ  ರಘುಪತಿ ಭಟ್ , ದೇಗುಲ ಜೀರ್ಣೋದ್ಧಾರ ಸಮಿತಿಯ ಎಂ. ಎನ್. ಮಧ್ಯಸ್ಥ,  ನಾರಾಯಣ ಖಾರ್ವಿ,  ಎಂ. ವಿ.ಮೈಯ್ಯ, ಶ್ರೀ ರಾಮ ಮಹಿಳಾ ಭಜನಾ ಮಂಡಳಿಯ ಸದಸ್ಯರು, ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮತ್ತು ಜೀರ್ಣೋದ್ಧಾರ ಸಮಿತಿಯ ಸದಸ್ಯರು ಹಾಗೂ ಊರಿನ ಹಲವು ಸದ್ಭಕ್ತ ಬಂಧುಗಳು ಉಪಸ್ಥಿತರಿದ್ದರು. ಉದ್ಘಾಟನೆಯ ನಂತರ ಮಂಡಳಿಯ ಪ್ರಥಮ ಭಜನಾ ಸಂಕೀರ್ತನೆ ನಡೆಯಿತು.

ಮಣೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಇದರ ಅಧೀನಕ್ಕೊಳಪಟ್ಟ ಶ್ರೀ ಮಹಾಲಿಂಗೇಶ್ವರ ಭಜನಾ ಮಂಡಳಿಯನ್ನು ಭಜನಾ ತಂಡವನ್ನು ಮಣೂರು ದೇಗುಲದ ಅಧ್ಯಕ್ಷ  ಅಧ್ಯಕ್ಷ  ಸತೀಶ್ ಕುಂದರ್ ಉದ್ಘಾಟಿಸಿದರು. ದೇಗುಲದ ಅರ್ಚಕ  ರಘುಪತಿ ಭಟ್ , ದೇಗುಲ ಜೀರ್ಣೋದ್ಧಾರ ಸಮಿತಿಯ ಎಂ. ಎನ್. ಮಧ್ಯಸ್ಥ ಮತ್ತಿತರರು ಇದ್ದರು.

Leave a Reply

Your email address will not be published. Required fields are marked *