Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಬ್ರಹ್ಮಾವರ: 8 ಲಕ್ಷ ಮೌಲ್ಯದ 10ಕೆಜಿ; ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ಮೂವರ ಬಂಧನ

ಬ್ರಹ್ಮಾವರ: ಬ್ರಹ್ಮಾವರ ತಾಲೂಕಿನ ಉಪ್ಪೂರು- ಕೆಜಿ ರೋಡ್ ಸಮೀಪ ಕಾರ್ಯಾಚರಣೆ ನಡೆಸಿರುವ ಪೊಲೀಸರು ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ಮೂವರನ್ನು ಬಂಧಿಸಿದ್ದಾರೆ.

ಸತ್ಯರಾಜ್‌ ತಂಬಿ ಅಣ್ಣ(32) ಕೃಷ್ಣ (43) ಉಪ್ಪೂರು, ಶಕಿಲೇಶ್‌(25) ಬಂಧಿತರು. ಸೆನ್ ಠಾಣಾ ನಿರೀಕ್ಷಕ ರಾಮಚಂದ್ರ ನಾಯಕ್ ತಂಡವು ಈ ಕಾರ್ಯಾಚರಣೆ ನಡೆಸಿದ್ದು ಬಂಧಿತರಿಂದ ಸುಮಾರು 8 ಲಕ್ಷ ಮೌಲ್ಯದ 10 ಕೆಜಿ ಗಾಂಜಾ ವಶ ಪಡಿಸಿಕೊಳ್ಳಲಾಗಿದೆ. ಗಾಂಜಾ ಮಾರಲು ಹೊಂಚು ಹಾಕುತ್ತಿದ್ದ ಆರೋಪಿಗಳಿಂದ ಮೂರು ಮೊಬೈಲ್ ಫೋನ್ ಗಳನ್ನು ವಶಪಡಿಸಿಕೊಳ್ಳಲಾಗಿದ್ದು ಇದರ ಹಿಂದಿರುವ ಇನ್ನಷ್ಟು ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

ಪ್ರಕರಣದ ಸಾರಾಂಶ : ಉಡುಪಿ: ದಿನಾಂಕ 15/11/2024 ರಂದು ರಾಮಚಂದ್ರ ನಾಯಕ್ , ಪೊಲೀಸ್ ನಿರೀಕ್ಷಕರು, ಸೆನ್ ಅಪರಾಧ ಪೊಲೀಸ್ ಠಾಣೆ ಇವರಿಗೆ ಬ್ರಹ್ಮಾವರ ತಾಲೂಕು ಉಪ್ಪೂರು ಗ್ರಾಮದ K.G. ರೋಡ್‌ ಕ್ರಾಸ್‌ ಬಳಿಯಲ್ಲಿ ಹಾದು ಹೋಗಿರುವ N.H. 66 ರ ಪೂರ್ವ ದಿಕ್ಕಿನಲ್ಲಿರುವ ಸರ್ವಿಸ್‌ ರಸ್ತೆಯಲ್ಲಿ ಸತ್ಯರಾಜ್‌ @ ತಂಬಿ ಅಣ್ಣ ಎಂಬಾತನು ವ್ಯಕ್ತಿಗಳಿಬ್ಬರ ಮೂಲಕ ಮುಂಬಾಯಿ ಯಿಂದ ತರಿಸಿಕೊಂಡಿರುವ ಮಾದಕವಸ್ತು ಗಾಂಜಾವನ್ನು ಅವರಿಂದ ಪಡೆಯಲು ಸ್ಥಳಕ್ಕೆ ಬರುತ್ತಿದ್ದಾನೆ ಎಂಬ ಬಗ್ಗೆ ದೊರೆತ ಮಾಹಿತಿ ಮೇರೆಗೆ ದಾಳಿ ನಡೆಸಿ ಸತ್ಯರಾಜ್‌ @ ತಂಬಿ ಅಣ್ಣ , ಕೃಷ್ಣ @ ಕೃಷ್ಣ , ಶಕಿಲೇಶ್‌ ಇವರನ್ನು ದಸ್ತಗಿರಿಗೊಳಿಸಿ ಯಾವುದೇ ಪರವಾನಿಗೆ ಇಲ್ಲದೇ ಕಾನೂನು ಬಾಹಿರವಾಗಿ ಮಾರಾಟ ಮಾಡಲು ಹೊಂದಿದ್ದ 10 ಕಿಲೋ 138 ಗ್ರಾಂ ತೂಕದ ಗಾಂಜಾ ವಶಕ್ಕೆ ಪಡೆದಿದ್ದು, ಆಪಾದಿತರು ಬಳಸಿದ್ದ ಮೊಬೈಲ್ ಪೋನ್-3, ಅಂ ಬ್ಯಾಗ್-2 , ನಗದು ರೂಪಾಯಿ 1570/- ವಶಪಡಿಸಿಕೊಂಡಿರುವುದಾಗಿದೆ. ಆರೋಪಿತರು ಮುಂಬಾಯಿ ನಿವಾಸಿ ಶಿವು @ ಬಾಬಾ ಎಂಬಾತನಿಂ ಗಾಂಜಾ ಖರೀದಿಸಿರುವ ಬಗ್ಗೆ ನುಡಿದಿರುತ್ತಾರೆ. ಈ ಬಗ್ಗೆ ಸೆನ್‌ ಅಪರಾಧ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 80/2024 ಕಲಂ: 8(c), 20 (b) (ii), (B) NDPS Act ರಂತೆ ಪ್ರಕರಣ ದಾಖಲಾಗಿರುತ್ತದೆ.

Leave a Reply

Your email address will not be published. Required fields are marked *