
ಶಿಕ್ಷಣ ಸಚಿವರೇ ಸ್ವಮತ ಕ್ಷೇತ್ರವಾದ ತಾಳಗುಪ್ಪದಲ್ಲಿರುವ ವೀನಸ್ ವೈನ್ ಶಾಪ್ ನಲ್ಲಿನ ತನ್ನದೇ ಮಳಿಗೆ ಹಿಂಭಾಗದಲ್ಲಿ ಅಕ್ರಮವಾಗಿ ಮದ್ಯ ಮಾರಾಟ – ಸದರಿ ಮದ್ಯದಂಗಡಿಯಿಂದ ದಿನನಿತ್ಯವಾಗಿ ಸ್ಥಳೀಯ ನಿವಾಸಿಗಳು, ಮುಖ್ಯ ರಸ್ತೆಯಲ್ಲಿ ಓಡಾಡುವ ಶಾಲಾ ಮಕ್ಕಳು ಮಹಿಳೆಯರು, ಹಿರಿಯ ನಾಗರೀಕರುಗಳಿಗೆ ವಾಹನ ದಟ್ಟನೆಯಿಂದ ಟ್ರಾಫಿಕ್ ಜಾಮ್ ಸಮಸ್ಯೆ ಮದ್ಯ ವ್ಯಸನಿಗಳಿಂದ ಆಗುತ್ತಿರುವ ತೊಂದರೆಗೆ ಬ್ರೇಕ್ ಹಾಕಲು ಸ್ಥಳೀಯರು ಎಷ್ಟೇ ದೂರು ಸಲ್ಲಿಸಿದರೂ ಸಾರ್ವಜನಿಕರಿಗೆ ಪರಿಹಾರ ಒದಗಿಸಲು ಸದರಿ ಮದ್ಯದಂಗಡಿ ಮಾಲೀಕನ ವಿರುದ್ಧ ಸೂಕ್ತ ಕಾನೂನು ಕ್ರಮಕ್ಕೆ ಮುಂದಾಗದೇ ವಿಫಲರಾಗುತ್ತಿರುವ ಅಬಕಾರಿ ಪೊಲೀಸ್ ಇಲಾಖೆಯ ಹಿಂದೇ ಅಡಗಿದೆಯೋ ಕುರುಡು ಕಾಂಚನ…..?!
ತಾಳಗುಪ್ಪ :- ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ಸೊರಬ ವಿಧಾನಸಭಾ ಕ್ಷೇತ್ರದ *ತಾಳಗುಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಾರ್ಡ್ ಸಂಖ್ಯೆ 01 ರಲ್ಲಿನ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲೇ ಇರುವ ” ವೀನಸ್ ವೈನ್ಸ್ ಸ್ಟೋರ್ ” ಮಾಲೀಕನು ಅಕ್ರಮವಾಗಿ ಮದ್ಯವನ್ನೂ ತನ್ನ ಅಂಗಡಿಯ ಹಿಂಭಾಗದಲ್ಲೇ ಮದ್ಯ ವ್ಯಸನಿಗಳಿಗೆ ಸಕಲ ರೀತಿಯಲ್ಲಿ ಮದ್ಯ ಸೇವಿಸಲು ವ್ಯವಸ್ಥೆಯೊಂದಿಗೆ ರಾಜಾರೋಷವಾಗಿ ಅಕ್ರಮ ಮದ್ಯ ಮಾರಾಟ ಮಾಡುತ್ತಿರುವುದು ಅಕ್ಷಮ್ಯ ಅಪರಾಧವಾಗಿದ್ದೂ ಸರ್ಕಾರ ನೀಡಿದ ಮದ್ಯದಂಗಡಿ ಪರವಾನಿಗೆಯ ವಿರುದ್ಧ ಸದರಿ ಮದ್ಯದಂಗಡಿ ಮಾಲೀಕನ ಅಕ್ರಮ ಮದ್ಯ ಮಾರಾಟ ಕಾನೂನು ಉಲ್ಲಂಘನೆಯಾಗಿರುವುದು ಕಟುಸತ್ಯ*
