Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

21ನೇ ಜಾನುವಾರು ಗಣತಿ ಕಾರ್ಯಕ್ರಮ -ಸಂಸದ ಕೋಟ ಶ್ರೀನಿವಾಸ ಪೂಜಾರಿ – ಚಾಲನೆ

ಕೋಟ:ಕೇಂದ್ರ ಸರಕಾರದ ಮಹತ್ವದ ಯೋಜನೆಯಾದ 21ನೇ ಜಾನುವಾರು ಗಣತಿ ಕಾರ್ಯಕ್ರಮ ಉಡುಪಿ ಜಿಲ್ಲಾ ಪಂಚಾಯತ್,ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಉಡುಪಿ ಜಿಲ್ಲೆ ಇವರುಗಳ ಜಂಟಿ ಆಶ್ರಯದಲ್ಲಿ ಶುಕ್ರವಾರ ಸಂಸದ ಕೋಟ ಶ್ರೀನಿವಾಸ ಪೂಜಾರಿಯವರ ಸಮ್ಮುಖದಲ್ಲಿ ಚಾಲನೆಗೊಂಡಿತು.

ಚಾಲನೆ ನೀಡಿ ಮಾತನಾಡಿದ ಸಂಸದ ಕೋಟ ಜಾನುವಾರುಗಳ ವಿವಿಧ ತಳಿಗಳು ಸೇರಿದಂತೆ ಸಾಕು ಪ್ರಾಣಿಗಳ ಗಣತಿ ಯೋಜನೆ ಪೂರ್ಣಪ್ರಮಾಣದಲ್ಲಿ ಕರಾರುವಾಕ್ಕಾಗಿ ಅನುಷ್ಠಾನಕ್ಕೆ ಇಲಾಖೆ ಪಣತೊಟ್ಟಿರುವುದು ಶ್ಲಾಘನೀಯ ,ಅಲ್ಲದೆ ರೇಬೀಸ್ ಮುಕ್ತ ವಾತಾವರಣ ಸೃಷ್ಠಿಗೆ ಯೋಗ್ಯವಾಗಿದೆ,ಸುಸ್ಥಿರ ಸಮಾಜಕಟ್ಟುವ ಕಾಯಕದಲ್ಲಿ ಸರಕಾರದ ಯೋಜನೆಗಳು ಪರಿಣಾಮಕಾರಿಯಾಗಿ ಕಾಯಕಲ್ಪ ನೀಡಲಿದೆ ಕೇಂದ್ರದ ಈ ಎಲ್ಲಾ ಯೋಜನೆಗಳಿಂದ ಪ್ರಾಣಿಗಳ ಅಂಕಿ ಅಂಶಗಳನ್ನು ಅವುಗಳ ನಿಖರ ಮಾಹಿತಿ ದೊರೆಯಲಿದೆ ಎಂದು ಇಲಾಖಾಧಿಕಾರಿಗಳ ಕ್ರೀಯಾಶೀಲತ್ಮಕ ಕಾರ್ಯಕ್ಕೆ ಅಭಿನಂದನೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಬ್ರಹ್ಮಾವರ ತಾಲೂಕಿನ ಮುಖ್ಯ ಪಶುವೈದ್ಯಾಧಿಕಾರಿಗಳಾದ ಡಾ.ಉದಯ್ ಕುಮಾರ್ ಶೆಟ್ಟಿ , ಡಾ. ಪ್ರದೀಪ್ ಕುಮಾರ್ ಎನ್ ಕೆ, ಡಾ.ಅನಿಲ್ ಕುಮಾರ್ ,ಡಾ ಸೂರಜ್, ಡಾ.ಮಂಜುನಾಥ್ ಅಡಿಗ, ಹಾಗೂ ಎಣಿಕೆದಾರರಾದ ಸ್ವಾತಿ ಮತ್ತು ಸುಜಾತ ಉಪಸ್ಥಿತರಿದ್ದರು.

21ನೇ ಜಾನುವಾರು ಗಣತಿ ಕಾರ್ಯಕ್ರಮ ಉಡುಪಿ ಜಿಲ್ಲಾ ಪಂಚಾಯತ್,ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಉಡುಪಿ ಜಿಲ್ಲೆ ಇವರುಗಳ ಜಂಟಿ ಆಶ್ರಯದಲ್ಲಿ ಶುಕ್ರವಾರ ಸಂಸದ ಕೋಟ ಶ್ರೀನಿವಾಸ ಪೂಜಾರಿಯವರ ಸಮ್ಮುಖದಲ್ಲಿ ಚಾಲನೆಗೊಂಡಿತು. ಬ್ರಹ್ಮಾವರ ತಾಲೂಕಿನ ಮುಖ್ಯ ಪಶುವೈದ್ಯಾಧಿಕಾರಿಗಳಾದ ಡಾ.ಉದಯ್ ಕುಮಾರ್ ಶೆಟ್ಟಿ , ಡಾ. ಪ್ರದೀಪ್ ಕುಮಾರ್ ಎನ್ ಕೆ, ಡಾ.ಅನಿಲ್ ಕುಮಾರ್ ಮತ್ತಿತರರು ಇದ್ದರು.

Leave a Reply

Your email address will not be published. Required fields are marked *