Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಪ್ರಾಂಶುಪಾಲರಾಗಿ ಕೋಟೇಶ್ವರ ಕುಂದಾಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ರಾಮರಾಯ ಆಚಾರ್ಯ

ಕೋಟೇಶ್ವರ ಕುಂದಾಪುರ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ಹಿರಿಯ ಪ್ರಾಧ್ಯಾಪಕರಾದ ರಾಮರಾಯ ಆಚಾರ್ಯ ಅವರು ಕಾಲೇಜಿನ ಹೊಸ ಪ್ರಾಂಶುಪಾಲರಾಗಿ ಆಯ್ಕೆಯಾಗಿದ್ದು, ಈ ಸುದ್ದಿ ಕಾಲೇಜಿನ ವಿದ್ಯಾರ್ಥಿಗಳು, ಸಿಬ್ಬಂದಿ ಮತ್ತು ಪಾಲಕರಿಗೆ ಸಂತಸಕ್ಕೆ ಕಾರಣವಾಗಿದೆ.

ಹಿರಿಯ ಪ್ರಾಧ್ಯಾಪಕರಾದ ಪ್ರೊ.ಶೇಖರ್ ಬಿ, ಗ್ರಂಥಪಾಲಕರಾದ ರವಿಚಂದ್ರ, ಶ್ರೀ ನಾಗರಾಜ್ ಯು, ವಿನಯಚಂದ್ರ, ಡಾ.ಭಾಗೀರಥಿ ನಾಯ್ಕ, ವರಧರಾಜ್, ಪ್ರಜ್ವಲ, ರೋಹಿಣಿ, ಕುಮಾರ್ ದೊಡ್ಡಮನಿ ಮತ್ತು ಎಲ್ಲಾ ಬೋಧಕ ಹಾಗೂ  ಬೋಧಕೇತರ ಸಿಬ್ಬಂದಿಗಳು ಹೊಸ ಪ್ರಾಂಶುಪಾಲರನ್ನು ಸನ್ಮಾನಿಸಿ ಅಭಿನಂದಿಸಿದ್ದಾರೆ. ಉತ್ತಮ ವಾಗ್ಮಿಯಾಗಿರುವ ರಾಮರಾಯ ಆಚಾರ್ಯ ಅವರು ವಿದ್ಯಾರ್ಥಿಗಳೊಂದಿಗೆ ಸುಲಭವಾಗಿ ಬೆರೆಯುವ ಸಾಮರ್ಥ್ಯ ಹೊಂದಿದ್ದು, ಅವರ ಮಾರ್ಗದರ್ಶನದಲ್ಲಿ ಕಾಲೇಜು ಹೊಸ ಎತ್ತರಕ್ಕೆ ಏರುವ ನಿರೀಕ್ಷೆ ಇದೆ. ಅವರು ಶೈಕ್ಷಣಿಕ ಶಿಸ್ತು ಕಾಪಾಡುವುದು , ಕಾಲೇಜಿನ ಶೈಕ್ಷಣಿಕ ವಾತಾವರಣವನ್ನು ಸುಧಾರಿಸಲು ಹಲವು ಹೊಸ ಕ್ರಮಗಳನ್ನು ಕೈಗೊಳ್ಳುವ ಉತ್ತಮ ನಾಯಕತ್ವ ಹೊಂದಿದ್ದಾರೆ.  ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶಗಳ ಕುರಿತು ಮಾಹಿತಿ ನೀಡಿ, ಅವರು ಉಜ್ವಲ ಭವಿಷ್ಯವನ್ನು ಕಟ್ಟಿಕೊಳ್ಳಲು ಸಹಾಯ ಮಾಡುವರು. ಇವರ ನಾಯಕತ್ವದಲ್ಲಿ ಕಾಲೇಜು ಶೈಕ್ಷಣಿಕ ಕ್ರೀಡಾ ಮತ್ತು ಸಾಂಸ್ಕೃತಿಕ ಬೆಳವಣಿಗೆ ಅವರ ಅನುಭವದಿಂದ ಮತ್ತು ಜ್ಞಾನದಿಂದ ಕಾಲೇಜಿನ ಸರ್ವಾಂಗೀಣ ಅಭಿವೃದ್ಧಿ ಸಾಧ್ಯವಾಗಲಿದೆ ಎಂದು ಹಿರಿಯ ಪ್ರಾಧ್ಯಾಪಕ ಡಾ.ಶೇಖರ್ ಬಿ ಹೇಳಿದರು.

Leave a Reply

Your email address will not be published. Required fields are marked *