ತಾಳಗುಪ್ಪದ “ವೀನಸ್ ವೈನ್ ಶಾಪ್ ” ಅಕ್ರಮ ಮದ್ಯ ಮಾರಾಟದಿಂದ ಮದ್ಯ ವ್ಯಸನಿಗಳಿಂದ ಸ್ಥಳೀಯ ನಿವಾಸಿಗಳು, ದಿನನಿತ್ಯ ಹೆದ್ದಾರಿಯಲ್ಲಿ ಸಂಚರಿಸುವ ಶಾಲಾ ಮಕ್ಕಳು, ಹಿರಿಯ ನಾಗರೀಕರುಗಳು, ವಾಹನ ದಟ್ಟನೆಯಿಂದ ವಾಹನ ಸವಾರರಿಗೆ ಆಗುತ್ತಿರುವ ತೊಂದರೆಗಳಿಂದ ಪರಿಹಾರ ಒದಗಿಸುವಂತೆ ಸಮಾಜದ ಸ್ವಾಸ್ಟ್ಯ ಕಾಪಾಡುವಂತೆಯೂ ಸದರಿ ಮದ್ಯದಂಗಡಿ ವಿರುದ್ಧ ಸೂಕ್ತ ಶಿಸ್ತು ಕ್ರಮಕ್ಕೆ ಎಷ್ಟೇ ಮನವಿ ಸಹಿತ ದೂರು ಸಲ್ಲಿಸಿದರೂ ಸಂಬಂಧ ಪಟ್ಟ ಅಬಕಾರಿ ಇಲಾಖೆ ಹಾಗೂ ಪೊಲೀಸ್ ಇಲಾಖೆಯ ವಿರುದ್ಧ ತೀವ್ರ ಆಕ್ರೋಶದೊಂದಿಗೆ ಸಂಬಂಧ ಪಟ್ಟ ಇಲಾಖೆಯವರು ಮದ್ಯದಂಗಡಿ ಮಾಲೀಕನಿಂದ ಯಾವುದೋ ಆಮಿಷಕ್ಕೆ ಬಲಿಯಾಗಿರಬಹುದು ಎನ್ನುವುದು ಮೇಲ್ನೋಟಕ್ಕೆ ಕಂಡುಬರುತ್ತಿರುವುದು ನಗ್ನಸತ್ಯವಾಗಿದೆ.
ಕರ್ನಾಟಕ ರಾಜ್ಯ ಸರ್ಕಾರದ ಘನತೆವೆತ್ತ ಶಿಕ್ಷಣ ಸಚಿವರೂ, ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವರೂ, ಸೊರಬ ವಿಧಾನಸಭಾ ಕ್ಷೇತ್ರದ ಜನಪ್ರಿಯ ಜನಸ್ನೇಹಿ ಶಾಸಕರಾದ ಮಧು ಬಂಗಾರಪ್ಪರವರಲ್ಲಿ ತಾಳಗುಪ್ಪ ” ವೀನಸ್ ವೈನ್ಸ್ ಸ್ಟೋರ್ ” ರವರಿಂದ ಅಕ್ರಮ ಮದ್ಯ ಮಾರಾಟದಿಂದ ಸಮಾಜದ ಮೇಲೆ ಆಗುತ್ತಿರುವ ದುಷ್ಪರಿಣಾಮ ತಪ್ಪಿಸಿ, ಸಂಬಂಧ ಪಟ್ಟ ಅಬಕಾರಿ ಹಾಗೂ ಪೊಲೀಸ್ ಇಲಾಖೆಯವರಿಗೆ ಸದರಿ ಮದ್ಯದಂಗಡಿ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಸೂಚಿಸುವಂತೆ ನಾಗರೀಕರುಗಳ ಒಕ್ಕೊರೊಲ ಧ್ವನಿಯಾಗಿದೆ.
✍️ಓಂಕಾರ ಎಸ್. ವಿ. ತಾಳಗುಪ್ಪ*
Leave a Reply