Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಗುಲ್ವಾಡಿಯ ಸರ್ವೋದಯ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಗೆ 115 ವರ್ಷದ ಸಂಭ್ರಮ

ಕುಂದಾಪುರ: ಗುಲ್ವಾಡಿಯ ಸರ್ವೋದಯ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯೂ 115 ವರ್ಷವನ್ನು ಪೂರೈಸಿ ತನ್ನದೇ ಆದ ಇತಿಹಾಸವನ್ನು ಹೊಂದಿ ಇರುವಂತಹ ಶಾಲೆಯಾಗಿದೆ. ಈ ಶಾಲೆಯಲ್ಲಿ ಅದೆಷ್ಟೋ ವಿದ್ಯಾರ್ಥಿಗಳು ಉನ್ನತ ಹುದ್ದೆ, ಡಾಕ್ಟರ್, ಇಂಜಿನಿಯರ್, ಸರ್ಕಾರಿ ಅಧಿಕಾರಿಗಳು, ರಿಪೋರ್ಟರ್, ರಾಜಕಾರಣಿ, ಉದ್ಯಮಿ ಹುಟ್ಟುಹಾಕಿದ ಇತಿಹಾಸವಿದೆ.

ಈಗ ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗುತ್ತಿದ್ದೂ ಶಾಲೆ ಉಳಿಸಿಕೊಳ್ಳಲು ಹರಾಸಾಹಸ ಪಡುತ್ತಿದ್ದಾರೆ. ಮುಂದೊಂದು ದಿನ ಈ ಶಾಲೆ ಕೇವಲ ಎಲೆಕ್ಷನ್ ಬೂತ್ ಆಗಿ ಉಳಿಯುವುದು ಸತ್ಯ. ಈ ಶಾಲೆಯನ್ನು ಉಳಿಸಿ ಬೆಳಸಬೇಕು ಎಂದು ಶ್ರಮಿಸುತ್ತಿರುವಂತಹ ತಂಡಗಳಿಗೆ ಕೋಟಿ ಕೋಟಿ ನಮನ.

ನಾನು ಕೂಡ ಈ ಶಾಲೆಯ ಹಳೆಯ ವಿದ್ಯಾರ್ಥಿ. ನನಗೆ ತಿಳಿದ ಮಟ್ಟಿಗೆ ಹಲವಾರು ಜನ ಮಹನೀಯರುಈ ಶಾಲೆಯಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ ಮಾಡಿದರೆ, ರಾಜ್ಯ ಹಾಗೂ ಹೊರ ರಾಜ್ಯಗಳಲ್ಲಿ ಉನ್ನತ ಸ್ಥಾನಗಳಲ್ಲಿದ್ದಾರೆ. ಇದೀಗ ಈ ಶಾಲೆಯ ಪರಿಸ್ಥಿತಿ ಶೋಚನಿಯ, ಎಲ್ಲರಿಗೂ ತಿಳಿದಂತ ವಿಚಾರ ಶಾಲೆಯನ್ನು ಉಳಿಸಿಕೊಳ್ಳಬೇಕೆಂಬ ನಿಟ್ಟಿನಲ್ಲಿ.  ಸದಾ ಕಾಲ ಹೋರಾಡುತ್ತಿರುವಂತಹ. ಶಾಲೆಯ ಎಸ್ಡಿಎಂಸಿ ತಂಡ ಹಾಗೂ ಕೆಲವು ಹಳೆ ವಿದ್ಯಾರ್ಥಿಗಳು ಶಾಲಾ ಶಿಕ್ಷಕರು ಶಾಲೆಯನ್ನು ಉಳಿಸಿ ಕೊಳ್ಳಬೇಕೆನ್ನುವ ಪಣತೊಟ್ಟು ಶ್ರಮಿಸುತ್ತಿದ್ದಾರೆ. 

ಗ್ರಾಮದ ಮಹನೀಯರೇ, ನಾವೆಲ್ಲರೂ ಕಲಿತ ಶಾಲೆ ಇತಿಹಾಸ ಪ್ರಸಿದ್ಧ ಶಾಲೆಯನ್ನು ಇತಿಹಾಸ ಆಗದ ರೀತಿಯಲ್ಲಿ ಉಳಿಸಿಕೊಳ್ಳುವ ಹೊಣೆಗಾರಿಕೆ ನಮ್ಮದು, ಶಾಲೆಯನ್ನು ಇನ್ನಷ್ಟು ಉತ್ತುಂಗ ಏರಿಸುವ ಹೊಣೆ ನಮ್ಮೆಲ್ಲರ ಕರ್ತವ್ಯ.  ಎಲ್ಲರೂ ಒಂದಾಗಿಶ್ರಮಿಸೋಣ ಶಾಲೆಯ ಇತಿಹಾಸಕ್ಕೆ ಧಕ್ಕೆ ಬಾರದ ಹಾಗೆ,  ಜವಾಬ್ದಾರಿಯಿಂದ ನಾವೆಲ್ಲರೂ ಒಂದಾಗಿ ಶಾಲೆಯ ಸಮಗ್ರ ಅಭಿವೃದ್ಧಿಗೆ ಜೊತೆಯಲ್ಲಿ ಶಾಲೆಯ ಚಟುವಟಿಕೆಯಲ್ಲಿ ಭಾಗವಹಿಸುವ ಎಂದು ಎಲ್ಲಾ ಹಳೆ ವಿದ್ಯಾರ್ಥಿಗಳಿಗೆ, ಸಮಾಜ ಗಣ್ಯರಿಗೆ, ಶಾಸಕರಿಗೆ ಶಾಲೆಯನ್ನು ಉಳಿಸಿ ಬೆಳೆಸೋಣ ಎನ್ನುತ್ತ, ಕನ್ನಡ ಶಾಲೆ ಉಳಿಸಿ ಬೆಳೆಸಿ ಎಲ್ಲರೂ ಕೈ ಜೋಡಿಸಿ 115 ವರ್ಷದ ಸಂಭ್ರಮವನ್ನು ಜನಮಾನದ ನೆನಪಿನಲ್ಲಿ ಅಜರಾಮರವಾಗಿ ಉಳಿಯುವಂತೆ ಮಾಡುವ ಎಲ್ಲರೂ ಕೈ ಜೋಡಿಸಿ.

✍️ ಪುರುಷೋತ್ತಮ್ ಪೂಜಾರಿ, ಕೊಡಪಾಡಿ

Leave a Reply

Your email address will not be published. Required fields are marked *