ಗುಜ್ಜಾಡಿ : ಇತ್ತೀಚಿಗಷ್ಟೇ ಗುಜ್ಜಾಡಿ PDO ಮತ್ತು ಇಂಜಿಯನಿಯರ್ ಮೇಲೆ ಲೋಕಾಯುಕ್ತ ದೂರನ್ನು ಆದೇ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ನಾಗರತ್ನ ಖಾರ್ವಿಯವರು ದಾಖಲಿಸಿದರು. ಹೀಗೆ ಈ ಪಂಚಾಯತ್ ನ ವಿರುದ್ಧ ಹಲವಾರು ದೂರುಗಳು ಸಾರ್ವಜನಿಕ ವಲಯದಿಂದ ಕೇಳಿ ಬರುತ್ತಲೆ ಇದೆ. ಶಾಲೆಯ ಶೌಚಾಲಯ ಧ್ವಂಸ ಪ್ರಕರಣ, ಕುಡಿಯುವ ಕೊಳಚೆ ನೀರು, ಸ್ಮಶಾನ ಸ್ಥಳಾತರ ಪ್ರಕರಣ, ಪಂಚಾಯಿತಿನ ಹತ್ತಿರದಲ್ಲಿದ್ದ ಮರಗಳನ್ನು ಕಡಿದ ಪ್ರಕರಣ, ಕುಡಿಯುವ ನೀರಿನ ಬಾವಿ ತೆಗೆದು ಮುಚ್ಚದ ಪ್ರಕರಣ, ಚರಂಡಿ ಕಾಮಗಾರಿ ಪ್ರಕರಣ, ಹೀಗೆ ಹೇಳುತ್ತ ಹೋದರೆ ಸಾಲು ಸಾಲು ಪ್ರಕರಣಗಳನ್ನು ಹೇಳಬಹುದು.

ಸದ್ಯ ಮತ್ತೊಂದು ಪಂಚಾಯತನ ಎಡವಟ್ಟನ್ನು ದಲಿತ ಮುಖಂಡರಾದ ಮಂಜುನಾಥ್ ಮಾವಿನಕಟ್ಟೆ ಅವರು ಬಯಲುಗೆಳಿದಿದ್ದಾರೆ. ಪ್ರಭಾವಿ ಉದ್ಯಮಿಯೊಬ್ಬರು ಸರಿಸುಮಾರು 2-3 ಕಿಲೋಮೀಟರ್ ಪೈಪ್ ಲೈನ್ ಕ್ರಮಿಸಿ ತಮ್ಮ ಮನೆಯ ಬಾವಿಯಿಂದ ಅವರ ಐಸ್ ಪ್ಲಾಂಟ್ ವರೆಗೂ ಪಂಚಾಯತ್ ವ್ಯಾಪ್ತಿಯ ಜಾಗದಲ್ಲಿ ಅನುಮತಿ ಪಡೆಯದೆ ಅನಧಿಕೃತವಾಗಿ ಪೈಪ್ ಲೈನ್ ಜೋಡಣೆ ಮಾಡಿದ್ದು ಪಂಚಾಯತ್ ಸ್ಥಳದಿಂದಲೇ ಹಾದು ಹೋಗಿ ಕಾನೂನಿನ ಉಲ್ಲಂಘನೆ ಮಾಡಿದ್ದಾರೆ. ಪ್ರಭಾವಿ ಉದ್ಯಮಿಗೆ ಪಂಚಾಯತ್ ಅಧಿಕಾರಿಗಳು ಮತ್ತು ಕೆಲವೊಂದು ಪಂಚಾಯತ್ ಚುನಾಯಿತ ಅಭ್ಯರ್ಥಿಗಳು ಅಕ್ರಮಕ್ಕೆ ಸಾಥ್ ನೀಡುವ ಹುನ್ನಾರ ನಡೆಸಿದ್ದಾರೆಂದು ದಲಿತ ಮುಖಂಡ ಮಂಜುನಾಥ್ ಮಾವಿನಕಟ್ಟೆ ಆಕ್ಷೇಪಣೆ ವ್ಯಕ್ತಪಡಿಸಿದ್ದಾರೆ. ಈ ಕೂಡಲೇ ಪೈಪ್ ಲೈನ್ ಅನ್ನು ತೆರುಗೊಳಿಸಬೇಕೆಂದು ಆಗ್ರಹಿಸಿದ್ದಾರೆ.
ವರದಿ : ಪುರುಷೋತ್ತಮ್ ಪೂಜಾರಿ















Leave a Reply